ETV Bharat / sitara

ಮಹೇಶ್ ಬಾಬು ಚಿತ್ರದಿಂದ ಹೊರಬಂದ ಜಗಪತಿಬಾಬು! ಕಾರಣ ಏನು? - undefined

ಅನಿರೀಕ್ಷಿತ ಪರಿಸ್ಥಿತಿಯ ಕಾರಣ ನಾನು 'ಸರಿಲೇರು ನೀಕೆವರು' ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ತೆಲುಗು ಹಿರಿಯ ನಟ ಜಗಪತಿ ಬಾಬು ಟ್ವಿಟ್ಟರ್​ನಲ್ಲಿ ಹೇಳಿಕೊಂಡಿದ್ದಾರೆ. ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಕೂಡಾ ಹೇಳಿದ್ದಾರೆ.

ಮಹೇಶ್ ಬಾಬು, ಜಗಪತಿಬಾಬು
author img

By

Published : Jul 21, 2019, 6:05 PM IST

ಪ್ರಿನ್ಸ್ ಮಹೇಶ್ ಬಾಬು ಅಭಿನಯದ 26 ನೇ ಸಿನಿಮಾ 'ಸರಿಲೇರು ನೀಕೆವರು' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರಸ್ತುತ ಚಿತ್ರತಂಡ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದು ಮಹೇಶ್​ಬಾಬು ಈ ಚಿತ್ರದಲ್ಲಿ ಆರ್ಮಿ ಆಫೀಸರ್ ಆಗಿ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ನಟಿಸಬೇಕಿದ್ದ ಟಾಲಿವುಡ್ ಹಿರಿಯ ನಟ ಜಗಪತಿ ಬಾಬು ಚಿತ್ರದಿಂದ ಹೊರ ಬಂದಿದ್ದಾರೆ ಎಂಬ ಮಾತು ಕೆಲವು ದಿನಗಳಿಂದ ಕೇಳಿಬಂದಿತ್ತು. ನಿರ್ದೇಶಕ ಅನಿಲ್ ರಾವಿಪೂಡಿ ಇದೆಲ್ಲಾ ರೂಮರ್, ಜಗಪತಿ ಬಾಬು ನಮ್ಮ ಚಿತ್ರದಿಂದ ಹೊರ ಹೋಗಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಈ ಚಿತ್ರದಿಂದ ಹೊರಬಂದಿರುವುದಾಗಿ ಸ್ವತ: ಜಗಪತಿಬಾಬು ತಮ್ಮ ಟ್ವಿಟ್ಟರ್ ಮೂಲಕ ಹೇಳಿಕೊಂಡಿದ್ದಾರೆ.

'ಸಿನಿಮಾ ಎನ್ನುವುದು ನನ್ನ ಕುಟುಂಬ ಇದ್ದ ಹಾಗೆ, ನನ್ನ ಕುಟುಂಬದ ಬಗ್ಗೆ ಮಾತನಾಡುವುದು ನನಗೆ ಇಷ್ಟ ಇಲ್ಲ. 33 ವರ್ಷಗಳ ಈ ಸಿನಿಮಾ ಜೀವನದಲ್ಲಿ ಕ್ಲಾರಿಫಿಕೇಶನ್ ನೀಡುವ ಸಂಧರ್ಭ ಬಂದಿರಲಿಲ್ಲ ಇದೇ ಮೊದಲ ಬಾರಿ ಈ ರೀತಿ ಪರಿಸ್ಥಿತಿ ಬಂದಿದೆ. 'ಸರಿಲೇರು ನೀಕೆವರು' ಸಿನಿಮಾದಿಂದ ನಾನು ಹೊರಬಂದಿದ್ದೇನೆ ಎಂಬ ಮಾತು ಬಹಳ ದಿನಗಳಿಂದ ಕೇಳಿಬರುತ್ತಿದೆ. ಆ ಮಾತು ನಿಜ ಅಲ್ಲ, ಈಗಲೂ ನನಗೆ ಆ ಪಾತ್ರ ಎಂದರೆ ಬಹಳ ಇಷ್ಟ. ಆ ಸಿನಿಮಾಗಾಗಿ ನಾನು ಇತರ ಸಿನಿಮಾಗಳನ್ನು ಕೂಡಾ ಬಿಡಲು ಸಿದ್ಧನಿದ್ದೇನೆ. ಆದರೆ ಕೆಲವೊಂದು ಅನಿರೀಕ್ಷಿತ ಪರಿಸ್ಥಿತಿ ಕಾರಣ ನಾನು ಸಿನಿಮಾದಲ್ಲಿ ನಟಿಸುತ್ತಿಲ್ಲ. ಆ ಸಿನಿಮಾವನನ್ನು ನಾನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇಡೀ ಚಿತ್ರತಂಡಕ್ಕೆ ಆಲ್​​ ದಿ ಬೆಸ್ಟ್​ ' ಎಂದು ಹೇಳಿದ್ದಾರೆ.

Intro:Body:

jaggu babu

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.