ದೇಶಾದ್ಯಂತ ಕೊರೊನಾ ಎಂಬ ವೈರಸ್ ಜನರನ್ನ ಬಿಡದೆ ಕಾಡುತ್ತಿದೆ. ಇದೇ ಪರಿಸ್ಥಿತಿಯನ್ನ ಸದ್ಯ ಕರ್ನಾಟಕ ರಾಜ್ಯದಲ್ಲೂ ನಿರ್ಮಾಣ ಆಗಿದೆ.. ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜನ ಸಾಮಾನ್ಯರು ಹಾಗೂ ಸಿನಿಮಾ ತಾರೆಯರು ಈ ಮಹಾಮಾರಿಗೆ ಜೀವ ಬಿಡುತ್ತಿದ್ದಾರೆ. ಹೀಗಾಗಿ ಸ್ಯಾಂಡಲ್ವುಡ್ ಕೆಲ ತಾರೆಯರು ಈ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮಾತುಗಳನ್ನ ಹಾಡುತ್ತಿದ್ದಾರೆ. ಇದೀಗ ನಟ ನೀನಾಸಂ ಸತೀಶ್ ಕೂಡ ಕೊರೊನಾ ಭಯಾನಕತೆ ಬಗ್ಗೆ ಮಾತನಾಡಿದ್ದಾರೆ.
ಕೊರೊನಾ ಇಷ್ಟೊಂದು ಹೆಚ್ಚಾಗೋದಿಕ್ಕೆ ಕಾರಣ ನಾವೇ ಅಂತಾ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಜನರು ಮನೆಯಲ್ಲೇ ಇರುವುದರಿಂದ , ಬೇರೆಯವರಿಗೆ ಈ ರೋಗವನ್ನ ಅಂಟಿಸುವುದನ್ನ ಕಡಿಮೆ ಮಾಡಬಹುದು. ಇನ್ನು ಹಾಸನದಲ್ಲಿ ತನ್ನ ತಾಯಿಗೆ ಕೊರೊನಾ ಬಂತು ಅಂತಾ ಯುವಕ ನೇಣಿಗೆ ಶರಣಾಗಿರೋದು ಬಗ್ಗೆ ಸತೀಶ್ ನೋವನ್ನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲಾ ನಮ್ಮ ಚಿಕ್ಕಮ್ಮ ಕೊರೊನಾಗೆ ಬಲಿಯಾದರು. ಆ ಸಮಯದಲ್ಲಿ ನಾನು ಹೋಗೋದಿಕ್ಕೆ ಆಗಲಿಲ್ಲ ಅಂತಾ ನೋವನ್ನ ವ್ಯಕ್ತಪಡಿಸಿದರು. ಹೀಗಾಗಿ ದಯಮಾಡಿ ಎಲ್ರೂ ಮನೆಯಲ್ಲಿ ಇದ್ದು, ಸುರಕ್ಷಿತವಾಗಿ ಇರಿ ಅಂತಾ ನೀನಾಸಂ ಸತೀಶ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.