ETV Bharat / sitara

ಶಿವಣ್ಣ, ಅಪ್ಪು ನಂತ್ರ ಬಾಕ್ಸರ್ ಆಗಲು ಹೊರಟ ಅಣ್ಣಾವ್ರ ವಂಶದ ಕುಡಿ - undefined

ಬಾಲನಟನಾಗಿ ಸ್ಯಾಂಡಲ್​​ವುಡ್​​​​ಗೆ ಎಂಟ್ರಿ ಕೊಟ್ಟಿದ್ದ ನಟ ವಿನಯ್ ರಾಜ್​ಕುಮಾರ್ 'ಸಿದ್ದಾರ್ಥ್' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ್ದರು. ಇದೀಗ ಅವರು ಹೆಸರಿಡದ ಹೊಸ ಚಿತ್ರವೊಂದರಲ್ಲಿ ಬಾಕ್ಸರ್ ಪಾತ್ರ ಮಾಡುತ್ತಿದ್ದಾರೆ.

ವಿನಯ್ ರಾಜ್​​ಕುಮಾರ್
author img

By

Published : May 6, 2019, 5:24 PM IST

ನಟ ರಾಘವೇಂದ್ರ ರಾಜ್​ಕುಮಾರ್ ಪುತ್ರ ವಿನಯ್ ರಾಜ್​​​ಕುಮಾರ್ ಇದೀಗ ಬಾಕ್ಸಿಂಗ್ ಮಾಡಲು ಹೊರಟಿದ್ದಾರೆ. ಅಂದರೆ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಅವರು ಬಾಕ್ಸರ್ ಪಾತ್ರ ಮಾಡುತ್ತಿದ್ದಾರೆ.

vinay rajkumar
ವಿನಯ್ ರಾಜ್​​ಕುಮಾರ್

ವಿನಯ್​ ತಾತ ವರನಟ ಡಾ. ರಾಜಕುಮಾರ್ ‘ತಾಯಿಗೆ ತಕ್ಕ ಮಗ’ ಸಿನಿಮಾದಲ್ಲಿ ಬಾಕ್ಸರ್ ಪಾತ್ರ ಮಾಡಿದ್ದರು. ದೊಡ್ಡಪ್ಪ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ‘ಯುವರಾಜ’ ಚಿತ್ರದಲ್ಲಿ ಬಾಕ್ಸರ್, ಚಿಕ್ಕಪ್ಪ ಪುನೀತ್ ರಾಜಕುಮಾರ್ ‘ಮೌರ್ಯ’ ಸಿನಿಮಾದಲ್ಲಿ ಬಾಕ್ಸರ್. ಇದೀಗ ವಿನಯ್ ರಾಜ್​​​​​​​​ಕುಮಾರ್ ಕೂಡಾ ಬಾಕ್ಸರ್ ಪಾತ್ರವನ್ನು ನಿಭಾಯಿಸಲು ಸಜ್ಜಾಗುತ್ತಿದ್ದಾರೆ. ‘ಗ್ರಾಮಾಯಣ’ ಸಿನಿಮಾ ಮುಗಿದ ಕೂಡಲೇ ಸಿನಿಮಾ ಸೆಟ್ಟೇರುತ್ತಿದ್ದು ಕರಮ್ ಚಾವ್ಲಾ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಷಿಯನ್ ನೊಗ್​​ರಾಜ್​​​​, ಅವನೇ ಶ್ರೀಮನ್​ ನಾರಾಯಣ ಚಿತ್ರಗಳಲ್ಲಿ ಕರಮ್​ ಚಾವ್ಲಾ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇದೀಗ ತಾವೇ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸೂಕ್ತ ಟೈಟಲ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದು ಕ್ರೀಡಾ ಹಿನ್ನೆಲೆ ಇರುವ ಸಿನಿಮಾವಾಗಿದ್ದು ವಿನಯ್ ರಾಜ್​​ಕುಮಾರ್ ಈ ಸಿನಿಮಾದಲ್ಲಿ ಎರಡು ಶೇಡ್​​​​ನಲ್ಲಿ ನಟಿಸುತ್ತಿದ್ದಾರೆ. ಮೇ 7 ವಿನಯ್ ರಾಜ್​ಕುಮಾರ್ ಹುಟ್ಟಿದಿನದ ವಿಶೇಷವಾಗಿ ಚಿತ್ರದ ಪೋಸ್ಟರ್ ಬಿಡುಗಡೆಯಾಗುತ್ತಿದೆ.

