ETV Bharat / sitara

ಕೊರೊನಾ ದಿನಗಳಲ್ಲಿ ಹೇಗಿರ್ಬೇಕು ಅಂತ ಹೇಳ್ತಿದ್ದಾರೆ 'ಅಖಿಲಾಂಡೇಶ್ವರಿ' - ಪಾರುಧಾರಾವಾಹಿ

ವಿನಯ ಪ್ರಸಾದ್ ಕೊರೊನಾ ದಿನಗಳಲ್ಲಿ ಯಾವೆಲ್ಲಾ ರೀತಿಯಲ್ಲಿ ಜಾಗರೂಕರಾಗಿರಬಹುದು ಎಂದು ವಿವರಿಸಿದ್ದಾರೆ. ಇವರ ಮಗಳು ಪ್ರಥಮಾ ಪ್ರಸಾದ್ ವಿನಯ ಪ್ರಸಾದ್​ ಹೇಳಿರುವ ಮಾತುಗಳ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

vinayaprasad suggest to people for go corona
ವಿನಯ ಪ್ರಸಾದ್
author img

By

Published : Oct 23, 2020, 12:27 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಆಗಿ ನಟಿಸಿ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ವಿನಯ ಪ್ರಸಾದ್, ಸದ್ಯ ಕಿರುತೆರೆಯಲ್ಲಿ ಬ್ಯುಸಿ. ಲಾಕ್ ಡೌನ್ ನಂತರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶೂಟಿಂಗ್ ಆರಂಭವಾಗಿದ್ದು, ವಿನಯ ಪ್ರಸಾದ್ ಕೂಡಾ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ.

vinayaprasad suggest to people for go corona
ವಿನಯ ಪ್ರಸಾದ್

ಇದರ ಜೊತೆಗೆ, ಜನತೆಯ ಜೊತೆಗೆ ಜಾಗರೂಕರಾಗಿರಿ ಎಂದು ಮನವಿ ಮಾಡಿರುವ ಅವರು, ಯಾವೆಲ್ಲಾ ರೀತಿಯಲ್ಲಿ ಜಾಗರೂಕರಾಗಿರಬಹುದು ಎಂದು ಕೂಡಾ ವಿವರಿಸಿದ್ದಾರೆ. ವಿನಯ ಪ್ರಸಾದ್ ಅವರ ಮಗಳು ಪ್ರಥಮಾ ಪ್ರಸಾದ್ ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

"ಕೊರೊನಾ ವೈರಸ್ ಹರಡದಂತೆ ಮಾಸ್ಕ್‌ ಧರಿಸಬೇಕು. ಸ್ಯಾನಿಟೈಸರ್‌ ಬಳಕೆ ಮಾಡುವುದರ ಜೊತೆಗೆ ಆಗಾಗ ಕೈ ತೊಳೆಯಬೇಕು. ಎಲ್ಲಕ್ಕಿಂತ ಮುಖ್ಯವಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಅದನ್ನು ತಪ್ಪದೇ ಮಾಡಬೇಕು. ಇದರ ಜೊತೆಗೆ ಜೊತೆಗೆ ಬಿಸಿ ನೀರಿನ ಹಬೆ ತೆಗೆದುಕೊಂಡರೆ ಉತ್ತಮ" ಎಂದಿದ್ದಾರೆ ಅರಸನಕೋಟೆ ಅಖಿಲಾಂಡೇಶ್ವರಿ.

ಇದರ ಜೊತೆಗೆ "ಬಿಸಿ ನೀರಿನ ಹಬೆ ಆಗಾಗ ತೆಗೆದುಕೊಳ್ಳುವ ಮೂಲಕ ಈ ರೋಗವನ್ನು ದೂರ ಮಾಡಬಹುದು. ಮಾತ್ರವಲ್ಲ, ಇದು ತುಂಬಾ ಪರಿಣಾಮಕಾರಿ. ನಾನು ಕೂಡಾ ಇದನ್ನೇ ಮಾಡುತ್ತೇನೆ" ಎನ್ನುತ್ತಾರೆ ವಿನಯ ಪ್ರಸಾದ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.