ವೀಕೆಂಡ್ ವಿತ್ ರಮೇಶ್ ಸೀಸನ್ 4 ಶೀಘ್ರದಲ್ಲೇ ಆರಂಭವಾಗುತ್ತಿದೆ. ಈ ಸೀಜನ್‌ನಲ್ಲಿ ಸಾಧಕರ ಹಾಟ್ ಸೀಟ್ ಮೇಲೆ ಯಾರು ಯಾರು ಕೂರುತ್ತಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಆರಂಭವಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಸೀಸನ್ 4 ನ್ನು ಆರಂಭಿಸಲು ನಟ ರಮೇಶ್ ಅರವಿಂದ್ ಉತ್ಸುಕರಾಗಿದ್ದಾರೆ. ಈಗಾಗಲೇ ಮೂರು ಸೀಸನ್ಗಳಲ್ಲಿ ಪ್ರೇಕ್ಷಕರ ಮನ ಗೆದ್ದಿರುವ ಈ ಕಾರ್ಯಕ್ರಮದ ಬಗ್ಗೆ ಈ ಬಾರಿ ಪ್ರೇಕ್ಷಕರ ಕುತೂಹಲ ಇಮ್ಮಡಿಯಾಗಿದೆ. ಕಳೆದ ಮೂರು ಸೀಸನ್ಗಳಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ಅಂಬರೀಶ್, ಹಿರಿಯ ನಟಿ ಭಾರತಿ, ಜಗ್ಗೇಶ್, ಅರ್ಜುನ್ ಜನ್ಯಾ, ಪ್ರಕಾಶ್ ರೈ, ವಿಜಯ್ ಪ್ರಕಾಶ್, ದರ್ಶನ್, ಜಯಂತ್ ಕಾಯ್ಕಿಣಿ, ಎಸ್.ಪಿ. ರವಿ ಚನ್ನಣ್ಣನವರ್, ಗಂಗಾವತಿ ಪ್ರಾಣೇಶ್, ಸುದೀಪ್, ರಾಧಿಕಾ ಪಂಡಿತ್, ರಕ್ಷಿತ್ ಶೆಟ್ಟಿ, ಶೃತಿ, ಗಣೇಶ್, ಪುನೀತ್ ಸೇರಿದಂತೆ ಹಲವರು ರೆಡ್ ಹಾಟ್ ಸೀಟ್ನಲ್ಲಿ ಕುಳಿತು ತಮ್ಮ ಜೀವನದ ಅನುಭವ ಹಂಚಿಕೊಂಡಿದ್ದಾರೆ.
ಈ ಬಾರಿ ಅತ್ಯುತ್ತಮ ಮನರಂಜನೆಯನ್ನು ನೀಡುವುದು ತಂಡದ ಉದ್ದೇಶ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.ಅಂದುಕೊಂಡಂತೆ ಆದರೆ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ, ಸುಧಾ ಮೂರ್ತಿ, ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್, ಅರುಂಧತಿ ನಾಗ್, ಡಾ.ವೀರೇಂದ್ರ ಹೆಗ್ಡೆ, ದಿ ವಾಲ್ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ಮಂದಿ ಸಾಧಕರ ಜೊತೆ ಕಾರ್ಯಕ್ರಮ ನಡೆಯಲಿದೆ.