'ಕಬ್ಜ', ಆರ್. ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ ಸಿನಿಮಾ. ಕೆಲವು ದಿನಗಳ ಹಿಂದೆ ವೈರಟಿ ಬಗೆಯ ಸೆಟ್ ಹಾಕಿ ಸುಮಾರು 25 ಬಂದೂಕುಧಾರಿಗಳು ಮತ್ತು ಶಾರ್ಪ್ ಶೂಟರ್ಗಳ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಆ್ಯಕ್ಷನ್ ಮಾಡುವ ಸನ್ನಿವೇಶವನ್ನು ನಿರ್ದೇಶಕ ಆರ್. ಚಂದ್ರು ಚಿತ್ರೀಕರಿಸಿಕೊಂಡಿದ್ದರು.
60-70 ದಶಕದ ಸೆಟ್ ಹಾಕಿ ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಇದೀಗ 'ಗಂಧದ ಗುಡಿ' ಚಿತ್ರದಲ್ಲಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲು ಹಾಗೂ 'ಶೋಲೆ' ಚಿತ್ರದಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಬಳಸಿದ್ದ 70 ರ ದಶಕದ ಪಿಸ್ತೂಲುಗಳನ್ನು ಈ ಚಿತ್ರದಲ್ಲಿ ಬಳಸಲಾಗುತ್ತಿದೆ. ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ನಡೆಯುತ್ತಿರುವ ಶೂಟಿಂಗ್ನಲ್ಲಿ ಹಳೆಯ ಕಾಲದ ಪಿಸ್ತೂಲು ಹಾಗೂ ಬಂದೂಕುಗಳನ್ನು ಬಳಲಾಗುತ್ತಿದೆ. ಅಣ್ಣಾವ್ರು ಹಾಗೂ ಅಮಿತಾಬ್ ಬಚ್ಚನ್ ಬಳಸಿದ ರಿವಾಲ್ವರ್ಗಳನ್ನು ತಮ್ಮ ಚಿತ್ರದಲ್ಲಿ ಮರು ಬಳಕೆ ಮಾಡುತ್ತಿರುವುದಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಸ್ವತಃ ಉಪೇಂದ್ರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಜಗಪತಿ ಬಾಬು , ಅತುಲ್ ಕುಲಕರ್ಣಿ, ಪ್ರದೀಪ್ ರಾವತ್, ನಾನಾ ಪಟೇಕರ್, ಜೈಪ್ರಕಾಶ್ ರೆಡ್ಡಿ, ಪ್ರದೀಪ್ ರಾವತ್ ಸೇರಿದಂತೆ ಇತರ ಭಾಷೆಯ ಖಳನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
- " class="align-text-top noRightClick twitterSection" data="">
'ಕಬ್ಜ' ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದರೆ, ಅರ್ಜುನ್ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ. ಉಪೇಂದ್ರ ರೆಟ್ರೋ ಲುಕ್ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ರಿಯಲ್ ಸ್ಟಾರ್ ಮಿಂಚಲಿದ್ದಾರೆ. ನಿರ್ದೇಶಕ ಆರ್. ಚಂದ್ರು, ನಿರ್ದೇಶನದ ಜೊತೆಗೆ ಅದ್ದೂರಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಿಸಲಾಗುತ್ತಿದ್ದು ಮಲಯಾಳಂ, ಹಿಂದಿ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ಡಬ್ ಮಾಡಲಾಗುತ್ತಿದೆ.