ETV Bharat / sitara

ಮತ್ತೆ ಸುದ್ದಿಯಾದ ವನಿತಾ...ಆದರೆ ಖಂಡಿತ ಮದುವೆ ವಿಚಾರಕ್ಕಲ್ಲ..! - Vanita in women centric movie

ಸುಮಾರು 25 ವರ್ಷಗಳ ನಂತರ ನಟಿ ವನಿತಾ ವಿಜಯ್ ಕುಮಾರ್ ಮತ್ತೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರಂತೆ. ಆ್ಯಡಮ್ ದಾಸನ್ ನಿರ್ದೇಶಿಸುತ್ತಿರುವ ಮಹಿಳಾ ಪ್ರಧಾನ ಚಿತ್ರದಲ್ಲಿ ವನಿತಾ ನಟಿಸುತ್ತಿದ್ದಾರೆ ಎನ್ನಲಾಗಿದೆ.

Vanita
ವನಿತಾ
author img

By

Published : Jan 28, 2021, 2:05 PM IST

ಲಾಕ್​ಡೌನ್ ಸಮಯದಲ್ಲಿ ತಮಿಳಿನ ಹಿರಿಯ ನಟ ವಿಜಯ್ ಕುಮಾರ್ ಪುತ್ರಿ ವನಿತಾ ಬಹಳ ಸುದ್ದಿಯಲ್ಲಿದ್ದರು. ಪೀಟರ್ ಪೌಲ್ ಎಂಬುವರೊಂದಿಗೆ ಮೂರನೇ ಮದುವೆಯಾಗಿ ಸುದ್ದಿಯಲ್ಲಿದ್ದ ವನಿತಾ, ಮದುವೆಯಾಗಿ ಕೆಲವು ದಿನಗಳ ನಂತರ ಪೀಟರ್ ಮನೆ ಬಿಟ್ಟು ಓಡಿಹೋಗಿದ್ದಾರೆ. ಪೀಟರ್ ತಮ್ಮ ಬಗ್ಗೆ ಸುಳ್ಳು ಹೇಳಿ ನನ್ನನ್ನು ನಂಬಿಸಿ ದ್ರೋಹ ಮಾಡಿದರು ಎಂದು ಗೋಳಾಡಿದ್ದರು.

ವನಿತಾ ವಿಜಯ್ ಕುಮಾರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ಸಿನಿಮಾ ವಿಚಾರಕ್ಕೆ. ಬಹಳ ವರ್ಷಗಳ ನಂತರ ವನಿತಾ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರಂತೆ. ವನಿತಾ, 1995 ರಲ್ಲಿ ವಿಜಯ್ ಜೊತೆ ಚಂದ್ರಲೇಖ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದ ನಂತರ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದ ವನಿತಾ ಮದುವೆಯಾದ ನಂತರ ಸಿನಿಮಾವನ್ನು ಬಿಟ್ಟು ತಮ್ಮ ವೈಯಕ್ತಿಕ ಜೀವನದತ್ತ ಗಮನ ನೀಡಿದರು.

ಇದನ್ನೂ ಓದಿ: ಡಾ. ರಾಜ್ ಪುತ್ರರಿಗಿಂತ ಸ್ನೇಹಮಯಿ ಅಂತೆ ಧ್ರುವ....ಹಾಗೆ ಹೇಳಿದ್ದು ಯಾರು ಗೊತ್ತಾ..?

ಸುಮಾರು ವರ್ಷಗಳ ನಂತರ ಕಮಲ್ ಹಾಸನ್ ನಡೆಸಿಕೊಡುತ್ತಿದ್ದ ಬಿಗ್​​ ಬಾಸ್ 3 ಶೋನಲ್ಲಿ ಭಾಗವಹಿಸುವ ಮೂಲಕ ಮತ್ತೆ ಮುನ್ನೆಲೆಗೆ ಬಂದ ವನಿತಾ, ತಮ್ಮದೇ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಸುಮಾರು 25 ವರ್ಷಗಳ ನಂತರ ಇದೀಗ ವನಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆ್ಯಡಮ್ ದಾಸನ್ ನಿರ್ದೇಶಿಸುತ್ತಿರುವ ಮಹಿಳಾ ಪ್ರಧಾನ ಚಿತ್ರದಲ್ಲಿ ವನಿತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಚಿತ್ರದಲ್ಲಿ ಬಾಬಿ ಸಿಂಹ ಹಾಗೂ ಕೀರ್ತಿ ಸುರೇಶ್ ಕೂಡಾ ಇರಲಿದ್ದಾರಂತೆ. ಚಿತ್ರದ ಬಗ್ಗೆ ಇನ್ನಿತರ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ರಿವೀಲ್ ಮಾಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.