ಕನ್ನಡ ಚಿತ್ರರಂಗದಲ್ಲಿ ತನ್ನದೇ ಸ್ಟೈಲ್ನಲ್ಲಿ ಫಿಲ್ಮ್ ಮೇಕಿಂಗ್ ಹಾಗೂ ಡೈರೆಕ್ಷನ್ನಿಂದ ಹೆಸರಾಗಿರುವ ನಿರ್ದೇಶಕ ಜೋಗಿ ಪ್ರೇಮ್. ಸದ್ಯಕ್ಕೆ ಪ್ರೇಮ್ , 'ಏಕ್ ಲವ್ ಯಾ' ಸಿನಿಮಾ ಜಪ ಮಾಡುತ್ತಿದ್ದಾರೆ. ಪ್ರೇಮ್ ಪತ್ನಿ ರಕ್ಷಿತ ಅವರ ಸಹೋದರ ರಾಣಾ ಅವರನ್ನು 'ಏಕ್ ಲವ್ ಯಾ' ಸಿನಿಮಾ ಹೀರೋ ಆಗಿ ಕನ್ನಡ ಇಂಡಸ್ಟ್ರಿಗೆ ಪರಿಚಯ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಬಹುತೇಕ ಶೂಟಿಂಗ್ ಮುಗಿಸಿರುವ 'ಏಕ್ ಲವ್ ಯಾ' ಸಿನಿಮಾ ಬಗ್ಗೆ ಹಾಗೂ ಪತಿ ಪ್ರೇಮ್ ಬಗ್ಗೆ ನಿರ್ಮಾಪಕಿ ರಕ್ಷಿತ ಮೊದಲ ಬಾರಿಗೆ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ರಕ್ಷಿತ ಪ್ರಕಾರ ಪ್ರೇಮ್ ಬಹಳ ಟೆನ್ಷನ್ ಡೈರೆಕ್ಟರ್ ಅಂತೆ. ಮಾತಿನ ಪ್ರಕಾರ ಇದೇ ಮೊದಲ ಬಾರಿಗೆ, ಅದೂ ಕೂಡಾ ಸರಿಯಾದ ಟೈಮ್ಗೆ ಸಿನಿಮಾದ ಮೋಷನ್ ಪಿಕ್ಚರ್ ಬಿಡುಗಡೆ ಮಾಡಲು ಪ್ರೇಮ್ ರೆಡಿಯಾಗುತ್ತಿದ್ದಾರೆ ಎಂದು ರಕ್ಷಿತ ಹೇಳಿದ್ದಾರೆ. ಅದರಂತೆ ಫೆಬ್ರವರಿ 8 ರಂದು 'ಏಕ್ ಲವ್ ಯಾ' ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫೆಬ್ರವರಿ 14 ರಂದು ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ ಎಂದು ರಕ್ಷಿತ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಚಿತ್ರದ ಆಡಿಯೋ 81 ಲಕ್ಷ ಮೊತ್ತಕ್ಕೆ ಎ2 ಆಡಿಯೋ ಸಂಸ್ಥೆ ಖರೀದಿಸಿತ್ತು. ಯುವ ನಟ ರಾಣಾ ಜೊತೆ ಕೊಡಗಿನ ಕುವರಿ ರೀಷ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಡಿಂಪಲ್ ಕ್ವಿನ್ ರಚಿತಾ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಹಿರಿಯ ನಟ ಶಶಿಕುಮಾರ್ , ಚರಣ್ ರಾಜ್ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಮತ್ತು ಹಿತೇಶ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.