ETV Bharat / sitara

ರಜಿನಿ ಪಕ್ಷ ಕಟ್ಟೋದು ಫಿಕ್ಸ್​​​: ಹಾಗಾದ್ರೆ ಸ್ಟಾರ್​​ ನಟರ ರಾಜಕೀಯ ಪಕ್ಷಗಳ ಸುತ್ತ ಒಂದು ನೋಟ - rajini political party news

ತಮ್ಮ ಸಿನಿ ಜೀವನದ ಹೊರತಾಗಿ ಭಾರತದ ಯಾವೆಲ್ಲ ಖ್ಯಾತ ನಟರು ರಾಜಕೀಯ ಪ್ರವೇಶಿಸಿದ್ದಾರೆ. ಅದ್ರಲ್ಲೂ ಯಾವ ಯಾವ ನಟರು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ಕಟ್ಟಿ ಚುನಾವಣೆ ಎದುರಿಸಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

Which of the Indian actors has established a political party?
ರಜಿನಿ ಪಕ್ಷ ಕಟ್ಟೋದು ಫಿಕ್ಸ್​​​: ಹಾಗಾದ್ರೆ ಸ್ಟಾರ್​​ ನಟರ ರಾಜಕೀಯ ಪಕ್ಷಗಳ ಸುತ್ತ ಒಂದು ನೋಟ
author img

By

Published : Dec 3, 2020, 10:49 PM IST

Updated : Dec 3, 2020, 11:05 PM IST

ಹಲವು ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡುತ್ತಿದ್ದ ತಮಿಳು ಸೂಪರ್​​ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶಿಸುವುದು ದೃಢವಾಗಿದೆ. ಡಿಸೆಂಬರ್​ 31ಕ್ಕೆ ತಮ್ಮ ಹೊಸ ಪಕ್ಷ ಘೋಷಿಸುವುದಾಗಿ ಇಂದು ಹೇಳಿದ್ದಾರೆ. ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಜಿನಿಕಾಂತ್, ನಾನು ನೀಡುವ ಭರವಸೆಗಳಿಂದ ಹಿಂದೆ ಸರಿಯಲ್ಲ. ರಾಜಕೀಯ ಬದಲಾವಣೆ ಅಗತ್ಯ. ಸಮಯದ ಅವಶ್ಯಕತೆ ತುಂಬಾ ಇದೆ. ಈಗ ಇದನ್ನು ಮಾಡದಿದ್ದರೆ, ಅದನ್ನು ಎಂದಿಗೂ ಮಾಡಲಾಗುವುದಿಲ್ಲ. ಇದಕ್ಕಾಗಿ, ಜನರು ನನ್ನೊಂದಿಗೆ ನಿಲ್ಲಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಇದು ರಜಿನಿಕಾಂತ್​​​​​ ನಿಲುವಾಗಿದೆ. ಹಾಗಾದ್ರೆ ತಮ್ಮ ಸಿನಿ ಜೀವನದ ಹೊರತಾಗಿ ಭಾರತದ ಯಾವೆಲ್ಲ ಖ್ಯಾತ ನಟರು ರಾಜಕೀಯ ಪ್ರವೇಶಿಸಿದ್ದಾರೆ. ಅದ್ರಲ್ಲೂ ಯಾವ ಯಾವ ನಟರು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ಕಟ್ಟಿ ಚುನಾವಣೆ ಎದುರಿಸಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

ಎನ್​​.ಟಿ.ರಾಮರಾವ್​​ : ತೆಲುಗು ಚಿತ್ರರಂದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಎನ್​​ಟಿಆರ್​​​ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಹೆಸರು ಮಾಡಿದ್ದಾರೆ. ಇವರು ಸಿನಿ ರಂಗದ ಜೊತೆ ಜೊತೆಗೆ 1982ರಲ್ಲಿ ತೆಲುಗು ದೇಶಂ ಪಾರ್ಟಿ ಕಟ್ಟಿ, ಅದೇ ಪಕ್ಷದಿಂದ ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಎಮ್​​.ಜಿ.ಆರ್.​​ : ಮಾರುದುರ್ ಗೋಪಾಲನ್ ರಾಮಚಂದ್ರನ್ ದಕ್ಷಿಣ ಭಾರತದ ಮತ್ತೊಬ್ಬ ಖ್ಯಾತ ಚಿತ್ರನಟ. 90ರ ದಶಕದ ಸಮಯದಲ್ಲಿ ತಮಿಳುನಾಡಿನಲ್ಲಿ ಅಬ್ಬರಿಸಿದ ವ್ಯಕ್ತಿತ್ವ ಇವರದು. ಎಮ್​ ಜಿಆರ್​​​ ಅವರನ್ನು 'ಮಕ್ಕಲ್ ತಿಲಗಂ' ಎಂದು ಗೌರವಿಸಲಾಗುತ್ತಿತ್ತು. ಇವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಸಿ.ಎನ್.ಅನ್ನಾದುರೈ ಸ್ಥಾಪಿಸಿದ್ದ ಡಿಎಂಕೆ ಪಕ್ಷದಿಂದ. ಸಿ.ಎನ್.ಅನ್ನಾದುರೈ ನಿಧನದ ನಂತ್ರ ತಮ್ಮದೇ ರಾಜಕೀಯ ಪಕ್ಷವಾದ ಎಐಎಡಿಎಂಕೆಯನ್ನು ಕಟ್ಟಿದರು. ಎಂಜಿಆರ್ 1977-1987 ರ ನಡುವೆ 10 ವರ್ಷಗಳ ಕಾಲ ತಮಿಳುನಾಡಿನ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ.

