ETV Bharat / sitara

ದಿಶಾ - ಟೈಗರ್​ ನಡುವಿನ ಸಂಬಂಧ ಸ್ನೇಹಾನಾ.. ಪ್ರೀತೀನಾ..? - ಹೆರೋಪಂತಿ 2

ನಟ ಟೈಗರ್​ ಶ್ರಾಫ್​​ ಹಾಗೂ ದಿಶಾ ಪಟಾನಿ ನಡುವಿನ ಸಂಬಂಧ ಏನಿರಬಹುದು ಎಂಬ ಕುತೂಹಲ ಬಹುತೇಕರಲ್ಲಿ ಕಾಡ್ತಿದೆ. ಅದಕ್ಕೆ ಉತ್ತರ ಇಲ್ಲಿದೆ.

ದಿಶಾ-ಟೈಗರ್​
ದಿಶಾ-ಟೈಗರ್​
author img

By

Published : Jul 24, 2021, 1:08 PM IST

ಹೈದರಾಬಾದ್: ನಟ ಟೈಗರ್​ ಶ್ರಾಫ್​ ಮತ್ತು ದಿಶಾ ಪಟಾನಿ ನಡವಿನ ರೊಮ್ಯಾನ್ಸ್​ ಸದ್ಯ ಗುಟ್ಟಾಗಿ ಉಳಿದಿಲ್ಲ. ಈವರೆಗೂ ನಾವಿಬ್ಬರೂ ಬೆಸ್ಟ್​ ಫ್ರೆಂಡ್​ ಅಂತಾ ಟೈಗರ್ ಹೇಳುತ್ತಿದ್ದರೆ, ದಿಶಾ ಸ್ನೇಹವನ್ನೂ ಮೀರಿದ ಸಂಬಂಧ ನಮ್ಮದು ಎಂದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಎಷ್ಟೇ ಪ್ರಯತ್ನ ಪಟ್ಟರೂ ಟೈಗರ್​ ಇನ್ನೂ ಇಂಪ್ರೆಸ್ ಆಗಿಲ್ಲ ಅಂತಾ ಹೇಳಿರುವ ದಿಶಾ, ಇಬ್ಬರಲ್ಲಿ ಒಬ್ಬರಾದರೂ ಮೌನ ಮುರಿದು ಮಾತಾಡಬೇಕಿದೆ ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ದಿಶಾ, ನಮ್ಮಿಬ್ಬರದ್ದು ಸ್ನೇಹ ಮೀರಿದ ಅನುಬಂಧ. ಶ್ರಾಫ್​ನನ್ನು ಮೆಚ್ಚಿಸಲು ನಿರಂತರವಾಗಿ ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಈಗಾಗಲೇ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಜಿಮ್ನಾಸ್ಟಿಕ್ ಕಲಿತಿದ್ದೇನೆ. ಇದೆಲ್ಲವನ್ನೂ ಅವನಿಗೆ ಹೇಳಿದ್ರೂ, ಪ್ರಯೋಜನವಾಗಿಲ್ಲ. ನನ್ನಿಂದ ಇನ್ನೇನು ಮಾಡೋಕೆ ಸಾಧ್ಯ ಎಂದು ಬೇಸರದ ಮಾತನ್ನಾಡಿದ್ದಾರೆ.

ಈ ಹಿಂದೆಯೇ ಅವರು ಹಲವು ಸಾರಿ ಡೇಟಿಂಗ್​ ಹೋಗಿದ್ದಾರೆ. ಒಟ್ಟಾಗಿ ಬರ್ತಡೇ ಸೆಲಬ್ರೇಶನ್ ಮಾಡಿದ್ದಾರೆ. ಆದರೂ, ಅವರ ನಡುವಿನ ಸಂಬಂಧಕ್ಕೆ ಪ್ರೀತಿ ಎಂಬ ಹಣೆಪಟ್ಟಿ ಕಟ್ಟಿಲ್ಲ ಎಂಬುದು ವಿಶೇಷ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟೈಗರ್​ ತಂದೆ ಜಾಕಿ ಶ್ರಾಫ್, ದಿಶಾ ಹಾಗೂ ನನ್ನ ಮಗ ಶ್ರಾಫ್​​ 25 ನೇ ವಯಸ್ಸಲ್ಲಿ ಡೇಟಿಂಗ್ ಆರಂಭಿಸಿದ್ರು. ಅವರಿಬ್ಬರು ಅತ್ಯುತ್ತಮ ಸ್ನೇಹಿತರು. ಶ್ರಾಫ್​ನಿಗೆ ಮೊದಲ ಆದ್ಯತೆ ಅವನ ಕೆಲಸ. ಬಳಿಕ ಉಳಿದದ್ದು. ಇದನ್ನು ನಾನು ತುಂಬಾ ಸಾರಿ ಗಮನಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ನಾವೀಗ ನಿಮ್ಮ ಪತಿ ಅರೆಸ್ಟ್​ ನ್ಯೂಸ್​ ನೋಡ್ಬೇಕಾ..ನಿಮ್ಮ ಸಿನಿಮಾ ನೋಡ್ಬೇಕಾ?: ನೆಟ್ಟಿಗರಿಂದ ಟ್ರೋಲ್​ಗೊಳಗಾದ ಶಿಲ್ಪಾ ಶೆಟ್ಟಿ

ಟೈಗರ್, ಹೆರೋಪಂತಿ 2 ಚಿತ್ರದ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ರೆ, ದಿಶಾ ಅವರು ಜಾನ್ ಅಬ್ರಹಾಂ ಜೊತೆಗೆ ಏಕ್ ವಿಲನ್ ರಿಟರ್ನ್ಸ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.