ಕಳೆದ ಕೆದಿನಗಳ ಹಿಂದೆ ಮಹಾಮಳಗೆ ಉತ್ತರ ಕರ್ನಾಟಕ ತತ್ತರಿಸಿದ್ದು, ಮಳೆಯಿಂದ ಹಾನಿಗೊಳಗಾದ ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರವೆ ಹರಿದು ಬರುತ್ತಿದ್ದು, ಇದಕ್ಕೆ ಕನ್ನಡ ಸಿನಿಮಾರಂಗ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ 'ಟಗರು' ಸಿನಿಮಾದ ಚಿಟ್ಟೆ ಖ್ಯಾತಿಯ ವಶಿಷ್ಠ ಅವರು ಬೆಳಗಾವಿ ಹಾಗೂ ಅಥಣಿ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಸಹಾಯ ಮಾಡಿದ್ದಾರೆ.
ಸಂತ್ರಸ್ತರಿಗೆ ನೆರವಾಗಲೆಂದು ನಟ ವಶಿಷ್ಠ ಸಿಂಹ ಸ್ವಯಂ ಪ್ರೇರಿತರಾಗಿ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಸಹಾಯ ಹಸ್ತಕ್ಕಾಗಿ ಕರೆ ನೀಡಿದ್ದರು. ನಟ ಕರೆಗೆ ಹೂಗೊಟ್ಟು ಅಭಿಮಾನಿಗಳು ನೆರೆ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ವಶಿಷ್ಠ ಅವರ ಮನೆಗೆ ತಂದು ಕೊಡುತ್ತಿದ್ದಾರೆ.
![Bangalore](https://etvbharatimages.akamaized.net/etvbharat/prod-images/4182976_thum.jpg)
ಅಭಿಮಾನಿಗಳು ಪ್ರೀತಿಯಿಂದ ತಂದು ನೀಡಿದ ಆಹಾರ ಸಾಮಗ್ರಿಗಳನ್ನು ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗೆ ಎರಡು ಟ್ರಕ್ಗಳಲ್ಲಿ ಕಳಿಸಿದ್ದಾರೆ. ಇದರ ಜೊತೆ ಮತ್ತೆ ಗುರುವಾರ ಉತ್ತರ ಕರ್ನಾಟಕ್ಕೆ ಮತ್ತೆ ಐದು ಟ್ರಕ್ಗಳಷ್ಟು ಆಹಾರ ಸಾಮಗ್ರಿಗಳು,ಬೆಡ್ ಶೀಟ್ ,ಬಟ್ಟೆ ಮೆಡಿಸಿನ್ಗಳನ್ನು ಕಳಿಸಲು ವಶಿಷ್ಠ ಸಿದ್ಧತೆ ಮಾಡಿಕೊಂಡಿದ್ದಾರೆ.
ಇನ್ನೂ ಯಾರದ್ರೂ ದಾನಿಗಳು ನೆರೆ ಸಂತ್ರಸ್ತರಿಗೆ ನೆರವಾಗಲು ಇಚ್ಚಿಸುವವರು ವಶಿಷ್ಠ ಅವರ ಚಿಕ್ಕಲ್ಲಸಂದ್ರ ಮನೆಗೆ ಆಹಾರ ಸಾಮಗ್ರಿಗಳು, ಬಟ್ಟೆ ,ಬೆಡ್ ಶೀಟ್ ,ಮೆಡಿಸಿನ್ಗಳನ್ನು ತಲುಪಿಸಬಹುದಾಗಿದೆ. ಆ ವಸ್ತುಗಳು ಸಂತ್ರಸ್ತರಿಗೆ ತಲುಪಿಸುವ ಜವಾಬ್ದಾರಿಯನ್ನು ವಶಿಷ್ಠ ತೆಗೆದುಕೊಳ್ಳಲಿದ್ದಾರೆ.