'ಮಾಲ್ಗುಡಿ ಡೇಸ್'..ಈ ಹೆಸರು ಕೇಳಿದಾಕ್ಷಣ ಕರಾಟೆ ಕಿಂಗ್ ಶಂಕರ್ನಾಗ್ ನೆನಪಾಗುತ್ತಾರೆ. ಆರ್ ಕೆ ನಾರಾಯಣ್ ಬರೆದ 'ಮಾಲ್ಗುಡಿ ಡೇಸ್' ಪುಸ್ತಕವನ್ನು ಆಧರಿಸಿ ತಯಾರಾದ ಈ ಟೆಲಿವಿಷನ್ ಸಿರೀಸ್ ಇಂದಿಗೂ ಬಹಳ ಫೇಮಸ್.
ಇದೀಗ 'ಮಾಲ್ಗುಡಿ ಡೇಸ್' ಹೆಸರಿನಲ್ಲಿ ಸ್ಯಾಂಡಲ್ವುಡ್ನಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾಗಾಗಿ ವಿಜಯ್ ರಾಘವೇಂದ್ರ ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಈ ಚಿನ್ನಾರಿ ಮುತ್ತ ವಿಶೇಷ ಹಾಗೂ ಪ್ರಮುಖ ಪಾತ್ರ ಮಾಡುತ್ತಿದ್ದು, ಅದಕ್ಕಾಗಿ 22 ಕೆಜಿ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್ನಲ್ಲಿ ಭಾರೀ ವರ್ಕೌಟ್ ಮಾಡುತ್ತಿದ್ದಾರೆ. ಬೆಳಗ್ಗೆ ಒಂದು ತಾಸು ಸಂಜೆ ಒಂದು ತಾಸು ಸೇರಿದಂತೆ ದಿನಕ್ಕೆ ಎರಡು ಗಂಟೆಗಳ ಕಾಲ ಜಿಮ್ನಲ್ಲಿ ಬೆವರು ಹರಿಸುತ್ತಿದ್ದಾರೆ. ವಿಜಯ್ ಈ ಸಿನಿಮಾದಲ್ಲಿ ಹಿಂದೆಂದೂ ಕಾಣದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಸಿನಿಮಾವನ್ನು ಕಿಶೋರ್ ಮೂಡಬಿದ್ರೆ ನಿರ್ದೇಶಿಸಿದ್ದಾರೆ. ಈಗಾಗಲೇ ತೀರ್ಥಹಳ್ಳಿ, ಆಗುಂಬೆ, ಕಳಸ, ಪಾಂಡಿಚೆರಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. 'ಮಾಲ್ಗುಡಿ ಡೇಸ್' ಚಿತ್ರವನ್ನು ಕೆ.ರತ್ನಾಕರ್ ನಿರ್ಮಿಸುತ್ತಿದ್ದಾರೆ.