ETV Bharat / sitara

ಇಂದ್ರಜಿತ್​​ ಲಂಕೇಶ್​​​​​​​​​​​​​​​​​​​​​​​​​​ ಮಾಹಿತಿ ಆಧಾರದ ಮೇರೆಗೆ ತನಿಖೆ ಚುರುಕು...ಯಾರಿಗೆ ಸಿಗಲಿದೆ ನೋಟೀಸ್​​​...?

author img

By

Published : Sep 1, 2020, 8:17 AM IST

ಸ್ಯಾಂಡಲ್​​ವುಡ್​​ನ ಕೆಲವರು ಡ್ರಗ್ಸ್​ ದಂಧೆ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದಾಗಿನಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಹಿತಿ ಆಧಾರದ ಮೇರೆಗೆ ಅವರು ಹೆಸರು ಹೇಳಿದ ಎಲ್ಲರಿಗೂ ಸಿಸಿಬಿ ಅಧಿಕಾರಿಗಳು ನೋಟೀಸ್​ ನೀಡಲು ನಿರ್ಧರಿಸಿದ್ದಾರೆ.

Indrajit lankesh
ಇಂದ್ರಜಿತ್​​ ಲಂಕೇಶ್​​​​​​​​​​​​​​​​​​​​​​​​​​

ಮಾದಕ ದ್ರವ್ಯ ದಂಧೆಯಲ್ಲಿ ಸ್ಯಾಂಡಲ್​​​ವುಡ್​ನ ಸುಮಾರು 15ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ನಿನ್ನೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಅಧಿಕಾರಿಗಳಿಗೆ ನೀಡಿರುವ ಹೇಳಿಕೆ ಆಧಾರದ ಮೇರೆಗೆ ಎಲ್ಲರಿಗೂ ನೋಟೀಸ್ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ನಿನ್ನೆ ಸತತ 5 ಗಂಟೆಗಳ ಕಾಲ ಇಂದ್ರಜಿತ್ ಲಂಕೇಶ್ ವಿಚಾರಣೆಯಲ್ಲಿ ಭಾಗಿಯಾಗಿದ್ದು ಮಾದಕ ದ್ರವ್ಯದಲ್ಲಿ ಭಾಗಿಯಾಗಿರುವವರ ಎದೆಯಲ್ಲಿ ನಡುಕ ಉಂಟಾಗಿದೆ. ವಿಚಾರಣೆಯಲ್ಲಿಇಂದ್ರಜಿತ್ ಲಂಕೇಶ್ ಅಶ್ಲೀಲ ವಿಡಿಯೋ ಹಾಗೂ ದಾಖಲೆಗಳ ಸಹಿತ ಹಲವಾರು ಪುಟಗಳ ಹೇಳಿಕೆಯನ್ನು ನೀಡಿದ್ದಾರೆ. ಹಾಗೆ 9 ನಟಿಯರು 6 ಮಂದಿ ನಟರ ಹೆಸರು ಹೇಳಿ ತನಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಸಮಯದಲ್ಲಿ ನನಗೆ ರಕ್ಷಣೆ ಬೇಕು. ಮಾಧ್ಯಮದಲ್ಲಿ ಹೇಳಿಕೆ ಕೊಟ್ಟ ನಂತರ ಬಹಳಷ್ಟು ಕರೆಗಳು ಬರುತ್ತಿವೆ. ಹೀಗಾಗಿ ಕೊಟ್ಟ ಮಾಹಿತಿ ಗೌಪ್ಯವಾಗಿಡಬೇಕು ಎಂದು ಇಂದ್ರಜಿತ್ ಲಂಕೇಶ್ ಮನವಿ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಕೂಡಾ ಗೌಪ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರತಿಷ್ಠಿತ ಹೋಟೆಲ್​​​ಗಳು, ಪಬ್ ಹಾಗೂ ಫಾರ್ಮ್​ಹೌಸ್​​​​ನಲ್ಲಿ ಕೆಲವರು ಡ್ರಗ್ಸ್​​ ಸೇವಿಸುತ್ತಿದ್ದಾರೆ. ಈ ಪಾರ್ಟಿಯಲ್ಲಿ ನಟ ನಟಿಯರು ಭಾಗಿಯಾಗುತ್ತಿದ್ದರೆಂದು ಇಂದ್ರಜಿತ್ ಲಂಕೇಶ್ ಮಾಹಿತಿ ನೀಡಿದ್ದಾರೆ. ಇದೇ ಆಧಾರದ ಮೆರೆಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಎಸಿಪಿ ಗೌತಮ್ ಹಾಗೂ ಇನ್ಸ್​​​ಪೆಕ್ಟರ್​​​​​​​​​ ನೇತೃತ್ವದಲ್ಲಿ ತನಿಖೆ ನಡೆಸಲು‌ ಮುಂದಾಗಿದ್ದಾರೆ.

ಇನ್ನು ನೋಟೀಸ್ ಪಡೆದವರು ವಿಚಾರಣೆಗೆ ಹಾಜರಾಗಿ ಸಿಸಿಬಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಒಂದು ವೇಳೆ ರಕ್ತದಲ್ಲಿ ಡ್ರಗ್ಸ್ ಮಾದರಿ ಇದೆಯಾ ಎಂದು ಪರೀಕ್ಷಿಸಲು ಕೂಡಾ ಒಪ್ಪಬೇಕಾದ ಅನಿವಾರ್ಯವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.