ನಿನ್ನೆ ನಡೆದ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಆಸೀಸ್ ಆಟಗಾರ ಡೇವಿಡ್ ವಾರ್ನರ್ 'ಬುಟ್ಟ ಬೊಮ್ಮಾ' ಹಾಡಿಗೆ ಸ್ಟೆಪ್ ಹಾಕಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದ್ದಾರೆ.
-
Buttabomma and Warner Never Ending Love Story 😂😂♥️.#AUSvIND @davidwarner31 pic.twitter.com/TjEeMKzgt3
— M A N I (@Mani_Kumar15) November 27, 2020 " class="align-text-top noRightClick twitterSection" data="
">Buttabomma and Warner Never Ending Love Story 😂😂♥️.#AUSvIND @davidwarner31 pic.twitter.com/TjEeMKzgt3
— M A N I (@Mani_Kumar15) November 27, 2020Buttabomma and Warner Never Ending Love Story 😂😂♥️.#AUSvIND @davidwarner31 pic.twitter.com/TjEeMKzgt3
— M A N I (@Mani_Kumar15) November 27, 2020
ಇದೇ ವರ್ಷ ತೆರೆ ಕಂಡಿದ್ದ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ನಟನೆಯ ಅಲಾ ವೈಕುಂಠಪುರಂಲೋ ಚಿತ್ರದ ಬುಟ್ಟಬೊಮ್ಮಾ ಹಾಡು ಸಖತ್ ಹಿಟ್ ಆಗಿತ್ತು. ಈ ಹಾಡು ಟಿಕ್ ಟಾಕ್ ಪ್ರಿಯರಿಗಂತೂ ಹಬ್ಬವಾಗಿತ್ತು. ಅಲ್ಲದೆ ಕಳೆದ ಕೆಲ ದಿನಗಳಲ್ಲಿಯೂ ವಾರ್ನರ್ ಈ ಹಾಡಿಗೆ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು.
ಅಷ್ಟೆ ಅಲ್ಲ, ಸನ್ ರೈಸರ್ಸ್ ಹೈದ್ರಾಬಾದ್ ಟೀಂ ನಾಯಕನಾಗಿದ್ದ ವಾರ್ನರ್, ಈ ಹಾಡಿಗೆ ಹೆಜ್ಜೆ ಹಾಕುತ್ತ ಹೈದ್ರಾಬಾದ್ ಫ್ಯಾನ್ಸ್ ರಂಜಿಸುತ್ತಿದ್ದರು. ಸದ್ಯ ಕ್ರಿಕೆಟ್ ಮೈದಾನದಲ್ಲಿ ಡೇವಿಡ್ ವಾರ್ನರ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.