ಬೆಂಗಳೂರಿನ ಖಾಸಗಿ ಕಾಲೇಜೊಂದರ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ವಿವೇಕ್ ಒಬೆರಾಯ್ರನ್ನ ಇನ್ವೈಟ್ ಮಾಡಲಾಗಿತ್ತು. ತಮ್ಮ ನೆಚ್ಚಿನ ನಟನ ನೋಡಿದ ಕಾಲೇಜು ಹುಡುಗಿಯರು ಬೊಬ್ಬೆ ಹಾಕಿ ಸಂಭ್ರಮಿಸಿದರು.
ಅಲ್ಲದೆ ಕಾರ್ಯಕ್ರಮ ಮುಗಿದ ಬಳಿಕ ವಿವೇಕ್ ಜೊತೆ ಪೋಟೋ ಕ್ಲಿಕ್ಕಿಸೋಕೆ ಯುವತಿಯರ ದಂಡು ಮುಗಿಬಿದ್ದಿತ್ತು. ಇನ್ನೂ ನಟ ವಿವೇಕ್ ಒಬೆರಾಯ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.