ಕೊರೊನ ಮೂರನೇ ಅಲೆ ಕಡಿಮೆ ಆಗುತ್ತಿದಂತೆ ಕನ್ನಡ ಚಿತ್ರರಂಗದ ಚಟುವಟಿಕೆಗಳು ಚುರುಕಾಗಿವೆ. ಅದರಲ್ಲೂ ಚಿತ್ರಮಂದಿರಗಳಲ್ಲಿ ಶೇ. 100 ಪರ್ಸೆಂಟ್ ಪ್ರೇಕ್ಷಕರಿಗೆ ಅನುಮತಿ ನೀಡಿರೋ ಬೆನ್ನಲೇ ಸ್ಯಾಂಡಲ್ ವುಡ್ನಲ್ಲಿ ಸಾಲು ಸಾಲು ಸಿನಿಮಾ ಬಿಡುಗಡೆ ಆಗುತ್ತಿವೆ.
ಕಳೆದ ವಾರ ಬರೋಬ್ಬರಿ 7 ಸಿನಿಮಾಗಳು ಬೆಳ್ಳಿತೆರೆ ಮೇಲೆ ರಾರಾಜಿಸಿದ್ದವು. ಅದರೆ, ಈ ಏಳು ಸಿನಿಮಾಗಳಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ ಟೈಲ್ 2 ಚಿತ್ರವನ್ನು ಚಿತ್ರ ಪ್ರೇಮಿಗಳು ಕೈ ಹಿಡಿದು ಎರಡನೇ ವಾರಕ್ಕೆ ಕರೆದು ಕೊಂಡು ಹೋಗಿದ್ದಾರೆ. ಆದರೆ ಇನ್ನುಳಿದ ಆರು ಚಿತ್ರಗಳು ರಿಲೀಸ್ ಆಗಿದ್ದೆ ಸುದ್ದಿಯಾಗಿಲ್ಲ. ಈಗಿರುವಾಗ ಈ ವಾರ ಕೂಡ ಸ್ಯಾಂಡಲ್ ವುಡ್ ನಲ್ಲಿ ಆರು ಸಿನಿಮಾಗಳು ತೆರೆಕಂಡಿವೆ.
ಈ ಆರು ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೈಲರ್ ಹಾಗೂ ಹಾಡುಗಳಿಂದ ಸದ್ದು ಮಾಡಿದ ಸಿನಿಮಾ ಅಂದ್ರೆ ಅದು ಬೈ ಟು ಲವ್. ನಿರ್ದೇಶಕ ಹರಿ ಸಂತೋಷ್ ನಿರ್ದೇಶನದ ಧ್ವನೀರ್ ಹಾಗು ಶ್ರೀಲೀಲಾ ಅಭಿನಯದ ಬೈ ಟು ಲವ್ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಿದೆ.
ಈ ಸಿನಿಮಾ ಬಳಿಕ ಒಂದಿಷ್ಟು ವಿವಾದದಿಂದ ಗಮನ ಸೆಳೆದ ಸಿನಿಮಾ 'ವರದ'. ವಿನೋದ್ ಪ್ರಭಾಕರ್ ಮತ್ತೆ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿರುವ 'ವರದ' ಸಿನಿಮಾ ಕೂಡ 70 ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗಿದೆ. ನಿರ್ದೇಶಕ ಉದಯ್ ಪ್ರಕಾಶ್ ವರದ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಹಿಜಾಬ್ ಹಾಕಿಕೊಂಡು ಬರುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ: ಸಚಿವ ಆರ್. ಅಶೋಕ್ ಕಿಡಿ
ಕಿರುತೆರೆ ಹಾಗೂ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಅಭಿನಯದ ಚೊಚ್ಚಲ ಚಿತ್ರ 'ಬಹುಕೃತ ವೇಷಂ'. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಅಧರಿಸಿ ಬಂದ ಸಿನಿಮಾ. ಇದೂ ಸಹ ಇಂದು ಬಿಡುಗಡೆ ಆಗಿದೆ.
