ETV Bharat / sitara

Bhajarangi2 : ಸೆಂಚುರಿ ಸ್ಟಾರ್ ಎದುರು ಅಬ್ಬರಿಸಲಿರೋ ಯುವ ಖಳನಟ ಚೆಲುವರಾಜ್ - Villain in Bhajarangi2

ನನ್ನ ಪಾತ್ರ ಅರಕ ನೆಗೆಟಿವ್ ಪಾತ್ರ, ಈ ಕ್ಯಾರೆಕ್ಟರ್‌ಗೆ ಯಾವುದೇ ಸೆಂಟಿಮೆಂಟ್ ಇಲ್ಲ, ಇದರಲ್ಲಿ ಎರಡು ಕಾಲ ಘಟ್ಟದಲ್ಲಿ ಬರುತ್ತೆ, ಶಿವಣ್ಣನ ಜೊತೆ ಕೆಲಸ ಮಾಡಿರೋದು ಕಲ್ಪನೆ ಮಾಡಿಕೊಳ್ಳೋದಿಕ್ಕೆ ಆಗೋಲ್ಲ. ಯಾಕಂದ್ರೆ, ಶಿವಣ್ಣನ ಅಭಿನಯ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ಅಂತಾರೆ ಚೆಲುವರಾಜ್..

ಭಜರಂಗಿ 2
ಭಜರಂಗಿ 2
author img

By

Published : Oct 27, 2021, 10:38 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಚಿತ್ರ ಭಜರಂಗಿ 2 ಟ್ರೈಲರ್ ಹಾಗೂ ಚಿತ್ರದಲ್ಲಿ ಬರುವ ವಿಚಿತ್ರ ಪಾತ್ರಗಳಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಭಜರಂಗಿ 2 ಸಿನಿಮಾ ಇದೇ ವಾರ ಪ್ರೇಕ್ಷಕರಿಗೆ ದರ್ಶನ ಕೊಡ್ತಾ ಇದೆ.

ಮೊದಲ ಮೊದಲ ಭಜರಂಗಿ ಸಿನಿಮಾದಲ್ಲಿ ಇದ್ದಂತೆ, ಭಜರಂಗಿ 2 ಚಿತ್ರದಲ್ಲೂ ವಿಚಿತ್ರ ಗೆಟಪ್‌ ಹೊಂದಿರುವ, ಮೂರು ಜನ ಖಳ ನಟರನ್ನ ನಿರ್ದೇಶಕ ಹರ್ಷ ಪರಿಚಯಿಸಿದ್ದಾರೆ. ಮೂರು ಜನ ಖಡಕ್ ವಿಲನ್‌ಗಳಲ್ಲಿ ಒಬ್ಬರಾಗಿರುವ ಹಳ್ಳಿ ಪ್ರತಿಭೆ ಚೆಲುವರಾಜ್.

ನೋಡುವುದಕ್ಕೆ ಆರಡಿಯ ಅಜಾನುಬಾಹು ತರ ಕಾಣುವ ಚೆಲುವರಾಜ್, ಭಜರಂಗಿ 2 ಸಿನಿಮಾದಲ್ಲಿ ಯಾವುದೇ ಸೆಂಟಿಮೇಟ್ ಇಲ್ಲದ ಅರಕ ಎಂಬ ಖಡಕ್ ವಿಲನ್ ಆಗಿ ಅಭಿನಯಿಸುತ್ತಿದ್ದಾರೆ. ಮೂಲತಃ ಚನ್ನರಾಯಪಟ್ಟಣ್ಣವರಾದ ಚೆಲುವರಾಜ್, ಭಜರಂಗಿ 2 ಸಿನಿಮಾ ಮಾಡುವುದಕ್ಕಿಂತ ಮುಂಚೆ ಸೀರಿಯಲ್‌ಗಳಲ್ಲಿ ನಟಿಸ್ತಾ ಇದ್ರಂತೆ.

ಆರಡಿ ಹೈಟ್ ಇರುವ ಚೆಲುವರಾಜ್, ಕಿಚ್ಚ ಸುದೀಪ್ ಹಾಗೂ ವಿನೋದ್ ಪ್ರಭಾಕರ್ ಫೈಟರ್ ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸಿದ್ದಾರೆ. ಆದರೆ, ಈ ಚಿತ್ರಗಳಲ್ಲಿ ಚೆಲುವರಾಜ್ ಅಂದುಕೊಂಡಂತೆ ಮಹತ್ವ ಸಿಕ್ಕಿಲ್ಲ.

ನಿರ್ದೇಶಕ ಎ ಹರ್ಷ ಭಜರಂಗಿ ಸಿನಿಮಾದಲ್ಲಿ ಚೆಲುವರಾಜ್ ಹೊಸ ಗೆಟಪ್ ಕೊಟ್ಟು ಅರಕ ಎಂಬ ಖಳ ನಟನ ಪಾತ್ರ ಮಾಡಿಸಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಜೊತೆ ಚೆಲುವರಾಜ್ ಭಜರಂಗಿ 2 ಚಿತ್ರದ ಹಲವಾರು ಇಂಟ್ರಸ್ಟ್ರಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ಯುವ ಖಳನಟ ಚೆಲುವರಾಜ್

ಭಜರಂಗಿ 2 ಸಿನಿಮಾ ನನ್ನ ಮೊದಲ ಚೊಚ್ಚಲ ಸಿನಿಮಾ. ಮೊದಲ ಭಜರಂಗಿ ಸಿನಿಮಾದಲ್ಲಿ ಹೇಗೆ ಹಲವಾರು ನೆಗೆಟಿವ್ ಪಾತ್ರಗಳು ಇದ್ವು. ಭಜರಂಗಿ ಸಿನಿಮಾ ನೋಡಿವರು, ಭಜರಂಗಿ 2 ನೋಡೋದಕ್ಕೆ ಜನ ಬರ್ತಾರೆ.

