ಹೈದರಾಬಾದ್: ರಾಜಮೌಳಿ ನಿರ್ದೇಶನದ ನಟ ರಾಮ್‍ಚರಣ್ ತೇಜ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅಭಿನಯದ ಬಹುನಿರೀಕ್ಷಿತ ‘ಆರ್‌ಆರ್‌ಆರ್’ ಸಿನಿಮಾದ ದೋಸ್ತಿ ಹಾಡನ್ನು ಇಂದು ಫ್ರೆಂಡ್‍ಶಿಪ್ ಡೇ ಹಿನ್ನೆಲೆ ರಿಲೀಸ್ ಮಾಡಲಾಗಿದೆ. ಫ್ರೆಂಡ್‍ಶಿಪ್ ಡೇಯಂದೇ ಈ ಚಿತ್ರದ ಮೊದಲ ಮ್ಯೂಸಿಕ್ ವಿಡಿಯೋ ಬಿಡುಗಡೆಯಾಗಿರುವುದು ವಿಶೇಷ.
ಎಂ.ಎಂ.ಕೀರವಾಣಿ ಕಂಪೋಸ್ ಮಾಡಿರುವ ದೋಸ್ತಿ ಹಾಡನ್ನು ಅಮಿತ್ ತ್ರಿವೇದಿ, ಅನಿರುದ್ಧ್ ರವಿಚಂದಿರ್, ವಿಜಯ್ ಯೇಸುದಾಸ್, ಹೇಮಚಂದ್ರ ಮತ್ತು ಯಾಜಿನ್ ನಾಝಿರ್ ಸೇರಿ ಐವರು ಗಾಯಕರು ಹಾಡಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ದೋಸ್ತಿ ಥೀಮ್ ಟ್ರ್ಯಾಕ್ ಅನ್ನು ಈ ಗಾಯಕರು ಹಾಡಿದ್ದಾರೆ.
- " class="align-text-top noRightClick twitterSection" data="">
ಈ ಹಾಡನ್ನು ನಿರ್ದೇಶಕ ರಾಜಮೌಳಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಈ ಸ್ನೇಹಿತರ ದಿನಾಚರಣೆಯಂದು ರಾಮರಾಜು ಹಾಗೂ ಭೀಮ ಎಂಬ ಇಬ್ಬರು ಪ್ರಬಲ ವ್ಯಕ್ತಿಗಳು ಎದುರಾಳಿಗಳಾಗಿ ಬರುತ್ತಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
ರಾಮಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಇದೇ ಮೊದಲ ಬಾರಿಗೆ ‘ಆರ್‌ಆರ್‌ಆರ್’ ಸಿನಿಮಾದ ಮೂಲಕ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದು, ಈ ಚಿತ್ರಕ್ಕೆ ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ಗೆ ಜೋಡಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿದೆ.
-
This Friendship day, witness the coming together of 2 powerful opposing forces - Ramaraju🔥& Bheem 🌊#Dosti Music Video: https://t.co/uK5ltoe7Fq@MMKeeravaani@itsvedhem @anirudhofficial @ItsAmitTrivedi @IAMVIJAYYESUDAS #YazinNizar@TSeries @LahariMusic #RRRMovie #Natpu #Priyam
— rajamouli ss (@ssrajamouli) August 1, 2021 " class="align-text-top noRightClick twitterSection" data="
">This Friendship day, witness the coming together of 2 powerful opposing forces - Ramaraju🔥& Bheem 🌊#Dosti Music Video: https://t.co/uK5ltoe7Fq@MMKeeravaani@itsvedhem @anirudhofficial @ItsAmitTrivedi @IAMVIJAYYESUDAS #YazinNizar@TSeries @LahariMusic #RRRMovie #Natpu #Priyam
— rajamouli ss (@ssrajamouli) August 1, 2021This Friendship day, witness the coming together of 2 powerful opposing forces - Ramaraju🔥& Bheem 🌊#Dosti Music Video: https://t.co/uK5ltoe7Fq@MMKeeravaani@itsvedhem @anirudhofficial @ItsAmitTrivedi @IAMVIJAYYESUDAS #YazinNizar@TSeries @LahariMusic #RRRMovie #Natpu #Priyam
— rajamouli ss (@ssrajamouli) August 1, 2021
ಈ ಚಿತ್ರವು ಕಾಲ್ಪನಿಕ ಕತೆಯಾಗಿದ್ದು, ರಾಮ್ ಚರಣ್ ಮತ್ತು ಜೂನಿಯರ್ ಎನ್‍ಟಿಆರ್ ಬ್ರಿಟಿಷರು ಮತ್ತು ಹೈದರಾಬಾದ್ ನಿಜಾಮರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.