ಹೊಸಬರ ಚಿತ್ರಗಳ ಪೈಕಿ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿರುವ 'ವೀಕ್ ಎಂಡ್' ಎಂಬ ಕುತೂಹಲಭರಿತ ಸಿನಿಮಾ ದಿನೇ ದಿನೆ ತನ್ನ ಹವಾ ಕ್ರಿಯೇಟ್ ಮಾಡಲು ಆರಂಭಿಸಿದೆ. ಚಿತ್ರತಂಡ ಇದೀಗ ಆಡಿಯೋ ಬಿಡುಗಡೆಗೆ ಕೂಡಾ ಪ್ಲ್ಯಾನ್ ಮಾಡಿಕೊಂಡಿದೆ.

ಕೆಜಿಎಫ್ ಚಿತ್ರದಲ್ಲಿ ತಮ್ಮ ಧ್ವನಿ ಹಾಗೂ ನಟನೆ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದ ಅನಂತ್ ನಾಗ್, ಈ ಚಿತ್ರದಲ್ಲಿ ಮತ್ತೊಂದು ವಿಭಿನ್ನ ಹಾಗೂ ಯಂಗ್ ಅಂಡ್ ಎನರ್ಜೆಟಿಕ್ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಅನಂತ್ ನಾಗ್ ಜೊತೆ ಮಿಲಿಂದ್, ಸಂಜನಾ ಬುರ್ಲಿ ಮುಂತಾದ ಯುವ ನಟ, ನಟಿಯರು ಕೂಡಾ ಚಿತ್ರದಲ್ಲಿ ಇದ್ದು ಸಿನಿಮಾವನ್ನು ಶೃಂಗೇರಿ ಸುರೇಶ್ ನಿರ್ದೇಶಿಸಿದ್ದಾರೆ.

ಎಂ.ಎಸ್. ಮಯೂರ ಮೋಷನ್ ಪಿಕ್ಚರ್ ಅಡಿ ಡಿ. ಮಂಜುನಾಥ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೇ ಬುಧವಾರ ಸಂಜೆ ಆಡಿಯೋ ಬಿಡುಗಡೆಯಾಗಲಿದ್ದು, ಚಿತ್ರತಂಡ ಸಖತ್ ಜೋಷ್ನಲ್ಲಿದೆ. ಇನ್ನು ವಿಶೇಷ ಎಂದರೆ ಬಹಳ ದಿನಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಮನೋಜ್ ಎಂಬುವವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
