ಕೊರೊನಾ ಎರಡನೇ ಅಲೆಯಿಂದ ಕಳೆದ ಎರಡು ತಿಂಗಳಿನಿಂದ, ಇಡೀ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸ್ತಬ್ಧ ಆಗಿತ್ತು. ರಾಜ್ಯ ಸರ್ಕಾರ ಹಂತ ಹಂತವಾಗಿ ಲಾಕ್ ಡೌನ್ ತೆರವು ಮಾಡುತ್ತಿರುವ ಬೆನ್ನಲ್ಲೇ ಸಿನಿಮಾ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಕೊರೊನಾಯಿಂದ ಅರ್ಧಕ್ಕೆ, ನಿಂತಿದ್ದ ಸ್ಟಾರ್ ನಟರ ಸಿನಿಮಾಗಳ ಚಿತ್ರೀಕರಣ ಪುನಾರಂಭವಾಗಿವೆ.
ಕಳೆದ ಎರಡು ತಿಂಗಳಿಂದ ಆಲ್ ಮೋಸ್ಟ್, ಕನ್ನಡದ ಎಲ್ಲಾ ಸಿನಿಮಾ ಶೂಟಿಂಗ್‌ಗಳು ಸ್ಥಗಿತಗೊಂಡಿತ್ತು. ಆದ್ರೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಅಕ್ಕ ಪಕ್ಕದ ಇಂಡಸ್ಟ್ರಿಗಳಂತೆ ಚಿತ್ರೀಕರಣ ಪ್ರಾರಂಭವಾಗುತ್ತಿವೆ. ಡೈರೆಕ್ಟರ್ ಆರ್. ಚಂದ್ರು ನಿರ್ದೇಶನದ, ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಕಬ್ಬ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿದೆ.
ಕೊರೊನಾ ಎರಡನೇ ಅಲೆ ಸ್ಟಾರ್ಟ್ ಆಗುವುದಕ್ಕಿಂತ ಮುಂಚೆ, ನಿರ್ದೇಶಕ ಆರ್ ಚಂದ್ರು, ಮಿನರ್ವ ಮಿಲ್ಸ್ನಲ್ಲಿ ಬಹುಕೋಟಿ ವೆಚ್ಚದಲ್ಲಿ ಸೆಟ್ಟು ಹಾಕಿ, ಅದ್ಧೂರಿ ಆ್ಯಕ್ಷನ್ ಸೀಕ್ವೆನ್ಸ್ಗಳನ್ನ ಚಿತ್ರೀಕರಣ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ಕೊರೊನಾ ಹೆಚ್ಚಾಗಿ ಲಾಕ್ ಡೌನ್ ಮಾಡಲಾಯಿತು. ಈಗ ಮತ್ತೆ ಕಬ್ಜ ಸಿನಿಮಾದ ಚಿತ್ರೀಕರಣವನ್ನ ಮಾಡಲಾಗುತ್ತಿದೆ. ನಿರ್ದೇಶಕ ಆರ್ ಚಂದ್ರು, ಹೇಳುವ ಹಾಗೇ ಮುಕ್ಕಾಲು ಭಾಗ ಚಿತ್ರೀಕರಣ ಮಾಡಲಾಗಿದೆ.
ಕಬ್ಜ ಸಿನಿಮಾ 80ರ ದಶಕದ ಬ್ಯಾಕ್ ಟ್ರಾಪ್ನಲ್ಲಿ ನಡೆಯುವ ರೌಡಿಸಂ ಕಥೆ. ಈ ಚಿತ್ರದಲ್ಲಿ ಉಪೇಂದ್ರ ರೆಟ್ರೋ ಸ್ಟೈಲಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿಚ್ಚ ಸುದೀಪ್ ಕೂಡ ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ. ಸುದೀಪ್ ಹಾಗು ಉಪೇಂದ್ರ ನಡುವಿನ ಚಿತ್ರೀಕರಣ ಬಾಕಿ ಇದ್ದು, ಸದ್ಯದಲ್ಲೇ ಶೂಟಿಂಗ್ ನಡೆಸಲು ನಿರ್ದೇಶಕ ಆರ್ ಚಂದ್ರು ಪ್ಲಾನ್ ಮಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಶಿವಪ್ಪ ಸಿನಿಮಾದ ಶೂಟಿಂಗ್ ಕೂಡ, ಕಳೆದ ಭಾನುವಾರದಿಂದಲೇ ಪ್ರಾರಂಭವಾಗಿದೆ.
ಒಟ್ಟಿನಲ್ಲಿ ಲಾಕ್‌ಡೌನ್ ನಂತರ ಸ್ಯಾಂಡಲ್‌ವುಡ್ ಮತ್ತೆ ಚುರುಕಾಗಿದ್ದು, ಸಿನಿಮಾ ಕಾರ್ಮಿಕರು, ತಂತ್ರಜ್ಞರು, ನಿರ್ದೇಶಕ ಹಾಗು ನಿರ್ಮಾಪಕರಲ್ಲಿ ಮಂದಹಾಸ ಮೂಡಿದೆ.