ಅದೇ ರೀತಿ ಮಗಳು ಜಾನಕಿ ಧಾರವಾಯಿ ಮೂಲಕ ಬಿಗ್ ಸ್ಕ್ರೀನ್ ನಲ್ಲಿ ಮಿಂಚುತ್ತಿರುವ ಗಾನವಿ ಲಕ್ಷಣ್ ಅಭಿನಯದ 'ಭಾವಚಿತ್ರ' ಎಂಬ ಸಿನಿಮಾ ಕೂಡ ಇಂದು ಬಿಡುಗಡೆ ಆಗಿದೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಕೃಷ್ಣ ಮಹೇಶ್ ಅಭಿನಯದ 'ಮಹಾರೌದ್ರಂ' ಎಂಬ ಸಿನಿಮಾ ಕೂಡ ಸೈಲೆಂಟ್ ಆಗಿ ಇಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ.
ಈ ಸಿನಿಮಾಗಳ ಮಧ್ಯೆ ಹೊಸಬರ ವಿಭಿನ್ನ ಪ್ರಯತ್ನ 'ಗಿಲ್ಕಿ' ಎಂಬ ಹೆಸರಿನ ಚಿತ್ರ ಕೂಡ, ಸದ್ದಿಲ್ಲದೇ ಪ್ರೇಕ್ಷಕರ ಮುಂದೆ ಬಂದಿದೆ. ವಿಶೇಷ ಅಂದರೆ ಈ ಆರು ಚಿತ್ರಗಳು ಒಂದಲ್ಲ ಒಂದು ವಿಶೇಷತೆಗಳಿಂದ ಸಿನಿ ರಸಿಕರಲ್ಲಿ ಕುತೂಹಲ ಮೂಡಿಸಿವೆ.
ಒಂದು ಕಡೆ ಕೊರೊನಾ ಹೊಡೆತಕ್ಕೆ ಜನರು ಮಂಕಾಗಿದ್ದು, ಜನರಲ್ಲಿ ಆರ್ಥಿಕ ಪರಿಸ್ಥಿತಿ ಹೇಳಿ ಕೊಳ್ಳುವಂತಿಲ್ಲ. ಜೊತೆಗೆ ಕೊರೊನಾದಿಂದ ಮುಚ್ಚಿದ್ದ ವಿದ್ಯಾಮಂದಿರಗಳು ಈಗ ಮತ್ತೆ ಬಾಗಿಲು ತೆರೆದಿದ್ದು, ವಿದ್ಯಾರ್ಥಿಗಳು ಮತ್ತು ಪೊಷಕರು ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿವಾರ ಆರು ಸಿನಿಮಾಗಳು ನಾ ಮುಂದು ತಾ ಮುಂದು ಅಂತ ರಿಲೀಸ್ ಆಗಿವೆ. ಈ ಸಿನಿಮಾಗಳನ್ನ ನೋಡುವರು ಯಾರು ಎಂಬ ಪ್ರಶ್ನೆ ಮೂಡಿದೆ.
ಈ ಬಗ್ಗೆ ಸಿನಿಮಾ ನಿರ್ಮಾಪಕರು ಮಾತನಾಡಿಕೊಂಡು ವಾರಕ್ಕೆ ಒಂದು ಅಥವಾ ಮೂರು ಸಿನಿಮಾ ಬಿಡುಗಡೆ ಮಾಡಿದ್ರೆ ಸಿನಿಮಾಗೆ ಹಾಕಿರುವ ಬಂಡವಾಳವನ್ನ ಮತ್ತೆ ಪಡೆಯಬಹುದು. ಇಲ್ಲಾ ಅಂದ್ರೆ ನಿರ್ಮಾಪಕರು ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಎನ್ನುತ್ತಾರೆ ಚಿತ್ರ ಪ್ರಿಯರು.