'ಐರಾವತ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಮಿಂಚಿದ್ದ ಮಿಸ್ ದಿವ ಯೂನಿವರ್ಸ್ ಊರ್ವಶಿ ರೌಟೇಲ ನಂತರ ಕೆಲವೊಂದು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇದೀಗ ಅವರು ಮೋಹನ್ ಭಾರಧ್ವಾಜ್ ನಿರ್ದೇಶನದ 'ಬ್ಲ್ಯಾಕ್ ರೋಸ್' ಎಂಬ ತೆಲುಗು ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ.
ಊರ್ವಶಿ ರೌಟೇಲ ಅವರಿಗೆ ಸಿನಿಮಾಗಳಲ್ಲಿ ಅವಕಾಶ ದೊರೆಯುತ್ತಿರುವುದು ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಎಂದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ ಊರ್ವಶಿ ರೌಟೇಲ ಹಾಲಿನ ಬಾತ್ ಟಬ್ನಲ್ಲಿ ಮೀಯುತ್ತಿರುವ ಫೊಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಫೋಟೋ ಬಹಳ ವೈರಲ್ ಕೂಡಾ ಆಗಿತ್ತು. ಊರ್ವಶಿ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 26 ಮಿಲಿಯನ್ ಫಾಲೋವರ್ಸ್ಗಳಿದ್ದಾರೆ.
ಈಗ ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ಈ ಹಾಟ್ ಹುಡುಗಿ ಮುಂದಿನ ದಿನಗಳಲ್ಲಿ ಪ್ರಭಾಸ್ ಹಾಗೂ ಅಲ್ಲು ಅರ್ಜುನ್ ಜೊತೆ ನಟಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ 'ಬ್ಲ್ಯಾಕ್ ರೋಸ್' ಚಿತ್ರಕ್ಕೆ ಸಂಪತ್ ನಂದಿ ಕಥೆ ಬರೆದು ಒಂದು ಪಾತ್ರ ಕೂಡಾ ಮಾಡುತ್ತಿದ್ದಾರೆ. ಈ ಕಥೆ ನನಗಾಗಿ ಬರೆದಿದ್ದು ಪಾತ್ರವನ್ನು ಕೂಡಾ ನನ್ನನ್ನು ಮನಸ್ಸಿನಲ್ಲಿಟ್ಟುಕೊಂಡೇ ಸೃಷ್ಟಿಸಲಾಗಿದೆ ಎಂದು ಊರ್ವಶಿ ರೌಟೇಲ ಹೇಳಿಕೊಂಡಿದ್ದಾರಂತೆ. ಇದೊಂದು ಎಮೋಷನಲ್ ಥ್ರಿಲ್ಲರ್ ಚಿತ್ರವಾಗಿದ್ದು ಚಿತ್ರಕ್ಕೆ ಮಣಿ ಶರ್ಮ ಸಂಗೀತ, ಸೌಂದರ್ ರಾಜನ್ ಛಾಯಾಗ್ರಹಣವಿದೆ.