Which of the Indian actors has established a political party?
ಎಮ್​​ಜಿಆರ್​​

ಚಿರಂಜೀವಿ : ತೆಲುಗಿನ ಹೆಸರಾಂತ ನಟ ಜಿರಂಜೀವಿ 2008 ರಲ್ಲಿ ತಮ್ಮ “ಪ್ರಜಾ ರಾಜ್ಯ” ಪಕ್ಷವನ್ನು ಸ್ಥಾಪಿಸಿದರು. ಈ ಪಕ್ಷ ಕಟ್ಟಿದ ಮೂಲ ಉದ್ದೇಶ ಸಾಮಾಜಿಕ ನ್ಯಾಯ ಎಂದು ಜಿರಂಜೀವಿಯೇ ಹೇಳಿದ್ದರು. 2009 ರಲ್ಲಿ ನಡೆದ ಆಂಧ್ರ ಪ್ರದೇಶದ 295 ವಿಧಾನಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಪಕ್ಷ ಗೆದ್ದುಕೊಂಡಿತು. ನಂತ್ರ ಕಾಂಗ್ರೆಸ್ ಪಕ್ಷದ ಜೊತೆ ಪ್ರಜಾ ರಾಜ್ಯ ಪಕ್ಷವನ್ನು ವಿಲೀನ ಮಾಡಿದ್ದರು. ಒಂದು ವರ್ಷ ಕಾಂಗ್ರೆಸ್​​ ಜೊತೆ ಮೈತ್ರಿ ಬಳಿಕ 2012ರಲ್ಲಿ ಚಿರಂಜೀವಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು. ನಂತ್ರ 2012 ಏಪ್ರಿಲ್​​ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತ್ರ ರಾಜ್ಯ ಸಚಿವಾಲಯದಲ್ಲಿ ಅವಲಂಬಿತ ಉಸ್ತುವಾರಿಯಾಗಿ ಪ್ರವಾಸೋದ್ಯಮ ಖಾತೆಯನ್ನು ನಿರ್ವಹಿಸಿದ್ದಾರೆ. ಇದಾದ ನಂತ್ರ 2014ರಿಂದ ಈಚೆಗೆ ರಾಜಕೀಯದಿಂದ ದೂರ ಉಳಿದಿದ್ದಾರೆ.

ಚಿರಂಜೀವಿ

ವಿಜಯ ಕಾಂತ್​​ : ನಟ ವಿಜಯಕಾಂತ್ 2006 ರಲ್ಲಿ ಡಿಎಂಡಿಕೆ ಪಕ್ಷವನ್ನು ಸ್ಥಾಪಿಸಿ 2011 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡರು. ನಂತ್ರ ವಿಧಾನ ಸಭಾ ಚುನಾವಣೆಯಲ್ಲಿ 41 ಸ್ಥಾನಗಳಲ್ಲಿ 29 ಸ್ಥಾನಗಳನ್ನು ಗೆದ್ದರು. ಆಶ್ಚರ್ಯ ಎಂದರೆ ಡಿಎಂಕೆಗಿಂತ ಡಿಎಂಡಿಕೆ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ನಂತ್ರ 2016 ರ ಚುನಾವಣೆಯಲ್ಲಿ ಡಿಎಂಡಿಕೆ ಪಕ್ಷವು ತನ್ನ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಂಡಿತು.

