ETV Bharat / sitara

ಯಶ್​​, ರಾಧಿಕಾ ಪಂಡಿತ್​​​​​​​​​​​​​ ಮದುವೆ ಪಾರ್ಟಿಯಲ್ಲಿ ಯಶ್​​​​​​ ಕುರಿತು ಅಂಬರೀಶ್ ಹೇಳಿದ್ದೇನು? - undefined

ರೆಬಲ್ ಸ್ಟಾರ್ ಅಂಬರೀಶ್​​​ಗೆ ಚಿತ್ರರಂಗ ಮಾತ್ರವಲ್ಲ ಸಾಕಷ್ಟು ಜನರೊಂದಿಗೆ ಉತ್ತಮ ಒಡನಾಟವಿತ್ತು. ಅವರಲ್ಲಿ ಯಶ್ ಕೂಡಾ ಒಬ್ಬರು. ಯಶ್​​​, ರಾಧಿಕಾ ಮದುವೆಗೆ ಹೋಗಿದ್ದಾಗ ಯಶ್ ಬಗ್ಗೆ ಅಂಬರೀಶ್​ ಮಾತನಾಡಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ.

ಅಂಬರೀಶ್ ಜೊತೆ ಯಶ್, ರಾಧಿಕಾ
author img

By

Published : Apr 10, 2019, 6:37 PM IST

ರೆಬಲ್‌ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲಾ ಅಗಲಿ ಐದು ತಿಂಗಳು ತುಂಬುತ್ತಿದೆ. ಆದರೆ ಅಂಬರೀಶ್ ನಿಧನದ ನಂತರ ಚಿತ್ರರಂಗ ಅಲ್ಲದೆ , ರಾಜ್ಯ ರಾಜಕಾರಣದ ಸಂಪೂರ್ಣ ಚಿತ್ರಣ ಕೂಡಾ ಬದಲಾಗಿದೆ. ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣಾ ಸ್ವತಂತ್ರ ಅಭ್ಯರ್ಥಿಯಾಗಿ ಅಂಬರೀಶ್ ಪತ್ನಿ ಸುಮಲತಾ ರಾಜಕೀಯ ಎಂಟ್ರಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಯಶ್​​, ರಾಧಿಕಾ ಮದುವೆ ಸಮಾರಂಭದಲ್ಲಿ ಅಂಬರೀಶ್​​

ಆದರೆ, ಅಂಬರೀಶ್ ಇಲ್ಲದ ಸಮಯದಲ್ಲಿ ಸುಮಲತಾ ಪರವಾಗಿ ದರ್ಶನ್ ಹಾಗೂ ಯಶ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅಂಬರೀಶ್ ಜೊತೆಗೆ ಸ್ಯಾಂಡಲ್​ವುಡ್​​ನ ಸಾಕಷ್ಟು ಮಂದಿಗೆ ಉತ್ತಮ ಬಾಂಧವ್ಯ ಇತ್ತು. ದರ್ಶನ್ ಅಂಬಿ ಅವರನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಇನ್ನು ಯಶ್​​​​​​ ಹಾಗೂ ರಾಧಿಕಾ ದಂಪತಿಗೆ ಕೂಡಾ ಅಂಬರೀಶ್ ಎಂದರೆ ಎಲ್ಲಿಲ್ಲದ ಗೌರವ. ರಾಧಿಕಾ ಪಂಡಿತ್​​​​​​​​​​​​​​​​​​​​​​​​​​ ಗರ್ಭಿಣಿಯಾಗಿದ್ದಾಗ ಅಂಬರೀಶ್ ಯಶ್​​​​ ಮಗುವಿಗೆಂದೇ ವಿಶೇಷವಾಗಿ ತೊಟ್ಟಿಲೊಂದನ್ನು ಗಿಫ್ಟ್ ಮಾಡಿದ್ದರು.

