'ಪೊಗರು' ಸಿನಿಮಾ ನೋಡಿ ಬಂದವರದ್ದು ಒಂದೇ ಪ್ರಶ್ನೆ. ಚಿತ್ರದಲ್ಲಿ ತಾರಾ ಅವರ ಪಾತ್ರವೇನು ಎಂಬುದು..? ಏಕೆಂದರೆ, ಚಿತ್ರದ ಒಂದು ದೃಶ್ಯದಲ್ಲಿ ತಾರಾ ಅವರನ್ನು ಎರಡು ಬಾರಿ ತೋರಿಸಲಾಗುವುದು. ಒಂದು ಚಿಕ್ಕ ಸಂಭಾಷಣೆ ಕೂಡಾ ಇದೆ. ಅದಕ್ಕಾಗಿ ಅಷ್ಟು ದೊಡ್ಡ ನಟಿಯನ್ನು ಕರೆತರಬೇಕಿತ್ತಾ ಎಂದು ಅನೇಕರು ಪ್ರಶ್ನಿಸಿದ್ದರು.
ಇಷ್ಟಕ್ಕೂ ತಾರಾ ಅವರ ಪಾತ್ರವೇನಾಗಿತ್ತು...? ಅವರದ್ದೇನು ಧನಂಜಯ್ ಅವರ ತಾಯಿ ಪಾತ್ರವಾ..? ಅಥವಾ ಅತ್ತೆ ಪಾತ್ರವಾ..? ಎಂಬ ಹಲವು ಸಂಶಯಗಳಿದ್ದವು. ಆದರೆ, ಈ ಯಾವ ಪ್ರಶ್ನೆಗಳಿಗೂ ಉತ್ತರ ಇಲ್ಲ. ಹೊಸ ವಿಚಾರ ಎಂದರೆ ಇನ್ಮುಂದೆ ಚಿತ್ರಮಂದಿರದಲ್ಲಿ ಪ್ರದರ್ಶನವಾಗುವ ಹೊಸ 'ಪೊಗರು' ಚಿತ್ರದಲ್ಲಿ ತಾರಾ ಅವರ ಪಾತ್ರವೇ ಇರುವುದಿಲ್ಲವಂತೆ."ಚಿತ್ರದಲ್ಲಿ ನನ್ನ ಪಾತ್ರ ಚಿಕ್ಕದಿರಬಹುದು. ಆದರೆ ಚಿತ್ರತಂಡದವರು ಬಂದು ಕೇಳಿದಾಗ, ಇಲ್ಲ ಎನ್ನಲಾಗಲಿಲ್ಲ. ಇದು ನನ್ನ ಚಿತ್ರವಿದ್ದಂತೆ, ನನ್ನ ಕುಟುಂಬದಂತೆ. ಆದ್ದರಿಂದ ಪಾತ್ರ ಚಿಕ್ಕದಾದರೂ ನಟಿಸಿದೆ.ಚಿತ್ರದ ಕೆಲವೊಂದು ದೃಶ್ಯಗಳ ಬಗ್ಗೆ ಆಕ್ಷೇಪಣೆ ಕೇಳಿಬಂದ ಹಿನ್ನೆಲೆ ಇರುವ ಎರಡು ಶಾಟ್‍ಗಳನ್ನು ಕೂಡಾ ಎಡಿಟ್ ಮಾಡಿದ್ದಾರೆ. ಹಾಗಾಗಿ ನಾನು ಚಿತ್ರದಲ್ಲಿ ಇರುವುದಿಲ್ಲ" ಎಂದು ತಾರಾ ಹೇಳಿದ್ದಾರೆ.
ಇದನ್ನೂ ಓದಿ: ಸಿನಿಮಾ ಶೂಟಿಂಗ್ ಮುಗಿಸಿ ಹೊರಡುವಾಗ ದೀಪಿಕಾ ಪಡುಕೋಣೆ ಬ್ಯಾಗ್ ಹಿಡಿದೆಳೆದ ಅಭಿಮಾನಿ: ವಿಡಿಯೋ
ಇದಕ್ಕೂ ಮುನ್ನ ತಾರಾ ಅವರ ಪಾತ್ರ ದೊಡ್ಡದಿತ್ತಂತೆ. ಆದರೆ, ಸಿನಿಮಾ ಅವಧಿ ದೊಡ್ಡದಾಗಿದ್ದರಿಂದ ತಾರಾ ದೃಶ್ಯಗಳನ್ನು ಕತ್ತರಿಸಿ ಕೊನೆಗೆ ಎರಡು ಶಾಟ್ಗಳು ಉಳಿದಿತ್ತಂತೆ. ಪ್ರೇಕ್ಷಕರ ಪ್ರಶ್ನೆ ಹೆಚ್ಚಾಗುತ್ತಿದ್ದಂತೆ ಕೊನೆಗೂ ಇದ್ದ ಪಾತ್ರವನ್ನೂ ಎಡಿಟ್ ಮಾಡಲಾಗಿದೆ.