ETV Bharat / sitara

ಅಮಿರ್​​​​ ಖಾನ್​​​​​ 'ಲಾಲ್​ ಸಿಂಗ್​​​ ಚಡ್ಡ' ಸಿನಿಮಾದಲ್ಲಿ ತಮಿಳಿನ ಈ ಮೇರು ನಟ - ತಮಿಳು ನಟ ವಿಜಯ್​ ಸೇತುಪತಿ

ಬಾಲಿವುಡ್​​ ವಲಯದಲ್ಲಿ ಹೊಸದೊಂದು ಸುದ್ದಿ ಹರಿದಾಡುತ್ತಿದ್ದು, ಲಾಲ್​​ ಸಿಂಗ್​​​ ಚಡ್ಡ ಸಿನಿಮಾದಲ್ಲಿ ಅಮಿರ್​​ ಖಾನ್​​ ಮತ್ತು ಕರೀನಾ ಕಪೂರ್​​ ಜೊತೆ ತಮಿಳು ನಟ ವಿಜಯ್​ ಸೇತುಪತಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

amir khan
ಅಮಿರ್​ ಖಾನ್​​
author img

By

Published : Nov 26, 2019, 4:05 PM IST

ಥಗ್ಸ್​​ ಆಫ್​ ಹಿಂದೂಸ್ಥಾನ್​​ ಸಿನಿಮಾ ನಂತರ ಅಮಿರ್​ ಖಾನ್​ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಲಾಲ್​ ಸಿಂಗ್​ ಚಡ್ಡ. ಈ ಸಿನಿಮಾದ ಪೋಸ್ಟರ್​ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ಅಮಿರ್​​ ಖಾನ್​​ ಸಿಖ್​​ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇನ್ನು ಈ ಹಿಂದೆ ಬಿಡುಗಡೆಯಾಗಿದ್ದ ಪೋಸ್ಟರ್​ನಲ್ಲಿ ದಪ್ಪ ಮೀಸೆ, ಗಡ್ಡ ಬಿಟ್ಟು ತಲೆಗೆ ಟರ್ಬನ್​​​ ಕಟ್ಟಿದ್ದ ಅಮಿರ್​ ಖಾನ್,​​ ಫೋಟೋ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.

ಇದೀಗ ಬಾಲಿವುಡ್​​ ವಲಯದಲ್ಲಿ ಹೊಸದೊಂದು ಸುದ್ದಿ ಹರಿದಾಡುತ್ತಿದ್ದು, ಅಮಿರ್​​ ಖಾನ್​​ ಮತ್ತು ಕರೀನಾ ಕಪೂರ್​​ ಜೊತೆ ತಮಿಳು ನಟ ವಿಜಯ್​ ಸೇತುಪತಿ ಲಾಲ್​ ಸಿಂಗ್​ ಚಡ್ಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

vijay setupati
ವಿಜಯ್​ ಸೇತುಪತಿ

ಇತ್ತೀಚೆಗೆ ಸಿನಿಮಾ ಕ್ಯಾಂಪೇನ್​​ ಒಂದರಲ್ಲಿ ಮಾತನಾಡಿರುವ ವಿಜಯ್​ ಸೇತುಪತಿ, ನನಗೆ ಬೇರೆ ಭಾಷೆಗಳಲ್ಲಿ ನಟಿಸುವುದಕ್ಕೆ ಕೊಂಚ ಭಯ ಇದೆ. ಯಾಕಂದ್ರೆ ಆ ಭಾಷೆ ಮತ್ತು ಸಂಸ್ಕೃತಿಯನ್ನು ನಾವು ತಿಳಿದಿರಬೇಕು. ಭಾಷೆಯನ್ನು ಯಾರು ಬೇಕಾದ್ರೂ ಸುಲಭವಾಗಿ ಕಲಿಯಬಹುದು. ಆದ್ರೆ ಆ ಭಾಷೆಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ. ಹೀಗೆ ಹೇಳುತ್ತ ತಾವು ಲಾಲ್​ ಸಿಂಗ್​ ಚಡ್ಡ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಪರೋಕ್ಷವಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇನ್ನು ಲಾಲ್​​ ಸಿಂಗ್​ ಚಡ್ಡ ಸಿನಿಮಾಕ್ಕೆ ಅದ್ವೈತ್​ ಚಂದನ್​ ಆಕ್ಷನ್​ ಕಟ್​​ ಹೇಳುತ್ತಿದ್ದು, ಅಮಿರ್​ ಖಾನ್​ ಮತ್ತು ಕಿರಣ್​​ ರಾವ್​​​​ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಮೂಲಗಳ ಪ್ರಕಾರ ಸಿನಿಮಾವು 2020ರ ಡಿಸೆಂಬರ್​ 25ಕ್ಕೆ ತೆರೆ ಮೇಲೆ ಬರುವ ಸಾಧ್ಯತೆಗಳಿವೆ.

Intro:Body:

mys cm

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.