ಈ ಸಿನಿಮಾ ಎಂಬ ಕ್ರಿಯೇಟಿವ್ ಲೋಕದಲ್ಲಿ ಅನೇಕ ದಿಗ್ಗಜರ ಬಯೋಫಿಕ್ ಬರೋದು ಕಾಮನ್. ಇದೀಗ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಭಾರತದಿಂದ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಜೀವನ ಆಧಾರಿತ ಬಯೋಫಿಕ್ ವೆಬ್ ಸಿರೀಸ್ ಆಗುತ್ತಿದೆ.

ಆಲ್ಮೈಟಿ ಮೋಷನ್ ಪಿಕ್ಚರ್ಸ್ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಭ್ಲೀನ್ ಕೌರ್ PZ ಪಿಕ್ಚರ್ಸ್ ಸಂಸ್ಥೆ ಸಹಯೋಗದೊಂದಿಗೆ 'ದಿ ವಿಜಯ್ ಮಲ್ಯ ಲೈಫ್ ಸ್ಟೋರಿ' ಪುಸ್ತಕದ ಪ್ರಮುಖಾಂಶಗಳನ್ನಿಟ್ಟುಕೊಂಡು ವೆಬ್ ಸಿರೀಸ್ ಮಾಡ್ತಿದ್ದಾರೆ.
ಖ್ಯಾತ ಬರಹಗಾರ ಕೆ ಗಿರಿ ಪ್ರಕಾಶ್ ಬರೆದ 'ದಿ ವಿಜಯ್ ಮಲ್ಯ ಲೈಫ್ ಸ್ಟೋರಿ' ಪುಸ್ತಕವನ್ನ ಆಧರಿಸಿ ಉದ್ಯಮಿ ವಿಜಯ್ ಮಲ್ಯ ಅವರ ಬದುಕಿಯ ಗೆಲುವು ಮತ್ತು ಸೋಲಿನ ವೆಬ್ ಸರಣಿ ಇದಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.

ದಿ ವಿಜಯ್ ಮಲ್ಯ ಲೈಫ್ ಸ್ಟೋರಿ ಪುಸ್ತಕದ ಚಿತ್ರೀಕರಣದ ಹಕ್ಕನ್ನ ನಿರ್ಮಾಪಕಿ ಪ್ರಭ್ಲೀನ್ ಕೌರ್ ಈಗಾಗಲೇ ಖರೀದಿ ಮಾಡಿದ್ದು, ಮದ್ಯದ ದೊರೆಯ ಬಾಲ್ಯದ ದಿನಗಳಿಂದ ಹಿಡಿದು, ಇಂಗ್ಲೆಂಡ್ಗೆ ಪರಾರಿಯಾಗುವವರೆಗೂ ಕಥೆಯನ್ನೊಳಗೊಂಡಿರುವ ಮಾಹಿತಿ ವೆಬ್ ಸಿರೀಸ್ನಲ್ಲಿ ಮೂಡಿ ಬರಲಿದೆ.
ವೆಬ್ ಸಿರೀಸ್ನಲ್ಲಿ ಮದ್ಯದ ದೊರೆ ವಿಜಯ್ ಮಲ್ಯ ಹುಟ್ಟಿದ ಊರು ಕೋಲ್ಕತಾದಿಂದ ಹಿಡಿದು ಅವರು ಹೇಗೆ ಸಾವಿರಾರು ಕೋಟಿಯ ಆಸ್ತಿಯ ಒಡೆಯ ಆದರು. ಮೋಜು-ಮಸ್ತಿ, ಜೀವನದಿಂದ ಹೇಗೆ ವಿಜಯ ಮಲ್ಯ ಸಾಲಗಾರನಾದರು ಎಂಬುದನ್ನ ಈ ವೆಬ್ ಸರಣಿಯಲ್ಲಿ ತೋರಿಸಲಾಗುತ್ತೆ ಅಂತಾ ಹೇಳಲಾಗಿದೆ.
ಇದನ್ನೂ ಓದಿರಿ: ಬೆಳಗಾವಿ: ಅಧಿವೇಶನದ ಡ್ಯೂಟಿಗೆ ಬಂದ ವಾಹನಗಳ ಮೇಲೆ ಕಲ್ಲು ತೂರಾಟ.. ಪೊಲೀಸರಿಂದ ಲಾಠಿ ಚಾರ್ಜ್
ಸದ್ಯ ಚಿತ್ರಕಥೆ ಕೊನೆಯ ಹಂತ ತಲುಪಿದ್ದು, ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಾಲಿವುಡ್ನ ಖ್ಯಾತ ನಟರೊಬ್ಬರು ಮಲ್ಯನ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಹಾಗಾದ್ರೆ ಯಾವ ಬಾಲಿವುಡ್ ನಟ ವಿಜಯ ಮಲ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.