ETV Bharat / sitara

ಪ್ರತಿಭೆ ಮುಖ್ಯ, ನಾಯಕಿಯರ ಎತ್ತರವಲ್ಲ: ಹಿರಿಯ ನಿರ್ದೇಶಕ ಭಾರ್ಗವ ಅಭಿಮತ - ನಿರ್ದೇಶಕ ಭಾರ್ಗವ

ಚಿತ್ರದಲ್ಲಿ ನಟಿಸುವ ನಾಯಕಿಯರ ಎತ್ತರ ಗಣನೆಗೆ ಬರುವುದಿಲ್ಲ. ಹಿಂದಿನ ಕಾಲದ ಸಿನಿಮಾಗಳಲ್ಲಿ ರಾಜ್​ಕುಮಾರ್​-ಭಾರತಿ, ಅಮಿತಾಬ್ ಬಚ್ಚನ್-ಜಯಭಾದುರಿ ಜೋಡಿಯಾಗಿ ನಟಿಸಿದ್ದರು. ಅವರ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದ್ದರಿಂದ ಪ್ರತಿಭೆ ಬಹಳ ಮುಖ್ಯ ಎಂದು ಹಿರಿಯ ನಿರ್ದೇಶಕ ಭಾರ್ಗವ ಹೇಳಿದ್ದಾರೆ.

ನಿರ್ದೇಶಕ ಭಾರ್ಗವ
author img

By

Published : Sep 10, 2019, 5:59 PM IST

ನಾಯಕಿಯರಿಗೆ ಪ್ರತಿಭೆ ಬಹಳ ಮುಖ್ಯ ಎತ್ತರ ಅಲ್ಲ, ಎಂದು ಹಿರಿಯ ನಿರ್ದೇಶಕ ಭಾರ್ಗವ ಅಭಿಪ್ರಾಯಪಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಸೂರಜ್ ನಟನೆಯ 'ನಾನೇ ರಾಜ' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಭಾರ್ಗವ ಈ ಮಾತುಗಳನ್ನಾಡಿದರು.

'ನಾನೇ ರಾಜ' ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಭಾರ್ಗವ

ಗಣೇಶ್ ಸಹೋದರ ಸೂರಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ನಾನೇ ರಾಜ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ನಿನ್ನೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ ಭಾರ್ಗವ ಅವರನ್ನು ಆಹ್ವಾನಿಸಲಾಗಿತ್ತು. 'ನಾಯಕ ಹೈಟ್ ಇದ್ದು ಅವರ ಎತ್ತರಕ್ಕೆ ತಕ್ಕ ನಾಯಕಿಯ ಆಯ್ಕೆ ಮಾಡುವಲ್ಲಿ ತಡವಾಯಿತು ಎಂದು ನಿರ್ದೇಶಕ ಶ್ರೀನಿವಾಸ್ ಅವರ ಮಾತಿಗೆ ಪ್ರತಿಕ್ರಿಯಿಸಿದ ನಿರ್ದೇಶಕ ಭಾರ್ಗವ, ಚಿತ್ರರಂಗದಲ್ಲಿ ನಾಯಕಿಯರ ಹೈಟ್ ವಿಷಯವೇ ಅಲ್ಲ, ಪ್ರತಿಭೆ ಇದ್ದರೆ ಎಲ್ಲಾ ಸರಿಹೋಗುತ್ತದೆ. ಹಿಂದಿನ ಸಿನಿಮಾಗಳಲ್ಲಿ ಡಾ. ರಾಜ್​​ಕುಮಾರ್ ಅವರಿಗೆ ಮಂಜುಳಾ ನಾಯಕಿಯರಾಗಿದ್ದರು. ಅಮಿತಾಬ್ ಬಚ್ಚನ್​​ಗೆ ಜಯಬಾಧುರಿ ನಾಯಕಿಯಾಗಿದ್ದರು. ಇದೇ ಉದಾಹರಣೆಗೆ ಸಾಕು, ಆದ್ದರಿಂದ ನಾಯಕಿಯ ಹೈಟ್ ಮುಖ್ಯವೇ ಅಲ್ಲ ಎಂದು ತಮ್ಮ ಶಿಷ್ಯ ನಿರ್ದೇಶಕ ಶ್ರೀನಿವಾಸ್​​​ಗೆ ಕಿವಿಮಾತು ಹೇಳಿದರು. ಚಿತ್ರದಲ್ಲಿ ಸೂರಜ್​ಗೆ ಸೋನಿಕ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.

