'ನೀಲಕಂಠ' ಚಿತ್ರದಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದ ನಮಿತಾ ನಿಮಗೆ ನೆನಪಿರಬಹುದು. ಈ ಸಿನಿಮಾ ನಂತರ ನಮಿತಾ ದರ್ಶನ್ ಜೊತೆ 'ಇಂದ್ರ' ಹಾಗೂ 'ಬೆಂಕಿ ಬಿರುಗಾಳಿ' ಚಿತ್ರದಲ್ಲಿ ನಟಿಸಿದರು. ಕನ್ನಡದಲ್ಲಿ ನಟಿಸಿದ್ದು 3 ಚಿತ್ರಗಳಾದರೂ ಈ ಗುಜರಾತಿ ಚೆಲುವೆಗೆ ಅನೇಕ ಅಭಿಮಾನಿಗಳಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ನಮಿತಾ ನಟಿಸಿದ್ದಾರೆ. 2017ರಲ್ಲಿ ವೀರೇಂದ್ರ ಅವರನ್ನು ವರಿಸಿರುವ ನಮಿತಾ ಈಗ ಗೃಹಿಣಿಯಾಗಿ ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.
- " class="align-text-top noRightClick twitterSection" data="
">
ನಮಿತಾ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಗಳಿಸಿದರು. ಅದೇ ರೀತಿ ಅವರ ತೂಕ ಹೆಚ್ಚಾದ ಕಾರಣದಿಂದ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡರು. ಎಷ್ಟೇ ಪ್ರಯತ್ನಿಸಿದರೂ ತೂಕ ಇಳಿಸಲು ಸಾಧ್ಯವಾಗದ ನಮಿತಾ ಈಗ 3 ತಿಂಗಳಲ್ಲಿ ಸುಮಾರು 20 ಕಿಲೋ ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಈ ವಿಚಾರವಾಗಿ ನಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. "ಒತ್ತಡವನ್ನು ಹೇಗೆ ಎದುರಿಸಬೇಕೆಂದು ಅರಿವು ಮೂಡಿಸುವ ಉದ್ದೇಶದಿಂದ ನಾನು ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದೇನೆ. ಸುಮಾರು 9-10 ವರ್ಷಗಳ ಹಿಂದೆ ನಾನು ಈಗಿಗಿಂತಲೂ ಬಹಳ ದಪ್ಪ ಇದ್ದೆ. ಆ ಸಮಯದಲ್ಲಿ ನಾನು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೆ. ರಾತ್ರಿ ಸ್ವಲ್ಪ ಕೂಡಾ ನಿದ್ರೆ ಬರುತ್ತಿರಲಿಲ್ಲ. ಹೆಚ್ಚು ಜಂಕ್ ಫುಡ್ ತಿನ್ನುತ್ತಿದ್ದೆ. ದಿನಾಲೂ ಪಿಜ್ಜಾ ಆರ್ಡರ್ ಮಾಡುತ್ತಿದ್ದೆ."
- " class="align-text-top noRightClick twitterSection" data="
">
ಇದನ್ನೂ ಓದಿ: ಸಿಂಬು ನಟನೆಯ 'ರಿವೈಂಡ್' ಟೀಸರ್ ರಿಲೀಸ್ ಮಾಡಿದ ಕಿಚ್ಚ
"ಅನಿಯಮಿತ ಆಹಾರ ಸೇವನೆಯಿಂದ ಹಾಗೂ ವ್ಯಾಯಾಮ ಮಾಡದ ಕಾರಣ 97 ಕಿಲೋ ತೂಕ ಹೆಚ್ಚಾಯ್ತು. ಮದ್ಯ ಸೇವನೆಯಿಂದ ನಾನು ದಪ್ಪಗಾಗುತ್ತಿದ್ದೇನೆ ಎಂದು ಹಲವರು ತಪ್ಪು ತಿಳಿದಿದ್ದರು. ಆದರೆ ಥೈರಾಯ್ಡ್ ಹಾಗೂ ಪಿಸಿಒಡಿ ಸಮಸ್ಯೆಯಿಂದ ನಾನು ದಪ್ಪ ಆಗುತ್ತಿದ್ದೇನೆ ಎಂಬ ಸತ್ಯ ನನಗೆ ಮಾತ್ರ ತಿಳಿದಿತ್ತು. ಸುಮಾರು 5 ವರ್ಷಗಳ ನಂತರ ನಾನು ಯೋಗ ತರಬೇತಿಗೆ ಸೇರಿದೆ. ಧ್ಯಾನ ಮಾಡುವುದರಿಂದ ಒತ್ತಡದಿಂದ ಹೊರ ಬಂದೆ. ತೂಕ ಕೂಡಾ ಕಳೆದುಕೊಳ್ಳುತ್ತಿದ್ದೇನೆ. ಈಗ ನಾನು ಶಾಂತಿ ನೆಮ್ಮದಿಯಿಂದ ಇದ್ದೇನೆ. ನೀವು ಏನನ್ನು ಸುತ್ತ ಮುತ್ತ ಹುಡುಕುತ್ತೀರೋ ಅದು ನಿಮ್ಮೊಳಗೇ ಇರುತ್ತದೆ ಎಂಬ ವಿಚಾರವನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಪೋಸ್ಟ್ ಹಂಚಿಕೊಂಡಿದ್ದೇನೆ" ಎಂದು ನಮಿತಾ ಬರೆದುಕೊಂಡಿದ್ದಾರೆ.