ETV Bharat / sitara

'ವಿಜಯನರಸಿಂಹ'ನ ದತ್ತು ಪಡೆದ ವಸಿಷ್ಠ ಸಿಂಹ - ಸಿಂಹದ ಪರಿಯನ್ನು ದತ್ತು ಪಡೆದ ವಸಿಷ್ಠ ಸಿಂಹ

ಸ್ಯಾಂಡಲ್‌ವುಡ್ ನಟ ವಸಿಷ್ಠ ಸಿಂಹ 8 ತಿಂಗಳ ಸಿಂಹದ ಮರಿಯನ್ನು ದತ್ತು ಪಡೆಯುವ ಮುಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

'ವಿಜಯನರಸಿಂಹ'ನನ್ನು ದತ್ತು ಪಡೆದ ವಸಿಷ್ಠ ಸಿಂಹ

author img

By

Published : Jan 1, 2021, 5:51 PM IST

Updated : Jan 1, 2021, 9:09 PM IST

ಸ್ಯಾಂಡಲ್‌ವುಡ್ ನಟ ವಸಿಷ್ಠಸಿಂಹ 8 ತಿಂಗಳ ಸಿಂಹದ ಮರಿಯನ್ನು ದತ್ತು ಪಡೆಯುವ ಮೂಲಕ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದರು. ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಂಹದ ಮರಿ ದತ್ತು ಪಡೆದು ಅದಕ್ಕೆ ತಮ್ಮ ತಂದೆಯ ಹೆಸರಾದ 'ವಿಜಯನರಸಿಂಹ' ಎಂದು ನಾಮಕರಣ ಮಾಡಿದರು.

ಪ್ರಾಣಿಯ ಪಾಲನೆ, ಪೋಷಣೆಯ ವೆಚ್ಚವನ್ನು ಇವರೇ ಭರಿಸಲಿದ್ದಾರೆ. ಈ ವರ್ಷ ಕಾಡು, ವನ್ಯಜೀವಿ ಸಂರಕ್ಷಣೆಗೆ ಕೈ ಜೋಡಿಸುವ ಚಿಂತನೆಯೂ ಇದೆ ಎಂದು ಅವರು ಹೇಳಿದ್ದಾರೆ.

ವಸಿಷ್ಠ ಸಿಂಹ 'ರಾಜಾಹುಲಿ' ಸಿನಿಮಾ ಮೂಲಕ ಗಮನ ಸೆಳೆದ ನಟ. ನಂತರ 'ರುದ್ರತಾಂಡವ'ದಲ್ಲಿ ನಟಿಸಿದ್ದು 2016 ರಲ್ಲಿ ತೆರೆಕಂಡ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್ ಫೇರ್ ಮತ್ತು ಸೈಮಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೀಗ ಕೆಜಿಎಫ್​ನಲ್ಲೂ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಇವರು ಪರಭಾಷಾ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

'ವಿಜಯನರಸಿಂಹ'ನ ದತ್ತು ಪಡೆದ ವಸಿಷ್ಠ ಸಿಂಹ

Last Updated : Jan 1, 2021, 9:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.