ಬಿಗ್ ಬಾಸ್ ಸೀಸನ್ 7ರಲ್ಲಿ ಕೋಟ್ಯಂತರ ವೀಕ್ಷಕರ ಮನ ಗೆದ್ದಿರುವ ವಾಸುಕಿ ವೈಭವ್ ಅವರಿಗೆ ಕಿಚ್ಚ ಸುದೀಪ್ ಮಗಳು ಸಾನ್ವಿ ಕೂಡ ಅಭಿಮಾನಿಯಂತೆ.
ಬಿಗ್ ಬಾಸ್ ಶೋನ ಗ್ರ್ಯಾಂಡ್ ಫಿನಾಲೆ ದಿನ ಸಾನ್ವಿ ಸುದೀಪ್ ಕೂಡಾ ಆಗಮಿಸಿದ್ದರು. ವಾಸುಕಿ ವೈಭವ್ ನೋಡಿ ಸಾನ್ವಿ ಫಿದಾ ಆಗಿದ್ದರು. ಎಲ್ಲದಕ್ಕಿಂತಲೂ ಮುಖ್ಯವಾಗಿ ಕಿಚ್ಚ ಸುದೀಪ್ ಅವರು ವೇದಿಕೆಯಲ್ಲಿ ವಾಸುಕಿ ಅವರೊಂದಿಗೆ ನನ್ನ ಮಗಳು ನಿಮ್ಮ ಬಹುದೊಡ್ಡ ಅಭಿಮಾನಿ ಎಂದು ಹೇಳಿದ್ದರು.
ಇದೀಗ ಕಿಚ್ಚನ ಮುದ್ದು ಮಗಳಿಗಾಗಿ ವಾಸುಕಿ ವೈಭವ್ ಸುದೀಪ್ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ವಾಸುಕಿ ಅವರು ಸುದೀಪ್ ಕುಟುಂಬದವರೊಂದಿಗೆ ಮಧುರ ಕ್ಷಣಗಳನ್ನು ಕಳೆದಿದ್ದಾರೆ. ವಾಸುಕಿಯನ್ನು ಬಹಳ ಆದರದಿಂದ ಬರಮಾಡಿಕೊಂಡಿರುವ ಸುದೀಪ್ ಉತ್ತಮ ರೀತಿಯಲ್ಲಿ ಉಪಚರಿಸಿದ್ದಾರೆ.
ಇದರ ಜೊತೆಗೆ ಯಂಗ್ ಮ್ಯೂಸಿಕಲ್ ಡೈರೆಕ್ಟರ್ ಎಂದೇ ಖ್ಯಾತರಾಗಿರುವ ವಾಸುಕಿ ವೈಭವ್ ಅವರಿಗೆ ಕಿಚ್ಚನ ಕಡೆಯಿಂದ ಒಳ್ಳೆಯ ಆಫರ್ ದೊರೆತಿದೆ. ಅದೇನೆಂದರೆ ತಮ್ಮ ಮುಂದಿನ ಸಿನಿಮಾದಲ್ಲಿ ಸಂಗೀತ ನಿರ್ದೇಶನ ಮಾಡುವ ಅವಕಾಶವನ್ನು ವಾಸುಕಿ ಅವರಿಗೆ ಸುದೀಪ್ ನೀಡಿದ್ದಾರೆ.