ತಮ್ಮ ಕಂಚಿನ ಕಂಠ ಹಾಗೂ ಚಿರತೆ ನೋಟದಿಂದಲೇ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದಿರುವ ನಟ ಅಂದ್ರೆ ವಶಿಷ್ಠ ಸಿಂಹ. ತಮ್ಮ ವಿಭಿನ್ನ ಮ್ಯಾನರಿಂನಿಂದಲೇ ಗಮನ ಸೆಳೆದಿರುವ ಈ ಪ್ರತಿಭೆ, ಖಳನಟನಾಗಿ, ನಾಯಕನಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ಇಂಡಸ್ಟ್ರಿಗೆ ಬಂದ ಅಲ್ಪ ಸಮಯದಲ್ಲೇ ಸ್ಯಾಂಡಲ್ವುಡ್ನ ಬಹುತೇಕ ಸ್ಟಾರ್ ನಟರ ಜೊತೆ ವಶಿಷ್ಠ ಸಿಂಹ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಆ್ಯಂಗ್ರಿ ಯಂಗ್ ಮ್ಯಾನ್ಗೆ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡುವ ಆಸೆಯಂತೆ.
ಈಗಾಗಲೇ ಶಿವಣ್ಣ, ಗಣೇಶ್, ಶ್ರೀಮುರುಳಿ, ಯಶ್, ಜಗ್ಗೇಶ್ ಜೊತೆ ಆಕ್ಟ್ ಮಾಡಿದ್ದು, ಪುನೀತ್ ಸರ್, ಕಿಚ್ಚ ಸುದೀಪ್ ಹಾಗೂ ದರ್ಶನ್ ಜೊತೆ ಆಕ್ಟ್ ಮಾಡಬೇಕು. ನಾನೊಬ್ಬ ನಟ ಅಂತ ಗುರುತಿಸಿಕೊಂಡ ಮೇಲೆ ಕನ್ನಡದ ಎಲ್ಲಾ ನಟರ ಜೊತೆ ನಟಿಸಿದ್ದು, ಈ ಮೂರು ನಟರ ಜೊತೆ ನಟಿಸಿಲ್ಲ. ಅದ್ರೆ ಅಪ್ಪು ನಿರ್ಮಾಣ ಮಾಡ್ತಿರುವ ಮಾಯಾ ಬಜಾರ್ ಚಿತ್ರದಲ್ಲಿ ನಟಿಸ್ತಿದ್ದೀನಿ. ಅದಷ್ಟು ಬೇಗ ಅವರ ಸಿನಿಮಾದಲ್ಲೂ ನಟಿಸುತ್ತೇನೆ ಎಂದು ವಶಿಷ್ಠ ಸಿಂಹ 'ಕಾಲ ಚಕ್ರ' ಚಿತ್ರದ ಟೀಸರ್ ಕಾರ್ಯಕ್ರಮದಲ್ಲಿ ಹೇಳಿದರು.