nane raja
ಸೂರಜ್, ಸೋನಿಕ ಗೌಡ

Intro:ಚಿತ್ರರಂಗದಲ್ಲಿ ನಾಯಕಿಯರ ಹೈಟ್ ಮ್ಯಾಟರ್ ಅಲ್ಲ ಮೇಟಿರಿಯಲ್ ಅಲ್ಲ, ಟ್ಯಾಲೆಂಟ್ ಇದ್ರೆ ಎಲ್ಲವನ್ನು ಎತ್ತಿಕೊಂಡು ಹೋಗುತ್ತೆ,ಎಂದು ಹಿರಿಯ ನಿರ್ದೇಶಕ ಭಾರ್ಗವ ಹೇಳಿದ್ದಾರೆ. ಎಸ್ ನಿನ್ನೆ ಭಾರ್ಗವ ಅವರ ಶಿಷ್ಯ ಶ್ರೀನಿವಾಸ ಶಿವಾರ ನಿರ್ದೇಶನ ಗೋಲ್ಡನ್ ಸ್ಟಾರ್ ಗಣೇಶ್ ಬ್ರದರ್ ಸೂರಜ್ ಕೃಷ್ಣ ನಟೆನೆಯ " ನಾನೇ ರಾಜ" ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕ ಶ್ರೀನಿವಾಸ್ ನಮ್ಮ ನಾಯಕ ಹೈಟ್ ಇದ್ದು ನಾಯಕಿರ ಆಯ್ಕೆ ತಡವಾಯಿತು,
ಅಲ್ಲದೆ ‌ನಮ್ಮ‌ಚಿತ್ರದ ನಾಯಕಿ ಸೋನಿಕ ಗೌಡ ಅವರನ್ನು ಸೂರಜ್ ಗೆ ಹೈಟ್ ನಲ್ಲಿ ಮ್ಯಾಚ್ ಮಾಡೋದು ಕಷ್ಟವಾಗಿತ್ತು ಎಂದು ಶ್ರೀನಿವಾಸ್ ಹೇಳಿದ್ರು.ಇನ್ನು ಇದಕ್ಕೆ ಅದೇ ವೇದಿಕೆಯಲ್ಲಿ ಪ್ರತಿಕ್ರಿಯೆ ನೀಡಿದ ಹಿರಿಯ ನಿರ್ದೇಶಕ. ಭಾರ್ಗವ ಹೈಟ್ ವಿಷಯ ಮ್ಯಾಟರೇ ಅಲ್ಲ ಅದು ಮೇಟಿರೀಯಲು ಅಲ್ಲ, ಯಾಕಂದ್ರೆ ಅವತ್ತೆ ರಾಜ್ ಕುಮಾರ್ ಅವರಿಗೆ ಮಂಜುಳ ನಾಯಕಿಯಾಗಿದ್ರು.ಅಲ್ಲದೆ ಅಮಿತಾಬ್ ಬಚ್ಚನ್ ಗೆ ಜಯ ಮಾಧುರಿ ನಾಯಕಿ ಆಗಿದ್ದಾರೆ.ಅದಷ್ಟೆ ಸಾಕು ಉದಾಹರಣೆಗೆ,ಅದ್ದರಿಂದ ನಾಯಕಿಯ ಹೈಟ್ ಅಲ್ಲ ಮುಖ್ಯ ಟ್ಯಾಲೆಂಟ್ ಅನ್ನೋದು ಇದ್ರೆ ಅದು ಎಲ್ಲವನ್ನು ಎತ್ತಿಕೊಂಡು ಹೋಗುತ್ತೆ,

Body:ಅಲ್ಲದೆ ಟ್ಯಾಲೆಂಟ್‌ ಹೈಟ್ ಗೀಟ್ ಎಲ್ಲವನ್ನು ಎತ್ತಿಕೊಂಡು ಹೋಗಿ ಬೆಳಸುತ್ತೆ,ಅದ್ದರಿಂದ ಹೈಟ್ ಇಸ್ ಎ ನಾಟ್ ಎ ಮ್ಯಾಟರ್ ಎಂದು ತಮ್ಮ ಶಿಷ್ಯ ನಿರ್ದೇಶಕ ಶ್ರೀನಿವಾಸ್ ಶಿವಾರಗೆ ಕಿವಿಮಾತು ಹೇಳಿದ್ರು.

ಸತೀಶ ಎಂಬಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.