ವಿನಯ್ ರಾಜಕುಮಾರ್ ಬಾಕ್ಸರ್

ತಾತ ಡಾ ರಾಜಕುಮಾರ್ ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಬಾಕ್ಸರ್, ದೊಡ್ಡಪ್ಪ ಡಾ ಶಿವರಾಜಕುಮಾರ್ ಯುವ ರಾಜ ಚಿತ್ರದಲ್ಲಿ ಬಾಕ್ಸರ್, ಚಿಕ್ಕಪ್ಪ ಪುನೀತ್ ರಾಜಕುಮಾರ್ ಮೌರ್ಯ ಕನ್ನಡ ಚಿತ್ರದಲ್ಲಿ ಬಾಕ್ಸರ್. ಈಗ ವಿನಯ್ ರಾಜಕುಮಾರ್ ಬಾಕ್ಸರ್ ಪಾತ್ರವನ್ನು ನಿಭಾಯಿಸಲು ಸಜ್ಜಾಗುತ್ತಿದ್ದಾರೆ. ಬಾಕ್ಸರ್ ಆಗಲು ಬೇಕಾದ ತಯಾರಿ ನಡೆಯುತ್ತಿದೆ. ಗ್ರಾಮಯಣ ಸಿನಿಮಾ ಮುಗಿದ ತಕ್ಷಣ ಇದು ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದಲ್ಲಿ ಸೆಟ್ಟೇರಲಿದೆ. ಸೂಕ್ತವಾದ ಶೀರ್ಷಿಕೆ ಬಗ್ಗೆ ಮಾತುಕತೆ ನಡೆಯುತ್ತಿದೆ.

ವಿನಯ್ ರಾಜಕುಮಾರ್ ಜನುಮದಿನ ನಾಳೆ ಮೇ 7 ರಂದು. ಅದಕ್ಕಾಗಿಯೇ ಪೋಸ್ಟರ್ ಬಿಡುಗಡೆ ಸಹ ಆಗಲಿದೆ. ಕರಮ್ ಚಾವ್ಲ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಹಂಬಲ್ ಪೋಲಿತಿಷಿಯನ್ ನೊಗರಾಜ್ ಹಾಗೂ ಅವನೇ ಶ್ರೀಮನ್ ನಾರಾಯಣ ಚಿತ್ರಗಳ ಛಾಯಾಗ್ರಾಹಕ ಈ ಚಿತ್ರವನ್ನು ನಿರ್ದೇಶನ ಮಾಡಲು ಸಿದ್ದವಾಗುತ್ತಿದ್ದಾರೆ. ಇದು ಕ್ರೀಡಾ ಹಿನ್ನಲೆ ಹೊಂದಿರುವ ಕಥೆ. ವಿನಯ್ ರಾಜಕುಮಾರ್ ಅವರಿಗೆ ಎರಡು ಶೇಡ್ ಇರುವ ಪಾತ್ರದ ಜವಾಬ್ದಾರಿ.

ಅಂದಹಾಗೆ ದೊಡ್ಡ ಮನೆಯಲ್ಲಿ ಸಂಭ್ರಮದ ವಾತಾವರಣ. ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಮಗನಿಗೆ ಮದುವೆಯ ಸಿದ್ದತೆ ನಡೆಯುತ್ತಿದೆ. ಈ ಹೊಸ ಚಿತ್ರ ವಿನಯ್ ರಾಜಕುಮಾರ್ ಅವರದು ಸೆಟ್ಟೇರುವುದು ಸಹೋದರ ಗುರು ರಾಜಕುಮಾರ್ ಮದುವೆ ಮುಗಿದ ನಂತರ.

ವಿನಯ್ ರಾಜಕುಮಾರ್ ಸಿದ್ದಾರ್ಥ ಮೂಲಕ ಪರಿಚಯ ಆಗಿ, ರನ್ ಆಂಟೋನಿ, ಆನಂತು ವೇರ್ಸರ್ ನುಸ್ರತ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.