ETV Bharat / sitara

ಬಜೆಟ್​ನಲ್ಲಿ ಚಿತ್ರರಂಗದ ಬೇಡಿಕೆಗಳ ಬಗ್ಗೆ ಫಿಲ್ಮ್​ ಚೇಂಬರ್ ಅಧ್ಯಕ್ಷರು ಹೇಳಿದ್ದೇನು?

ಬೇರೆ ಭಾಷೆ ಸಿನಿಮಾಗಳ ಹಾವಳಿಯಿಂದ ನಿರ್ಮಾಪಕರಿಗೆ ಸಮಸ್ಯೆಗಳು ಇವೆ. ಹಾಗಾಗಿ ನಿರ್ಮಾಪಕರು, ಕಟ್ಟುತ್ತಿರುವ ಜಿಎಸ್​ಟಿ ರೂಪದ ಹಣವನ್ನು ಆಯಾ ಸಿನಿಮಾದ ನಿರ್ಮಾಪಕರಿಗೆ ಮರು ಪಾವತಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಹೇಳಿದರು.

author img

By

Published : Mar 6, 2021, 6:27 PM IST

ಅಧ್ಯಕ್ಷ
ಅಧ್ಯಕ್ಷ

ಬೆಂಗಳೂರು: 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಸರ್ಕಾರ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿವಿಧ ಇಲಾಖೆಗಳ ಜೊತೆಗೆ ಪೂರ್ವಭಾವಿ ಸಭೆ ನಡೆಸಿದ್ದಾರೆ‌. ಅದೇ ರೀತಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಮುಖ್ಯ ಸಂಸ್ಥೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು, ಕೆಲ ನಿರ್ಮಾಪಕರು, ನಿರ್ದೇಶಕರು, ಫಿಲ್ಮ್ ಚೇಂಬರ್ ಪದಾಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಲಾಗಿದೆ.

ಈ ವರ್ಷದ ಬಜೆಟ್ ನಿರೀಕ್ಷೆ ಏನು ಎಂಬುದರ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಈಟಿವಿ ಭಾರತ ಜೊತೆಗೆ ಮಾತನಾಡಿದ್ದು, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರನಗರಿ ನಿರ್ಮಾಣದ ಬೇಡಿಕೆಯು ಮುಖ್ಯವಾಗಿ ಬಜೆಟ್​ನಲ್ಲಿ ಹೆಚ್ಚು ಗಮನ ಸೆಳೆಯುವ ವಿಷಯವಾಗಿದ್ದು, ಈ ವರ್ಷ ಕೂಡ ಇದರ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗಿದೆ ಎಂದು ಜಯರಾಜ್ ಹೇಳಿದರು.

ಬೇರೆ ಭಾಷೆ ಸಿನಿಮಾಗಳ ಹಾವಳಿಯಿಂದ ನಿರ್ಮಾಪಕರಿಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ ನಿರ್ಮಾಪಕರು, ಕಟ್ಟುತ್ತಿರುವ ಜಿಎಸ್​ಟಿ ರೂಪದ ಹಣವನ್ನು ಆಯಾ ಸಿನಿಮಾದ ನಿರ್ಮಾಪಕರಿಗೆ ಮರು ಪಾವತಿಸುವಂತೆ ಕೇಳಿಕೊಳ್ಳಲಾಗಿದೆ ಎಂದರು.

ಚಿತ್ರರಂಗದ ನಿರೀಕ್ಷೆ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷರ ಬೇಡಿಕೆಗಳೇನು?

ಕನ್ನಡ ಚಿತ್ರರಂಗದಲ್ಲಿ ಸ್ವಂತ ಮನೆ ಇಲ್ಲದ ನಿರ್ದೇಶಕರಿಗೆ, ನಿರ್ಮಾಪಕರಿಗೆ, ತಂತ್ರಜ್ಞರಿಗೆ ವಸತಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ 5 ಎಕರೆ ಜಮೀನು ಕೊಟ್ಟರೆೆ ಫಿಲ್ಮ್​ ಚೇಂಬರ್ ವತಿಯಿಂದ ವಸತಿ ಕಲ್ಪಿಸುವುದಾಗಿ ಜಯರಾಜ್ ಹೇಳಿದರು.

ಕೊರೊನಾ ಸಂದರ್ಭದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ನೀರಿನ ಶುಲ್ಕ, ವಿದ್ಯುತ್ ಶುಲ್ಕ, ಕಮರ್ಷಿಯಲ್ ಟ್ಯಾಕ್ಸ್ ರಾಜ್ಯ ಸರ್ಕಾರ ವಸೂಲಿ ಮಾಡಿತ್ತು. ಅದನ್ನು ಮನ್ನಾ ಮಾಡುವಂತೆ ಸರ್ಕಾರದ ಗಮನಕ್ಕೆ ತಂದಿರುವುದಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.