ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಕೆಜಿಎಫ್ ಭಾಗ 2 ಶೂಟಿಂಗ್ನಲ್ಲಿ ಬ್ಯೂಸಿಯಿದ್ದಾರೆ. ಸದ್ಯಕ್ಕೆ ಚಿತ್ರತಂಡ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೀಡು ಬಿಟ್ಟಿದ್ದು ಕೆಜಿಎಫ್ 2 ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ.
- " class="align-text-top noRightClick twitterSection" data="">
ಕೆಲವು ದಿನಗಳ ಹಿಂದೆ ಯಶ್ ಬ್ರೌನ್ ಬ್ಲೇಜರ್ ಹಾಕಿಕೊಂಡಿರುವ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಈ ಫೋಟೋದಲ್ಲಿ ಯಶ್ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದು, ಕೈನಲ್ಲಿ ದಂಡವೊಂದನ್ನು ಹಿಡಿದು, ಆಸೀನರಾಗಿರುವ 90ರ ದಶಕದ ರಾಯಲ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋವನ್ನು ಎಲ್ಲರೂ ಇದು ಕೆಜಿಎಫ್ ಚಿತ್ರದ ಸ್ಟಿಲ್ ಎಂದುಕೊಂಡಿದ್ದುಂಟು. ಆದರೆ ಆ ಪೋಟೋ ಕೆಜಿಎಫ್ ಚಿತ್ರದ್ದಲ್ಲ. ಯಶ್ ಈ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು ಖಾಸಗಿ ಕಂಪನಿಯೊಂದರ ಜಾಹೀರಾತಿಗಾಗಿ. ಆ ಜಾಹೀರಾತಿನ ಮೇಕಿಂಗ್ ವಿಡಿಯೋ ಈಗ ರಿವೀಲ್ ಆಗಿದ್ದು ಯಶ್ 3-4 ಕಾಸ್ಟ್ಯೂಮ್ನಲ್ಲಿ ಫೋಟೋಶೂಟ್ ಮಾಡಿಸಿರುವ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದು.