ದಾವಣಗೆರೆ: ಸಿನಿಮಾ ಹೀರೋಗಳ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗಾಗಿ ಹರಕೆ ಹೊತ್ತುಕೊಳ್ಳುವುದು ಹೊಸದೇನಲ್ಲ. ಆದರೆ, ಉಪೇಂದ್ರ ಅವರ ಕಟ್ಟಾ ಅಭಿಮಾನಿವೋರ್ವ ಉಪ್ಪಿ ಮತ್ತೆ ನಿರ್ದೇಶನಕ್ಕೆ ಮರಳುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾನು ಮಾಡಿದ್ದ ಶಪಥಕ್ಕೆ ಇತಿಶ್ರೀ ಹಾಡಿದ್ದಾರೆ.
ದಾವಣಗೆರೆಯ ಆಟೋ ಚಾಲಕ ರಮೇಶ್ಗೆ ಉಪೇಂದ್ರ ಎಂದರೆ ಬಹಳ ಇಷ್ಟ. ಉಪೇಂದ್ರ ನಿರ್ದೇಶನಕ್ಕೆ ಮರಳುವವರೆಗೆ ಕ್ಷೌರ ಮಾಡಿಸುವುದಿಲ್ಲ ಎಂದು ಈ ಅಭಿಮಾನಿ ಶಪಥ ಮಾಡಿದ್ದರು. ಈಗ ಉಪೇಂದ್ರ ಡೈರೆಕ್ಷನ್ಗೆ ಮರಳುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಬಹಳ ದಿನಗಳಿಂದ ಬೆಳೆಸಿದ್ದ ಗಡ್ಡ ಹಾಗೂ ತಲೆಕೂದಲನ್ನು ಕ್ಷೌರ ಮಾಡಿಸಿದ್ದಾರೆ. ನಟನೆ ಹಾಗೂ ರಾಜಕೀಯದಲ್ಲಿ ಬ್ಯುಸಿಯಾದ ಕಾರಣ ರಿಯಲ್ ಸ್ಟಾರ್ ನಿರ್ದೇಶನಕ್ಕೆ ಬ್ರೇಕ್ ನೀಡಿದ್ದರು. ಅಂದಿನಿಂದ ರಮೇಶ್ ತಲೆಗೂದಲು ಬಿಟ್ಟಿದ್ದರು. ಉಪೇಂದ್ರ ಕಟ್ಟಾ ಅಭಿಮಾನಿಯಾಗಿರುವ ಇವರು ಉಪ್ಪಿ ನಟಿಸಿರುವ ಎಲ್ಲಾ ಸಿನಿಮಾಗಳನ್ನೂ ನೋಡಿದ್ದಾರೆ. ವರ್ಷಕ್ಕೆ ಉಪೇಂದ್ರ ಅವರ 2 ಸಿನಿಮಾಗಳಾದರೂ ಬರಬೇಕು ಎಂಬುದು ರಮೇಶ್ ಅವರ ಆಸೆ. ಆದ್ದರಿಂದ ಅವರು ಗಡ್ಡ ಬಿಟ್ಟಿದ್ದರು. ಇದೀಗ ಕ್ಷೌರ ಮಾಡಿಸುವ ಮೂಲಕ ತಾವು ಮಾಡಿದ್ದ ಶಪಥವನ್ನು ಪೂರ್ಣಗೊಳಿಸಿದ್ದಾರೆ.
![Upendra fan](https://etvbharatimages.akamaized.net/etvbharat/prod-images/kn-dvg-01-24-uppi-abhimana-script-7203307_24122019114553_2412f_1577168153_89.jpg)