ಸ್ಯಾಂಡಲ್ವುಡ್ನಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗಬೇಕು. ದರ್ಶನ್ ಅಭಿನಯದ ರಾಬರ್ಟ್ ಆದ್ರೂ ಪರವಾಗಿಲ್ಲ, ನನ್ನ ಸಿನಿಮಾ ರವಿ ಬೋಪಣ್ಣ ಆದ್ರೂ ಪರವಾಗಿಲ್ಲ. ದೊಡ್ಡ ಸಿನಿಮಾಗಳು ತೆರೆ ಕಂಡ್ರೆ ಸಿನಿಮಾ ನೋಡಲು ಥಿಯೇಟರ್ ಕಡೆ ಜನ ಬಂದೇ ಬರ್ತಾರೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 30 ವರ್ಷಗಳ ಹಿಂದೆ ನಾನು ಕನ್ನಡಿಗ ಎಂಬ ಸಿನಿಮಾ ಮಾಡಲು ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಸಿದ್ದೆ. ಆದರೆ ಆ ಸಿನಿಮಾ ಮಾಡುವ ಕಾಲ ಈಗ ಕೂಡಿ ಬಂದಿದೆ. ಕನ್ನಡಿಗ ಟೈಟಲ್ ಅನ್ನು ನಿರ್ಮಾಪಕ ಎನ್.ಎಸ್. ರಾಜ್ ಕುಮಾರ್ ಕೇಳಿದ್ದರು. ಆದ್ರೆ ನಾನು ಆ ಟೈಟಲ್ ಅನ್ನು ಕೊಡಲು ಸಾಧ್ಯವಿಲ್ಲ ಎಂದಿದ್ದೆ. ಬೇಸರ ಮಾಡಿಕೊಳ್ಳದ ರಾಜ್ ಕುಮಾರ್, ವೀರ ಕನ್ನಡಿಗ ಎಂಬ ಸಿನಿಮಾ ಮಾಡಿದ್ರು. ಇದೀಗ ಎನ್.ಎಸ್. ರಾಜ್ ಕುಮಾರ್ ನಿರ್ಮಾಣದಲ್ಲಿಯೇ ಕನ್ನಡಿಗ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಆ ಸಿನಿಮಾ ಈಗ ಸೆಟ್ಟೇರಿದೆ ಎಂದು ರವಿಮಾಮ ತಿಳಿಸಿದ್ರು.
![V ravaichandran playing lead role in kannadiga](https://etvbharatimages.akamaized.net/etvbharat/prod-images/9325782_thumb.jpg)
ಇನ್ನನ್ನು ಕನ್ನಡಿಗ ಸಿನಿಮಾ ನಿನ್ನೆ ಸೆಟ್ಟೇರಿದ್ದು, ಚಿತ್ರಕ್ಕೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರರಾಜ್ಕುಮಾರ್ ಚಾಲನೆ ನೀಡಿದ್ದಾರೆ.
![V ravaichandran playing lead role in kannadiga](https://etvbharatimages.akamaized.net/etvbharat/prod-images/9325782_thumb2.jpg)
ತಮ್ಮ ಈಶ್ವರಿ ಪ್ರೊಡಕ್ಷನ್ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಒನ್ ಅಂಡ್ ಓನ್ಲಿ ಎಂಬ ಹೆಸರಿನ ಆ್ಯಪ್ ಒಂದನ್ನು ಸಿದ್ಧಪಡಿಸಲಾಗುತ್ತದೆ. ಈ ಆ್ಯಪ್ನಲ್ಲಿ ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಮಾಹಿತಿಗಳು ಸಿಗಲಿವೆ ಎಂದಿದ್ದಾರೆ. ಅಲ್ಲದ್ದೆ ಇದೇ ಹಿನ್ನೆಲೆಯಲ್ಲಿಯೇ ನಮ್ಮ ಪ್ರೊಡಕ್ಷನ್ನಿಂದ ಹೊಸ ಸಿನಿಮಾ ಘೋಷಣೆಯಾಗಲಿದೆ ಎಂದರು.