ETV Bharat / sitara

ಆಯುಷ್ಮಾನ್‌ ಖುರಾನ್‌ ಬಂದಿದ್ದು ಗಾಯನದ ಕನಸು ಹೊತ್ತು : ಪಾಲಾಶ್‌ ಸೇನ್ ಬಣ್ಣನೆ‌ - ayushmann khurrana old picture

ಗಾಯಕ, ಸಂಗೀತ ಸಂಯೋಜಕ ಪಾಲಾಶ್‌ ಸೇನ್‌, ನಟ ಕಂ ಸಿಂಗರ್‌ ಆಯುಷ್ಮಾನ್‌ ಖುರಾನ್‌ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು, ಖುರಾನ್‌ ನಿನ್ನ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಎಂದು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

when-ayushmann-was-an-aspiring-singer-palash-sen-shares-17-year-old-pic
ಆಯುಷ್ಮಾನ್‌ ಖುರಾನ್‌ ಬಂದಿದ್ದು ಗಾಯನದ ಕನಸು ಹೊತ್ತು : ಪಾಲಾಶ್‌ ಸೇನ್ ಬಣ್ಣನೆ‌
author img

By

Published : Jun 13, 2020, 2:41 PM IST

Updated : Jun 13, 2020, 3:31 PM IST

ಮುಂಬೈ: ಆಯುಷ್ಮಾನ್‌ ಖುರಾನ್‌ ಸದ್ಯ ಬಾಲಿವುಡ್‌ನ ಜನಪ್ರಿಯ ನಟ. ಆದರೆ, ಈತ ಮೊದ್ಲು ಒಳ್ಳೆ ಸಿಂಗರ್‌ ಆಗಬೇಕು ಎಂಬ ಕನಸು ಕಟ್ಟಿಕೊಂಡಿದ್ದವರು ಎಂದು ಯೂಫೋರಿಯಾ ಖ್ಯಾತಿಯ ಗಾಯಕ ಪಾಲಾಶ್ ಸೇನ್, ಆಯುಷ್ಮಾನ್‌ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆಯುಷ್ಮಾನ್‌ ಕುರಾನ್‌ ಸಿಂಗರ್‌ ಆಗಬೇಕು ಎಂದು ಒಮ್ಮೆ ಆಡಿಷನ್‌ಗೆ ಬಂದಿದ್ದ ಎಂದು ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ನಟ ಕಂ ಸಿಂಗರ್ ಆಯುಷ್ಮಾನ್‌ ಖುರಾನ್‌ ಬಗ್ಗೆ ಹಳೆಯ ಅನುಭವಗಳನ್ನು ಹಂಚಿಕೊಂಡಿರುವ ಪಾಲಾಶ್‌ ಸೇನ್‌, ಯಂಗ್‌ಸ್ಟರ್‌ ಖುರಾನ್‌ ರಿಯಾಲಿಟಿ ಷೋಗಳಲ್ಲಿ ಹಾಡುತ್ತಿದ್ದರು. 2003ರಲ್ಲಿ ಕಾರ್ಯಕ್ರಮವೊಂದರಲ್ಲಿ ಹಾಡಬೇಕು ಎಂದು ಯುವಕ ಆಯುಷ್ಮಾನ್‌ ಬಂದಿದ್ದ. ಆ ಕಾರ್ಯಕ್ರಮಕ್ಕೆ ನಾನು ಜಡ್ಜ್‌ ಆಗಿದ್ದೆ. ಅಲ್ಲಿ ಆತ ಗೆಲುವು ಸಾಧಿಸಲಿಲ್ಲ. ಆದರೆ, ನನ್ನ ಹೃದಯ ಗೆದ್ದಿದ್ದ. ಆತನಿಗೆ ನನ್ನ ಪ್ರೀತಿ ಎಂದೆಂದಿಗೂ ಇರುತ್ತದೆ ಎಂದಿದ್ದಾರೆ.

ಈತನಿಗೆ ನನ್ನ ಒಂದೇ ಒಂದು ಸಲಹೆ. ಅದು ಹಾರ್‌ ನಾ ಮಾರ್‌ ನಾ (ಮಾಡು ಇಲ್ಲವೆ ಮಡಿ). ಇದೀಗ ಈತನ ಹೊಸ ಸಿನಿಮಾ ಬಿಡುಗಡೆಯಾಗುತ್ತಿದೆ. ದೇಶದಲ್ಲಿ ಹೆಚ್ಚು ಜನ ಇಷ್ಟ ಪಡುವ ಮತ್ತು ಹೆಚ್ಚು ಟ್ಯಾಲೆಂಟ್‌ ಇರುವ ನಟನಾಗಿದ್ದಾನೆ. ಆಯುಷ್ಮಾನ್‌ ಇಂದು ನಿನ್ನ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತಿದೆ. 17 ವರ್ಷಗಳ ಹಿಂದೆ ನಿನ್ನ ಇಷ್ಟ ಪಡುತ್ತಿದ್ದೆ. ನಾನಷ್ಟೇ ಅಲ್ಲ ಪ್ರತಿಯೊಬ್ಬರು ಇಷ್ಟ ಪಡುತ್ತಾರೆ. ಅಮೆಜಾನ್‌ ಫ್ರೈಮ್‌ನಲ್ಲಿ ಗುಲಾಬೆೋ ಸಿತಾಬೋ ಸಿನಿಮಾವನ್ನು ನೋಡಿ ಎಂದು ಸಿನಿ ಪ್ರಿಯರಿಗೆ ಸಲಹೆ ನೀಡಿದ್ದಾರೆ.

ನಿನ್ನೆಯಷ್ಟೇ ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಆಯುಷ್ಮಾನ್‌ ಖುರಾನ್‌ ಅವರ ಗುಲಾಬೋ ಸಿತಾಬೋ ಸಿನಿಮಾ ಬಿಡುಗಡೆಯಾಗಿದೆ. ಸುಜಿತ್‌ ಸಿರ್ಕಾರ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

Last Updated : Jun 13, 2020, 3:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.