ಮಾರ್ಚ್ 11 ರಂದು ರಾಬರ್ಟ್ ಚಿತ್ರವನ್ನು ಆಂಧ್ರ , ತೆಲಂಗಾಣದಲ್ಲಿ ಬಿಡುಗಡೆ ಮಾಡಲು ವಿರೋಧ ಒಡ್ಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಬೇಸರ ವ್ಯಕ್ತಪಡಿಸಿದ್ದು ದರ್ಶನ್ ಇಂದು ಫಿಲ್ಮ್ ಚೇಂಬರ್ಗೆ ತೆರಳಿ ಈ ವಿಚಾರವಾಗಿ ಮಾತುಕಥೆ ನಡೆಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ತೆಲುಗು ಚಿತ್ರರಂಗದ ವಿರುದ್ಧ ಗರಂ ಆದ ದರ್ಶನ್...ಕಾರಣ ಏನು...?
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್.ಎಂ. ಸುರೇಶ್ 'ರಾಬರ್ಟ್' ಸಿನಿಮಾವನ್ನು ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲು ಅಡ್ಡಿ ಉಂಟುಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದಿದೆ. ಈ ಬಗ್ಗೆ ಕೂಲಂಕುಶವಾಗಿ ಮಾತನಾಡಲು ದರ್ಶನ್ ಹಾಗೂ ಚಿತ್ರತಂಡ ಶೀಘ್ರದಲ್ಲೇ ಫಿಲ್ಮ್ ಚೇಂಬರ್ಗೆ ಬರುತ್ತಿದ್ದಾರೆ. ಸಮಸ್ಯೆ ಏನು ಎನ್ನುವುದರ ಬಗ್ಗೆ ದರ್ಶನ್ ಹೇಳುತ್ತಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಜೈರಾಜ್ ಬಂದ ನಂತರ ಈ ವಿಚಾರವಾಗಿ ಚರ್ಚಿಸಿ ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ ಎಂದು ಎನ್.ಎಂ. ಸುರೇಶ್ ಹೇಳಿದ್ದಾರೆ.