ಮುಂಬೈ: ಬಾಲಿವುಡ್ನ 'ಉರಿ' ಚಿತ್ರದಲ್ಲಿ ನಟನೆ ಮಾಡಿದ್ದ ಖ್ಯಾತ ಧಾರಾವಾಹಿ ನಟ ಮೋಹಿತ್ ರೈನಾ ಸೀಕ್ರೆಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೆಳತಿ ಆದಿತಿ ಜೊತೆ ಮದುವೆ ಮಾಡಿಕೊಂಡಿರುವ ಫೋಟೋವನ್ನು ಒಂದು ದಿನ ತಡವಾಗಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಡಿಸೆಂಬರ್ 31ರಂದು ಸಪ್ತಪದಿ ತುಳಿದಿರುವುದಾಗಿ ತಿಳಿದು ಬಂದಿದ್ದು, ಇದರ ಫೋಟೋ ಇದೀಗ ವೈರಲ್ ಆಗಿವೆ. ಜೊತೆಗೆ ಇನ್ಸ್ಟಾಗ್ರಾಂನಲ್ಲಿ ಖುದ್ದಾಗಿ ಮೋಹಿತ್ ರೈನಾ ಹಂಚಿಕೊಂಡಿದ್ದಾರೆ.
ಇದನ್ನೂ ಓದಿರಿ: ಡಿ. 31ರಂದು ಭರ್ಜರಿ ಲಿಕ್ಕರ್ ಮಾರಾಟ.. ಸರ್ಕಾರದ ಖಜಾನೆಗೆ ಏರಿತು ಕಿಕ್ಕು
'ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ. ಅನೇಕ ಅಡೆತಡೆ ಭೇದಿಸಿ, ಹಲವು ಭರವಸೆಗಳೊಂದಿಗೆ ಹೆತ್ತವರ ಆಶೀರ್ವಾದದೊಂದಿಗೆ ಇಬ್ಬರು ಮುಂದೆ ಸಾಗಲು ನಿರ್ಧರಿಸಿದ್ದೇವೆ. ಈ ಹೊಸ ಪ್ರಯಾಣದಲ್ಲಿ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ನಮಗೆ ಬೇಕು' ಎಂದು ತಿಳಿಸಿದ್ದಾರೆ.
ದೇವೋಂಕೆ ದೇವ್ ಮಹಾದೇವ್ ಧಾರಾವಾಹಿಯಲ್ಲಿ ಶಿವನ ಪಾತ್ರ ನಿರ್ವಹಿಸಿರುವ ಮೋಹಿತ್ ರೈನಾ ಅನೇಕ ವೆಬ್ ಸೀರಿಸ್ಗಳಲ್ಲಿ ನಟಿಸಿದ್ದು, ವಿಕ್ಕಿ ಕೌಶಲ್ ನಟನೆಯ ಉರಿ ಚಿತ್ರದಲ್ಲೂ ಗಮನ ಸೆಳೆದಿದ್ದರು.