ನನ್ನ ಪಾತ್ರ ಅರಕ ನೆಗೆಟಿವ್ ಪಾತ್ರ, ಈ ಕ್ಯಾರೆಕ್ಟರ್‌ಗೆ ಯಾವುದೇ ಸೆಂಟಿಮೆಂಟ್ ಇಲ್ಲ, ಇದರಲ್ಲಿ ಎರಡು ಕಾಲ ಘಟ್ಟದಲ್ಲಿ ಬರುತ್ತೆ, ಶಿವಣ್ಣನ ಜೊತೆ ಕೆಲಸ ಮಾಡಿರೋದು ಕಲ್ಪನೆ ಮಾಡಿಕೊಳ್ಳೋದಿಕ್ಕೆ ಆಗೋಲ್ಲ. ಯಾಕಂದ್ರೆ, ಶಿವಣ್ಣನ ಅಭಿನಯ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ಅಂತಾರೆ ಚೆಲುವರಾಜ್.

ಶಿವರಾಜ್‌ಕುಮಾರ್ ಸಿನಿಮಾ ಅಲ್ಲದೇ, ಕ್ಯಾಮೆರಾ ಹಿಂದೆನೇ ಎಷ್ಟು ಸರಳ ವ್ಯಕ್ತಿ ಅನ್ನೋದಕ್ಕೆ ಚೆಲುವರಾಜ್ ಶೂಟಿಂಗ್ ಸ್ಪಾಟ್‌ನಲ್ಲಿ ನಡೆದ ಒಂದು ಘಟನೆ ಬಗ್ಗೆ ಹೇಳಿದ್ದು ಹೀಗೆ.. ಸಿನಿಮಾ ಬ್ರೇಕ್ ಟೈಮ್ ಅದು. ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ತುಂಬಾ ಕಸ ಇತ್ತು. ಇದನ್ನ ನೋಡಿದ ಶಿವಣ್ಣ ಸೆಟ್‌ ಬಾಯ್‌ಗೆ ಕರೆದು ಸೆಟ್ಟುನ್ನ ಹೇಗೆ ಇಟ್ಟುಕೊಂಡಿದ್ದೀರಾ..

ಕಸ ಗುಡಿಸಿ ನೀಟಾಗಿ ಇಟ್ಟಿಕೊಳ್ಳೊದಿಕ್ಕೆ ಆಗೋಲ್ವಾ ಅಂದ್ರಂತೆ. ಆಗ ಸೆಟ್ ಬಾಯ್ ಸರಿಯಾಗಿ ಕಸ ಗುಡಿಸಲಿಲ್ವಂತೆ. ಆಗ ಶಿವಣ್ಣನೇ ಕಸ ಗುಡಿಸ್ತಾ ಇದ್ರಂತೆ. ಯಾಕೇ ಹೇಳ್ತಾ ಇದ್ದೀನಿ ಅಂದರೆ ಶಿವಣ್ಣ ಅಷ್ಟು ದೊಡ್ಡ ಸ್ಟಾರ್ ಆಗಿದ್ರು ಕೂಡ ಎಷ್ಟು ಸರಳ ವ್ಯಕ್ತಿತ್ವ ಅಂತಾರೆ ಚೆಲುವರಾಜ್.

ಸಿನಿಮಾದ ಬಿಡುಗಡೆ ಬಗ್ಗೆ ಟೆನ್ಷನ್‌ನಲ್ಲಿರುವೆ. ಭಜರಂಗಿ 2 ಸಿನಿಮಾದಲ್ಲಿ ಹಾಕಿರುವ ಸೆಟ್‌ನಲ್ಲಿ ಬಗ್ಗೆ ಹೇಳಬೇಕು. ಕಲಾ ನಿರ್ದೇಶಕ ರವಿ ಸಂತೆಹಕ್ಲು ಅದ್ದೂರಿ ವೆಚ್ಚದಲ್ಲಿ ಸೆಟ್‌ಗಳನ್ನ ಹಾಕಿದ್ದಾರೆ. ಭಜರಂಗಿ 2 ಸಿನಿಮಾದಲ್ಲಿ ನಾವು ಏನಾದರೂ ಜನರಿಗೆ ತಲುಪುದ್ದೀವಿ ಅಂದರೆ, ಮೊದಲಿಗೆ ಶಿವಣ್ಣ, ನಿರ್ದೇಶಕ ಹರ್ಷ ಹಾಗೂ ನಿರ್ಮಾಪಕ ಜಯಣ್ಣ ಭೋಗೇಂದ್ರ ಕಾರಣ ಅಂತಾರೆ. ಸದ್ಯ ಭಜರಂಗಿ 2 ಸಿನಿಮಾದಲ್ಲಿ ಅರಕನ ಪಾತ್ರದಲ್ಲಿ ಮಿಂಚಿರುವ ಚೆಲುವರಾಜ್ ಸಿನಿಮಾ ಪ್ರೇಕ್ಷಕರಿಗೆ ಎಷ್ಟು ಇಷ್ಟ ಆಗ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.