ಪವನ್​ ಕಲ್ಯಾಣ್​ : ಪವನ್​​ ಕಲ್ಯಾಣ್​​ ಕೂಡ ತೆಲುಗಿನ ಮತ್ತೊಬ್ಬ ಸ್ಟಾರ್​ ನಟ. ಇವರು 2014ರಲ್ಲಿ ಜನಸೇನಾ ಪಕ್ಷವನ್ನು ಕಟ್ಟಿ, ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2019ರ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಜನಸೇನಾ ಪಕ್ಷ ಸ್ಪರ್ಧಿಸಿತ್ತು. ಎರಡು ಕಡೆ ಸ್ಪರ್ಧಿಸಿದ್ದ ಪವನ್​ ಕಲ್ಯಾಣ್​​​ ಎರಡೂ ಕ್ಷೇತ್ರಗಳಲ್ಲಿಯೂ ಸೋತರು. 2019ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕ್ಷೇತ್ರಗಳ ಪೈಕಿ ಜನಸೇನಾ ಕೇವಲ ಒಂದೇ ಒಂದು ಕ್ಷೇತ್ರವನ್ನು ಗೆದ್ದುಕೊಂಡಿದೆ ಅಷ್ಟೇ.

ಪವನ್​ ಕಲ್ಯಾಣ್​​

ಕಮಲ್​ ಹಾಸನ್​​ : ಬಹುಭಾಷಾ ನಟ ಕಮಲ್​ ಹಾಸನ್​​ ಮಕ್ಕಲ್​​ ನೀಧಿ ಮೈಯಮ್​​ ಎಂಬ ಪಕ್ಷವನ್ನು ಕಟ್ಟಿದ್ದಾರೆ. ಈ ಪಕ್ಷವನ್ನು 2018ರಲ್ಲಿ ಸ್ಥಾಪಿಸಿರುವ ಕಮಲ್​​​, ಕಳೆದ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಅಷ್ಟೇನು ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ.

ಕಮಲ್​ ಹಾಸನ್​​

ಉಪೇಂದ್ರ : ಕನ್ನಡದ ನಟ, ನಿರ್ದೇಶಕ ಉಪೇಂದ್ರ ಉತ್ತಮ ಪ್ರಜಾಕೀಯ ಪಾರ್ಟಿ ಕಟ್ಟಿದ್ದಾರೆ, ಇವರು ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ತಮ್ಮ ಗುರುತನ್ನು ಆಟೋ ರಿಕ್ಷಾ ಮಾಡಿದ್ದರು.

ಉಪೇಂದ್ರ

ನಂದಮೂರಿ ಹರಿಕೃಷ್ಣ : 60ರ ದಶಕದಲ್ಲಿ ತೆಲುಗು ಸಿನಿಮಾ ರಂಗದಲ್ಲಿ ಬಾಲ ನಟನಾಗಿ ಮಿಂಚಿದ್ದ ಹರಿಕೃಷ್ಣ ಅಣ್ಣ ತೆಲುಗು ದೇಶಮ್​​ ಪಾರ್ಟಿಯನ್ನು 1999 ಕಟ್ಟಿದ್ದಾರೆ. ಇದು ಆಂಧ್ರಪ್ರದೇಶದ ಪ್ರಾದೇಶಿಕ ರಾಜಕೀಯ ಪಕ್ಷವಾಗಿತ್ತು. ಇನ್ನು ಹರಿಕೃಷ್ಣ 2018ರಲ್ಲಿ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದರು.

ವಿಜಯಶಾಂತಿ : ಇವರೂ ಕೂಡ ಬಹುಭಾಷೆಯಲ್ಲಿ ನಟಿಸಿದ್ದು, ಕನ್ನಡ, ತಮಿಳು, ತೆಲುಗು ಮಲಯಾಳಂ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ವಿಜಯಶಾಂತಿ ಕೂಡ ರಾಜಿಕೀಯ ಪಕ್ಷ ಕಟ್ಟಿದ್ದು, ಅದಕ್ಕೆ ತಲ್ಲಿ ತೆಲಂಗಾಣ ಎಂದು ನಾಮಕರಣ ಮಾಡಿದ್ದಾರೆ. ನಂತ್ರ 2009ರಲ್ಲಿ ಬೆಂಬಲದ ಕೊರತೆಯಿಂದ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಜೊತೆ ವಿಲೀನಗೊಳಿಸಿದ್ದರು. ನಂತ್ರ ಟಿಆರ್​​ಎಸ್​​ ಪಕ್ಷದಿಂದ ಹೊರ ಬಂದು ಕಾಂಗ್ರೆಸ್​​ಗೆ ಸೇರಿಕೊಂಡರು. 2014ರಲ್ಲಿ ಕಾಂಗ್ರೆಸ್​​ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. 2018 ರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಸ್ಟಾರ್​​​​​​ ಪ್ರಚಾರಕರಾಗಿ ಮತ್ತು ತೆಲಂಗಾಣ ಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಸಲಹೆಗಾರರಾಗಿ ವಿಜಯಶಾಂತಿಯನ್ನು ನೇಮಕ ಮಾಡಿದ್ದರು. ಸದ್ಯ ವಿಜಯ ಶಾಂತಿ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಜಯಶಾಂತಿ

Last Updated : Dec 3, 2020, 11:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.