ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹನಾಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಕೋಟ್ಯಾಂತರ ಅಭಿಮಾನಿಗಳ ಹೃದಯವಂತನಾಗಿ ಪ್ರೇಕ್ಷಕರ ಮನದಲ್ಲಿ ಉಳಿದಿದ್ದಾರೆ.
ಅಭಿಮಾನಿಗಳ ಪಾಲಿನ ವಿಷ್ಣುದಾದ ಬದುಕಿದ್ದರೆ 71ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದರು. ಸೆಪ್ಟೆಂಬರ್ 18 , ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬವನ್ನು, ಅಭಿಮಾನಿಗಳು ಅನ್ನದಾನ, ರಕ್ತದಾನ ಮಾಡುವ ಮೂಲಕ ವಿಭಿನ್ನವಾಗಿ ಆಚರಿಸುವುದನ್ನ ನಾವು ಈಗಾಗಲೇ ನೋಡಿದ್ದೇವೆ. ಆದರೆ ವಿಷ್ಣುವರ್ಧನ್ ಹುಟ್ಟು ಹಬ್ಬಕ್ಕೆ ಎರಡು ದಿನ ಇರುವಾಗಲೇ, ಒಡಿಶಾ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ನಲ್ಲಿ ಸಾಹಸಸಿಂಹನ ಜನ್ಮದಿನದ ವಿಶೇಷವಾಗಿ ಆಚರಿಸಲಾಗಿದೆ.
ಇದೇ ಮೊದಲ ಬಾರಿಗೆ, ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ರವರ, ಚಿತ್ರವನ್ನು ಬಿಡಿಸಲಾಗಿದೆ. ಮೊಟ್ಟ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿರೋದು ಮತ್ತೊಂದು ವಿಶೇಷ. ಸೆಪ್ಟೆಂಬರ್ 18ರಂದು ಡಾ.ವಿಷ್ಣುವರ್ಧನ್ ಅವರ 71ನೇ ಜನ್ಮದಿನ. ಇದರ ಅಂಗವಾಗಿ ಮರಳುಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪವನ್ನು ಬಿಡಿಸಲಾಗಿದೆ.
![Vishnuvardhan Sand Sculpture](https://etvbharatimages.akamaized.net/etvbharat/prod-images/kn-bng-05-marina-beachanli-vishnvardhan-prathime-7204735_16092021213756_1609f_1631808476_1099.jpg)
ಹೆಸರಾಂತ ಶಿಲ್ಪಿ ಮನೀಶ್ ಕುಮಾರ್, ಡಾ ವಿಷ್ಣುವರ್ಧನ್ ಶಿಲ್ಪವನ್ನು ಮರಳಿನಲ್ಲಿ ರಚಿಸಿದ್ದಾರೆ. ಇನ್ನು ವಿಷ್ಣುವರ್ಧನ್ ಅಭಿಮಾನಿಯಾಗಿರುವ ವೀರಕಪುತ್ರ ಶ್ರೀನಿವಾಸ, ಈ ಶಿಲ್ಪ ಕಲೆಯನ್ನ ರಚಿಸಲು ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನ ಮಾಡಿದ್ದಾರೆ. ಇದು ವಿಷ್ಣುವರ್ಧನ್ ಅಭಿಮಾನಿಗಳಿಗೆ ಖುಷಿ ತಂದಿದೆ.
![Vishnuvardhan Sand Sculpture](https://etvbharatimages.akamaized.net/etvbharat/prod-images/kn-bng-05-marina-beachanli-vishnvardhan-prathime-7204735_16092021213756_1609f_1631808476_433.jpg)
ಇದನ್ನು ಓದಿ:'ನಿರ್ಮಾಪಕ ಜಯಣ್ಣನಿಗೆ 13 ಕೋಟಿ ಕೊಟ್ಟ ಯಶ್'...ಈ ವದಂತಿ ಬಗ್ಗೆ ಜಯಣ್ಣ ಹೇಳಿದ್ದೇನು?