ತಮ್ಮ ಮುಂಬರುವ ಸಿನಿಮಾದ ಶೂಟಿಂಗ್ಗಾಗಿ ಬಾಲಿವುಡ್ ನಟ ವಿಕ್ಕಿ ಕೌಶಲ್, ಮಾನುಷಿ ಚಿಲ್ಲರ್ ಮಧ್ಯಪ್ರದೇಶದ ಮಹೇಶ್ವರಕ್ಕೆ ತೆರಳಿದ್ದಾರೆ. ಈ ಸಿನಿಮಾಕ್ಕೆ ವಿಜಯ್ ಕೃಷ್ಣ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಯಶ್ ರಾಜ್ ಫಿಲ್ಮ್ ಬಂಡವಾಳ ಹೂಡುತ್ತಿದೆ.
ಹೆಸರಿಡದ ಈ ಚಿತ್ರದ ಶೂಟಿಂಗ್ ಕಳೆದ ನವೆಂಬರ್ನಿಂದಲೇ ಶುರುವಾಗಿದೆ. ಮತ್ತೊಷ್ಟು ಚಿತ್ರೀಕರಣಕ್ಕಾಗಿ ಇಂದು ಮಹೇಶ್ವರಕ್ಕೆ ತೆರಳಿದ್ದಾರೆ. ಇನ್ನು, ಒಂದೆರಡು ದಿನಗಳಲ್ಲಿ ಮತ್ತೊಂದು ಹಂತದ ಶೂಟಿಂಗ್ ಶುರುವಾಗಲಿದ್ದು, ವಿಕ್ಕಿ ಮತ್ತು ಮಾನುಷಿ ಚಿಲ್ಲರ್ ನಡುವಿನ ರೊಮ್ಯಾಂಟ್ ಸೀನ್ಗಳ ಚಿತ್ರೀಕರಣ ನಡೆಯಲಿದೆ.
ಮಾನುಷಿ ಜೊತೆ ನಿರ್ದೇಶಕ ವಿಜಯ್ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾದಲ್ಲೂ ಇಬ್ಬರು ಜೊತೆಗೆ ಕೆಲಸ ಮಾಡಿದ್ದರು. ಅಲ್ಲದೆ ಆ ಸಿನಿಮಾಕ್ಕೂ ಯಶ್ ರಾಜ್ ಫಿಲ್ಮ್ ಬಂಡವಾಳ ಹೂಡಿತ್ತು.