ನವದೆಹಲಿ: ದುಬೈನಲ್ಲಿ ನಡೆದ ಇಂಡಿಯಾ ಎಕ್ಸ್‌ಪೋದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
-
@ianuragthakur dance with @RanveerOfficial pic.twitter.com/EF12kpyqyO
— Uddeshya Thakur (@UddeshyThakur16) March 28, 2022 " class="align-text-top noRightClick twitterSection" data="
">@ianuragthakur dance with @RanveerOfficial pic.twitter.com/EF12kpyqyO
— Uddeshya Thakur (@UddeshyThakur16) March 28, 2022@ianuragthakur dance with @RanveerOfficial pic.twitter.com/EF12kpyqyO
— Uddeshya Thakur (@UddeshyThakur16) March 28, 2022
ಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಆಜಾದಿ ಕಾ ಅಮೃತಮಹೋತ್ಸವದ ನಿಮಿತ್ತ ಇಂಡಿಯಾ ಪೆವಿಲಿಯನ್‌ನಲ್ಲಿ 'ದಿ ಗ್ಲೋಬಲ್ ರೀಚ್ ಆಫ್ ಇಂಡಿಯನ್ ಮೀಡಿಯಾ & ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿ' ಕುರಿತು ನಟರೊಂದಿಗೆ ಸಂವಾದ ನಡೆಸಲು ಠಾಕೂರ್ ಎಕ್ಸ್‌ಪೋಗೆ ಆಗಮಿಸಿದ್ದರು.
ವೇದಿಕೆ ಮೇಲಿದ್ದ ಕೆಂಪು ಖುರ್ತಾ ಧರಿಸಿದ್ದ ರಣವೀರ್ ಸಿಂಗ್ ಮೊದಲು ಒಂದು ಸ್ಟೆಪ್ ಹಾಕಿ ಸಚಿವರನ್ನು ಹುರಿ ದುಂಬಿಸಿದರು. ನಂತರ ಠಾಕೂರ್ ಕೂಡ ಬ್ಲಾಕ್‌ಬಸ್ಟರ್ ಸಿನಿಮಾ ಬಾಜಿರಾವ್ ಮಸ್ತಾನಿಯ ಹಿಟ್ ಹಾಡು ಮಲ್ಹಾರಿಗೆ ನೃತ್ಯ ಮಾಡಿದರು. ಸ್ಥಳದಲ್ಲಿ ನೆರದಿದ್ದ ಪ್ರೇಕ್ಷಕರು ಓಹೋ... ಎಂದು ಕೂಗಿದರು.
ದುಬೈ ಎಕ್ಸ್‌ಪೋದಲ್ಲಿ ಇಂಡಿಯಾ ಪೆವಿಲಿಯನ್ ವೀಕ್ಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಯೋಗ, ಆಯುರ್ವೇದ, ಪ್ರವಾಸೋದ್ಯಮ, ಜವಳಿ, ಕಾಸ್ಮಿಕ್ ವರ್ಲ್ಡ್ ಹಾಗೂ ಸಿನಿಮಾ ಪ್ರಪಂಚ ಸೇರಿದಂತೆ ಭಾರತೀಯ ಪ್ರದರ್ಶನಗಳನ್ನು ವೀಕ್ಷಿಸಲು ಜನರು ಉತ್ಸುಕರಾಗಿದ್ದಾರೆ. ಸುಮಾರು 17 ಲಕ್ಷ ಜನರು ಇಂಡಿಯಾ ಪೆವಿಲಿಯನ್‌ಗೆ ಭೇಟಿ ನೀಡಿದ್ದಾರೆ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಭಾರತೀಯ ಮನರಂಜನೆಯು ಜಾಗತಿಕವಾಗಿ ಸ್ಫೋಟಗೊಳ್ಳಲಿದೆ. ನಮ್ಮ ಕಥೆಗಳು ಜನರೊಂದಿಗೆ ಪ್ರತಿಧ್ವನಿಸುವ ಜೊತೆಗೆ ಸಾಂಸ್ಕೃತಿಕ ಗಡಿಗಳನ್ನು ಮೀರಿವೆ. ವಿದೇಶದಲ್ಲಿರುವ ಭಾರತೀಯರು ಚಲನಚಿತ್ರಗಳ ಮೂಲಕ ಭಾರತದೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂದು ನಟ ರಣವೀರ್ ಸಿಂಗ್ ತಿಳಿಸಿದರು.
ಇದನ್ನೂ ಓದಿ: ಚಿತ್ರ ಭಾರತಿ ಚಲನಚಿತ್ರೋತ್ಸವಕ್ಕೆ ತೆರೆ : 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ, ನಟಿಗೆ ಸನ್ಮಾನ