ಇನ್ನು ಯಶ್, ರಾಧಿಕಾ ಮದುವೆಯಂದು ಅಂಬರೀಶ್ ಮಾತನಾಡಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಅವರ ನಡುವೆ ಎಂತಹ ಬಾಂಧವ್ಯ ಇತ್ತು ಎಂಬುದು ತಿಳಿಯುತ್ತದೆ. 'ಯಾರೂ ಕೂಡಾ ದೇವರಿಗೆ ಅಪ್ಲಿಕೇಶನ್ ಹಾಕಿ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಕೇಳಿಕೊಂಡು ಬರುವುದಿಲ್ಲ. ಗೌಡನಾಗಿ ಹುಟ್ಟಿದ್ದೀನಿ ಅಷ್ಟೇ, ಆದರೆ ಒಂದು ಗ್ರಾಮೀಣ ಪ್ರದೇಶದಿಂದ ಬಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ಯಶ್ ನಮ್ಮನ್ನೆಲ್ಲಾ ಅವರ ಮದುವೆ ಸಮಾರಂಭಕ್ಕೆ ಕರೆದಿರುವುದು ಗ್ರೇಟ್ ' ಎಂದು ಯಶ್ ಅವರ ಗುಣಗಾನ ಮಾಡಿದ್ದಾರೆ ಅಂಬಿ.

ವಿಡಿಯೋ ನೋಡಿದ ಅಭಿಮಾನಿಗಳು ಅಂಬಿ ಇನ್ನೂ ನಮ್ಮೊಂದಿಗೆ ಇರಬಾರದಿತ್ತಾ ಎಂದು ಬೇಸರ ಮಾಡಿಕೊಳ್ಳುತ್ತಿರುವುದಂತೂ ನಿಜ.

ಯಶ್ ಮದುವೆ ಪಾರ್ಟಿಯಲ್ಲಿ ಅಂಬರೀಶ್ ಯಶ್ ಗೆ ಹೇಳಿದ್ದೇನು!!

ರೆಬಲ್‌ ಸ್ಟಾರ್ ಅಂಬರೀಶ್ ನಮ್ಮೆನೆಲ್ಲಾ ಅಗಲಿ ಏಳು ತಿಂಗಳು ತುಂಬುತ್ತಿದೆ. ಆದ್ರೆ ಅಂಬರೀಶ್ ನಿಧನ ನಂತ್ರ ಚಿತ್ರರಂಗ ಅಲ್ಲದೆ , ರಾಜ್ಯ ರಾಜಕಾರಣದ ಚಿತ್ರಣ ಸಂಪೂರ್ಣ ಬದಲಾಗಿದೆ..ಸದ್ಯ ಲೋಕಸಭಾ ಚುನಾವಣಾ ಸ್ವತಂತ್ರ ಅಭ್ಯರ್ಥಿಯಾಗಿ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ರಾಜಕೀಯ ಎಂಟ್ರಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ..ಭಟ್ ಅಂಬರೀಶ್ ಇಲ್ಲದ ಟೈಮಲ್ಲಿ ಸುಮಲತಾ ಅಂಬರೀಶ್ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಸ್ಟಾರ್ ಯಶ್ ಬಿರುಸಿನ ಪ್ರಚಾರ ಮಾಡ್ತಾ ಇದ್ದಾರೆ..ಸದ್ಯ ಅಂಬರೀಶ್ ಹಾಗು ಯಶ್ ನಡುವಿನ ಸಂಬಂಧ ತಂದೆ ಮಗನ ಸಂಬಂಧಂತೆ ಇತ್ತು ಅನ್ನೋದಿಕ್ಕೆ, ಯಶ್ ಮದುವೆ ಪಾರ್ಟಿ ಯಲ್ಲಿ ಯಶ್ ಬಗ್ಗೆ ಅಂಬರೀಶ್ ಮಾತನಾಡಿರೋದು ನೋಡಿದ್ರೆ ಗೊತ್ತಾಗುತ್ತೆ..ಯಾರು ಅಪ್ಲಿಕೇಶನ್ ಹಾಕಿ ಇಂತಹ ಜಾತಿಯಲ್ಲಿ ಹುಟ್ಟು ಬೇಕು ಅಂತಾ ಬಂದಿರೊಲ್ಲ, ಗೌಡನಾಗಿ ಹುಟ್ಟಿದ್ದೀವಿ ಅಷ್ಟೇ, ಆದ್ರೆ ಒಂದು ಹಳ್ಳಿಯಿಂದ ಬಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಬಗ್ಗೆ ಅಂಬಿ ಗುಣಗಾನ ಮಾಡಿದ್ರು..ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಅಂಬರೀಶ್ ಜೊತೆಗೆ ಯಶ್ ಎಂತಹ ಬಾಂಧವ್ಯ ಅನ್ನೋದು ಗೊತ್ತಾಗುತ್ತೆ..

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.