ಪ್ರೇಮಲೋಕದ ಸರ್ದಾರ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಮಗಳು ಗೀತಾಂಜಲಿ ಮದುವೆ ತಯಾರಿ ಬಗ್ಗೆ ಕ್ರೇಜಿಸ್ಟಾರ್ ಮಾಧ್ಯಮಗಳ ಜೊತೆ ಮನಬಿಚ್ಚಿ ಮಾತನಾಡಿದರು. ಸಿನಿಮಾದಲ್ಲಿ ಹೀರೋಯಿನ್ಗಳಿಗೆ ಆರ್ಡರ್ ಮಾಡುತ್ತಿದ್ದ ಕನಸುಗಾರ ರವಿಚಂದ್ರನ್ಗೆ, ಅವರ ಲೈಫ್ಲ್ಲಿ ಆರ್ಡರ್ ಮಾಡುವ ವಿಶೇಷ ವ್ಯಕ್ತಿ ಕೂಡ ಇದ್ದಾರೆ. ಅವ್ರು ಬೇರೆ ಯಾರು ಅಲ್ಲ ಕ್ರೇಜಿ ಸ್ಟಾರ್ ಮುದ್ದಿನ ಮಗಳು ಗೀತಾ.
ನಿಜ ನನ್ನ ಮಗಳು ಥೇಟ್ ನನ್ನ ತರಾನೇ. ಅವಳಿಗೆ ಬೇಕು ಅಂದಿದ್ದು ಬೇಕು ಅಷ್ಟೇ. ಸಿನಿಮಾದಲ್ಲಿ ಹೀರೋಯಿನ್ಸ್ ನನ್ನ ಮಾತು ಕೇಳ್ತಿದ್ರು. ಆದ್ರೆ ಮಗಳು ಕೇಳಲ್ಲ. ಅವಳೊಬ್ಬಳೇ ನನಗೆ ಆರ್ಡರ್ ಮಾಡೋದು ಅಂತಾ ಮಗಳು ಮತ್ತು ತಮ್ಮ ನಡುವಿನ ಬಾಂಧವ್ಯದ ಬಗ್ಗೆ ರವಿಚಂದ್ರನ್ ಹೇಳಿದ್ದಾರೆ. ಇದೇ ವೇಳೆ, ರವಿಮಾಮ ಮಗಳಿಗಾಗಿ ಕಂಪೋಸ್ ಮಾಡಿದ ಹಾಡು ಹುಟ್ಟಿದ್ದು ಹೇಗೆ ಅನ್ನೋದನ್ನ ಕೂಡ ಬಿಚ್ಚಿಟ್ಟಿದ್ದಾರೆ. ಮಗಳ ಮದುವೆಗೆಂದು ನಾನು ಅರ್ಧ ಗಂಟೇಲಿ ಹಾಡು ಬರೆದು, ಕಂಪೋಸ್ ಮಾಡಿದ್ದೆ. ಈ ಹಾಡು ಕೇಳಿದಾಗ ಮೊದಲು ಸುಮ್ಮನೆ ಇದ್ಲು. ನಾನು ಇಲ್ಲದೇ ಇದ್ದಾಗ ಅತ್ತಿದ್ದಾಳೆ. ಅವರ ಅಮ್ಮನೂ ಅತ್ತಿದ್ದಾಳೆ. ಮಗಳು ಹೋಗ್ತಿರೋದು ನನ್ನ ಕಣ್ಣಲ್ಲಿ ನೀರು ತರಿಸುತ್ತಿದೆ. ನನ್ಮ ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಹಂಚಿಕೊಳ್ಳಲ್ಲ. ಬರೀ ಸುಖ ಅಷ್ಟೇ ಹಂಚಿಕೊಂಡಿದ್ದೀನಿ ಎಂದರು.
ಇನ್ನೂ ಮಗಳನ್ನ ತಂಗಿ ಮಗನಿಗೆ ಕೋಡ್ಬೇಕು ಅಂತ ಇದ್ರು. ಆದರೆ ನನಗೆ ಇಷ್ಟ ಇರಲಿಲ್ಲ. ಸಂಬಂಧದಲ್ಲಿ ಮದುವೆ ಆದ್ರೆ ಚೆನ್ನಾಗಿರಲ್ಲ ಅಂತಾ ನಾನೇ ಈ ನಿರ್ಧಾರಕ್ಕೆ ಬಂದೆ. ಹೀಗಾಗಿ ನನ್ನ ಸಂಬಂಧಿಕರು ಬೇಜಾರ್ ಮಾಡ್ಕೊಂಡಿದ್ದಾರೆ. ಒಳ್ಳೆ ಫ್ಯಾಮಿಲಿಗೆ ಕೋಡ್ಬೇಕು ಅನ್ನೋದು ನನ್ನ ಆಸೆ ಅಷ್ಟೇ, ದುಡ್ಡು ಇರೋರಿಗೆ ಕೋಡ್ಬೇಕು ಅಂತಲ್ಲ. ಆಕೆಗೆ ಹೊಸ ಜೀವನ ಸ್ಟಾರ್ಟ್ ಆಗುತ್ತೆ, ಆ ಜೀವನ ಸುಖವಾಗಿರಬೇಕಷ್ಟೇ ಅಂತಾ ಕ್ರೇಜಿಸ್ಟಾರ್ ಹೇಳಿದ್ದಾರೆ.