ETV Bharat / sitara

ಡಿಯರ್ ಕಾಮ್ರೆಡ್​​ಗೆ ಸಿಗುತ್ತಾ ರಾಕಿಭಾಯ್ ಅನುಗ್ರಹ ? - ಕನ್ನಡತಿ ರಶ್ಮಿಕಾ ಮಂದಣ್ಣ

'ಡಿಯರ್ ಕಾಮ್ರೆಡ್' ಸಿನಿಮಾ ರಿಲೀಸ್​ಗೆ ಎದುರು ನೋಡುತ್ತಿರುವ ನಟ ವಿಜಯ್ ದೇವರಕೊಂಡ, ಪ್ರಮೋಷನ್​ಗೆ ಭರ್ಜರಿ ಪ್ಲಾನ್ ಹಾಕಿಕೊಂಡಿದ್ದಾರಂತೆ.

ಡಿಯರ್ ಕಾಮ್ರೆಡ್
author img

By

Published : Jul 12, 2019, 1:55 PM IST

ನಿನ್ನೆಯಷ್ಟೇ ಟ್ರೇಲರ್​ ರಿಲೀಸ್ ಮಾಡಿರುವ ಚಿತ್ರತಂಡ ಸದ್ಯ ಸಿನಿಮಾ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದೆ. ಎಲ್ಲೆಡೆ 'ಡಿಯರ್ ಕಾಮ್ರೆಡ್' ಪರಿಚಯಿಸಲು ಹೊರಟಿರುವ ವಿಜಯ್​, ಕನ್ನಡದ ಸೂಪರ್ ಸ್ಟಾರ್​ ಯಶ್ ಅವರ ಸಹಾಯ ಪಡೆಯಲು ಮುಂದಾಗಿದ್ದಾರಂತೆ.

ಬೆಂಗಳೂರಿನಲ್ಲಿ ತಮ್ಮ ಚಿತ್ರದ ಅದ್ಧೂರಿ ಆಡಿಯೋ ಫೆಸ್ಟಿವಲ್ ಕಾರ್ಯಕ್ರಮ ಹಮ್ಮಿಕೊಂಡು, ರಾಕಿಭಾಯ್ ಅವರನ್ನು ಆಹ್ವಾನಿಸಲಿದ್ದಾರಂತೆ. ಈ ಮೂಲಕ ಯಶ್ ಅಭಿಮಾನಿಗಳನ್ನು ತಮ್ಮ ಚಿತ್ರದತ್ತ ಸೆಳೆಯುವ ಪ್ಲಾನ್​ ಮಾಡಲಿದ್ದಾರಂತೆ. ಅದೇ ರೀತಿ ಕೊಚ್ಚಿ, ಚೆನ್ನೈ ಹಾಗೂ ಹೈದ್ರಾಬಾದ್​​ನಲ್ಲೂ ಈ ಆಡಿಯೋ ಫೆಸ್ಟಿವಲ್ ನಡೆಯಲಿದೆಯಂತೆ.

ಇನ್ನು ಕನ್ನಡತಿ ರಶ್ಮಿಕಾ ಮಂದಣ್ಣ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ಸ್ಯಾಂಡಲ್​ವುಡ್​ ಸೇರಿದಂತೆ ಪಂಚ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ವಿಜಯ್ ದೇವರಕೊಂಡ ಅವರ ಅರ್ಜುನ್ ರೆಡ್ಡಿ ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಹಿಟ್ ಆಗಿತ್ತು. ನಂತರ ಗೀತ ಗೋವಿಂದಂ ಸಿನಿಮಾಕ್ಕೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ತಮ್ಮ ಹಿಂದಿನ ಚಿತ್ರಗಳಿಗೆ ಸಿಕ್ಕ ಪ್ರೊತ್ಸಾಹ ಡಿಯರ್ ಕಾಮ್ರೆಡ್​ಗೂ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರಂತೆ ವಿಜಯ್​ ದೇವರಕೊಂಡ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.