ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂಬುದನ್ನು ಕೇಳಿ ತಮಗೆ ದಿಗ್ಭ್ರಮೆಯಾಗಿದೆ ಎಂದು ನಟ, ನಿರ್ದೇಶಕ ಉಪೇಂದ್ರ ಹೇಳಿದ್ದಾರೆ.
ತಮ್ಮ ಮುಂಬರುವ 'ಕಬ್ಜ' ಚಿತ್ರದ ಬಗ್ಗೆ ಎಲ್ಲಾ ಭಾಷೆಯರು ತಿಳಿದುಕೊಳ್ಳಲಿ ಅಂತಾ ನಡೆದ ವೆಬ್ಸೈಟ್ ಲೋಕಾರ್ಪಣೆ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬುದ್ಧಿವಂತ, ಡ್ರಗ್ಸ್ ಮಾಫಿಯಾ ಬಗ್ಗೆ ನನಗೆನೂ ಗೊತ್ತಿಲ್ಲ. ಪಾರ್ಟಿಗಳ ಸಂದರ್ಭದಲ್ಲಿ ಡ್ರಗ್ಸ್ ಹೇಗೆ ತೆಗೆದುಕೊಳ್ಳುತ್ತಾರೆ ಅನ್ನೋದು ನನಗೆ ಅರಿವಿಲ್ಲ. ನಾನು ಕೂಡ ಯಾವತ್ತೂ ನೋಡಿಲ್ಲ ಅಂತಾ ಹೇಳಿದ್ರು.
ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ಇದ್ದಿರುವುದೇ ನಿಜವಾಗಿದ್ರೆ, ಅದರಲ್ಲಿ ಯಾರೆಲ್ಲ ಪಾಲ್ಗೊಂಡಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಹೊರಬರುತ್ತೆ. ಈ ಬಗ್ಗೆ ಏನೂ ಗೊತ್ತಿಲ್ಲದೆ ಮಾತನಾಡೋದು ಸರಿಯಲ್ಲ. ಸತ್ಯ ಹೊರಬಂದ ಮೇಲೆ ಎಲ್ಲರಿಗೂ ತಿಳಿಯುತ್ತೆ ಎಂದು ತಿಳಿಸಿದ್ರು.
ಇನ್ನು ನಶೆಯ ಗುಂಗು ಯಾವತ್ತೂ ಶಾಶ್ವತ ಅಲ್ಲ. ಯುವ ಜನಾಂಗ ದಯವಿಟ್ಟು ಡ್ರಗ್ಸ್ನಿಂದ ದೂರ ಇರಿ ಅಂತಾ ಉಪೇಂದ್ರ ಕಿವಿಮಾತು ಹೇಳಿದ್ರು.