ETV Bharat / sitara

ಟಾಲಿವುಡ್​​​ನಲ್ಲೂ ಮಿಂಚಲು ರೆಡಿಯಾದ ವೀಣಾ ಸುಂದರ್

author img

By

Published : Nov 3, 2020, 2:58 PM IST

'ಆ ಕರಾಳ ರಾತ್ರಿ' ಚಿತ್ರದ ಪಾತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ವೀಣಾ ಸುಂದರ್ ಇದೀಗ ಅದೇ ಪಾತ್ರವನ್ನು ತೆಲುಗಿನಲ್ಲಿ ಮಾಡಿದ್ದಾರೆ. ಈ ಸಿನಿಮಾ ತೆಲುಗಿನಲ್ಲಿ 'ಅನಗನಗಾ ಓ ಅತಿಥಿ' ಹೆಸರಿನಲ್ಲಿ ತಯಾರಾಗಿದ್ದು ಸಿನಿಮಾ ಆಹಾ ಪ್ಲಾಟ್​​​​​​​ಫಾರ್ಮ್​ನಲ್ಲಿ ಬಿಡುಗಡೆಯಾಗುತ್ತಿದೆ.

Veena Sundar in Tollywood
ವೀಣಾ ಸುಂದರ್

ತೆಲುಗು ಚಿತ್ರರಂಗದಲ್ಲಿ ಕನ್ನಡದ ಅನೇಕ ಪೋಷಕ ನಟ-ನಟಿಯರು ಈಗಾಗಲೇ ಗುರುತಿಸಿಕೊಂಡಿದ್ದಾರೆ. ಇದೀಗ ವೀಣಾ ಸುಂದರ್ ಕೂಡಾ ಟಾಲಿವುಡ್​​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಬೆಳ್ಳಿತೆರೆ, ಕಿರುತೆರೆ ಎರಡರಲ್ಲೂ ಪೋಷಕ ಪಾತ್ರಗಳ ಮೂಲಕ ಹೆಸರಾಗಿರುವ ವೀಣಾ ಸುಂದರ್ 'ಅನಗನಗಾ ಓ ಅತಿಥಿ' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ್ದಾರೆ.

Veena Sundar in Tollywood
ವೀಣಾ ಸುಂದರ್

ವೀಣಾ ಸುಂದರ್ ಸುಮಾರು 3 ದಶಕಗಳಿಂದ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಅತ್ತಿಗೆ, ಅಮ್ಮ, ಅಕ್ಕ, ಅತ್ತೆ ಯಾವುದೇ ಪಾತ್ರ ದೊರೆತರೂ ಮನೋಜ್ಞವಾಗಿ ಅಭಿನಯಿಸುವ ವೀಣಾ ಸುಂದರ್, ತೆಲುಗು ಪ್ರೇಕ್ಷಕರಿಗೂ ಪರಿಚಯವಾಗುತ್ತಿದ್ದಾರೆ. 2018 ರಲ್ಲಿ ಬಿಡುಗಡೆಯಾದ ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದ 'ಆ ಕರಾಳ ರಾತ್ರಿ' ಸಿನಿಮಾ ತೆಲುಗಿಗೆ 'ಅನಗನಗಾ ಓ ಅತಿಥಿ' ಹೆಸರಿನಲ್ಲಿ ರೀಮೇಕ್ ಆಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕೂಡಾ ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ.

Veena Sundar in Tollywood
'ಅನಗನಗಾ ಓ ಅತಿಥಿ' ಚಿತ್ರದಲ್ಲಿ ವೀಣಾ ಸುಂದರ್

'ಅನಗನಗಾ ಓ ಅತಿಥಿ' ಚಿತ್ರದಲ್ಲಿ ವೀಣಾ ಸುಂದರ್ ಅನ್ನಪೂರ್ಣ ಪಾತ್ರದಲ್ಲಿ ನಟಿಸಿದ್ದು, ಚಿತ್ರದ ವೀಣಾ ಸುಂದರ್ ಫಸ್ಟ್​​​​​​​​​​​​​​​​​ಲುಕ್ ಬಿಡುಗಡೆ ಮಾಡಲಾಗಿದೆ. ಆ ಕರಾಳ ರಾತ್ರಿ ಚಿತ್ರಕ್ಕಾಗಿ ವೀಣಾ ಸುಂದರ್ ರಾಜ್ಯ ಪ್ರಶಸ್ತಿ ಪಡೆದಿದ್ದರು. ಈ ಚಿತ್ರ ವೀಣಾ ಅವರ ಪಾಲಿಗೆ ಬಹಳ ವಿಶೇಷವಾದುದು. ಕನ್ನಡದಲ್ಲಿ ತಾವು ಮಾಡಿದ್ದ ಪಾತ್ರವನ್ನು ಮತ್ತೆ ತೆಲುಗಿನಲ್ಲಿ ಮಾಡಿರುವುದಕ್ಕೆ ವೀಣಾ ಸಂತೋಷ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.