ತಮಿಳು, ತೆಲುಗು ನಟಿಯಾಗಿ ಹಲವಾರು ಸಿನೆಮಾಗಳಲ್ಲಿ ಅಭಿನಯಿಸಿರುವ ವರಲಕ್ಷ್ಮಿ ಶರತ್ ಕುಮಾರ್ ಕನ್ನಡದಲ್ಲಿಯೂ ‘ರನ್ನ ಹಾಗೂ ವಿಸ್ಮಯ’ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ರೀಗ ಇವರು ತಮ್ಮ ಮದುವೆಯ ಕುರಿತಾಗಿ ಹಬ್ಬುತ್ತಿರುವ ಹಲವಾರು ವದಂತಿಗಳಿಂದಾಗಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ.
![VARALAKSHMI SARATH KUMAR](https://etvbharatimages.akamaized.net/etvbharat/prod-images/maanikya---sudeep-varalakshmi1590039360346-98_2105email_1590039371_992.jpg)
ಇಂತಹ ಗುಮಾನಿಗಳಿಗೆ ತೆರೆಎಳೆದಿರುವ ನಟಿ ವರಲಕ್ಷ್ಮಿ, ದಯವಿಟ್ಟು ನನ್ನ ಮದುವೆ ಬಗ್ಗೆ ಮಾಧ್ಯಮಗಳು ಪ್ರಕಟಣೆ ಮಾಡುವುದರಿಂದ ಹಿಂದೆ ಸರಿಯಿರಿ. ಮ್ಯಾರೇಜ್ ವಿಷಯ ಗುಟ್ಟಾಗಿ ಇಡುವಂತಹ ವಿಚಾರ ಅಲ್ಲ. ಅದನ್ನು ನಾನೇ ಸಂತೋಷವಾಗಿ ತಿಳಿಸುತ್ತೇನೆ ಎಂದಿದ್ದಾರಂತೆ.
ಕೆಲವು ಮಾಧ್ಯಮಗಳಲ್ಲಿ ವರಲಕ್ಷ್ಮಿ ಅವರ ವಿವಾಹ ನಟ ವಿಶಾಲ್ ಅಥವಾ ಸಿಂಬು ಜೊತೆ ಎಂದು ಬಣ್ಣಿಸಿದ್ದು, ಇದಕ್ಕೆ ಕಾರಣವಾಗಿದೆ. ‘ಸೇವ್ ಶಕ್ತಿ’ ಹೆಸರಿನಲ್ಲಿ ನಾನು ಕೆಲವು ಹೆಣ್ಣು ಮಕ್ಕಳ ಕನಸುಗಳನ್ನು ನನಸಾಗಿಸಲು ಹೊರಟಿದ್ದೇನೆ. 2017 ರ ವಿಶ್ವ ಮಹಿಳಾ ದಿನ ಅದು ಪ್ರಾರಂಭ ಆಗಿದೆ. ಆದರೆ, ಮಾಧ್ಯಮಕ್ಕೆ ನನ್ನ ಮದುವೆ ಬಗ್ಗೆಯೇ ಚಿಂತೆ ಏಕೆ ಎಂದು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
![VARALAKSHMI SARATH KUMAR](https://etvbharatimages.akamaized.net/etvbharat/prod-images/maanikya----varalakshmi1590039360346-68_2105email_1590039371_953.jpg)
ಕಲಾ ಪ್ರಪಂಚದಲ್ಲಿ ಇರುವವರಿಗೆ ತಮ್ಮ ಜೀವನ ನಡೆಸಲು ಅವಕಾಶ ಕೊಡಿ. ಗಾಸಿಪ್ನಿಂದ ಅನೇಕರ ಸಮಯ ವ್ಯರ್ಥ ಆಗುತ್ತಿದೆ ಎಂಬುದು ವರಲಕ್ಷ್ಮಿ ಅವರ ತರ್ಕ ಬದ್ದ ಕೋರಿಕೆಯಾಗಿದೆ.