ಟಾಲಿವುಡ್ ನಟಿ ಶ್ರೀರೆಡ್ಡಿ ಕಾಲಿವುಡ್ ನಟ, ನಿರ್ಮಾಪಕ ವಿಶಾಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ನಟನ ವ್ಯಕ್ತಿತ್ವಕ್ಕೆ ಚ್ಯುತಿ ತರುವಂತಹ ಆರೋಪಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ಇಂದು ತಮ್ಮ ಫೇಸ್ಬುಕ್ಲ್ಲಿ ಸರಣಿ ಪೋಸ್ಟ್ಗಳನ್ನು ಹಾಕಿರುವ ಕಾಂಟ್ರವರ್ಸಿಯಲ್ ಸ್ಟಾರ್ ಶ್ರೀರೆಡ್ಡಿ, ವಿಶಾಲ್ ಓರ್ವ ಹೆಣ್ಣುಬಾಕ ಎಂದಿದ್ದಾರೆ. ಆತನ ಜತೆ ಲೈಂಗಿಕತೆಗೆ ಒಪ್ಪಿದ ನಟಿಯರ ಜತೆ ಮಾತ್ರ ಆತ ನಟಿಸುತ್ತಾನೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಆತನದು ಮುಖವಾಡದ ಬದುಕು. ಹುಡುಗಿಯ ಜತೆ ಆತನ ವರ್ತನೆ ಬೇರೆತರನಾಗಿರುತ್ತೆ. ವಿಶಾಲ್ನದು ಒಳ್ಳೆಯ ವ್ಯಕ್ತಿತ್ವ ಅಲ್ಲ. ಅವನು ಸಮಾಜದಲ್ಲಿ ಸಭ್ಯರಂತೆ ನಟಿಸುತ್ತಾನೆ ಎಂದು ಜರಿದಿದ್ದಾರೆ.
ವಿಶಾಲ್ ವಿರುದ್ಧ ಬಾಂಬ್ ಸಿಡಿಸಿರುವ ಶ್ರೀ, ಒಂದು ವೇಳೆ ನೀನು ನನ್ನ ಸಿನಿ ಕರಿಯರ್ ಮುಗಿಸಲು ಯತ್ನಿಸಿದರೆ ನಾನೂ ಅದಕ್ಕೂ ಸಿದ್ಧಳಾಗಿದ್ದೇನೆ. ನೀನು ಕೊಲ್ಲುತ್ತೀಯಾ? ಅದಕ್ಕೂ ನಾನು ರೆಡಿ. ಆದರೆ, ಈಗಲೂ ನೀನೋಬ್ಬ ಮೋಸಗಾರ, ವಂಚನೆಗಾರ ಎಂದು ನಾನೂ ಹೇಳುತ್ತೇನೆ ಎಂದು ಫೇಸ್ಬುಕ್ಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ಮೀಟೂ ವಿರುದ್ಧ ಹೋರಾಟ ನಡೆಸುತ್ತಿರುವ ಶ್ರೀರೆಡ್ಡಿ, ಈಗಾಗಲೇ ಟಾಲಿವುಡ್ನ ಕೆಲ ನಟ,ನಿರ್ದೇಶಕ, ನಿರ್ಮಾಪಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.