ETV Bharat / sitara

ಚಿತ್ರದ ಪ್ರಮೋಷನ್​​​ಗೆ ಬಾರದೆ ನಿರ್ಮಾಪಕರಿಗೆ ತೊಂದರೆ? ಬಿಗ್​​ಬಾಸ್ ಸಂಜನಾ ಮೇಲೆ ಆರೋಪ - Udumba movie

ನಮ್ಮ ಚಿತ್ರದ ಐಟಂ ಸಾಂಗ್​​ವೊಂದರಲ್ಲಿ ನಟಿಸಿರುವ ನಟಿ ಸಂಜನಾ ಹಣ ಪಡೆದು ಚಿತ್ರದ ಪ್ರಮೋಶನ್​ಗೆ ಬರುತ್ತಿಲ್ಲ ಎಂದು 'ಉಡುಂಬ' ಚಿತ್ರದ ನಿರ್ಮಾಪಕ ಮಾನಸ ಮಹೇಶ್ ಆರೋಪ ಮಾಡಿದ್ದಾರೆ. ಈ ಸಂಬಂಧ ಫಿಲ್ಮ್​ ಚೇಂಬರ್​​ಗೆ ದೂರು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.

'ಉಡುಂಬ' ನಿರ್ಮಾಪಕ, ನಾಯಕ
author img

By

Published : Aug 18, 2019, 5:45 PM IST

ಚಿತ್ರದ ಪ್ರಮೋಷನ್​​ಗೆ ಬಾರದೆ ಬಿಗ್​​ಬಾಸ್​ ಖ್ಯಾತಿಯ ಸಂಜನಾ ನಮಗೆ ತೀವ್ರ ತೊಂದರೆ ಕೊಡುತ್ತಿದ್ದಾರೆ ಎಂದು 'ಉಡುಂಬ' ಚಿತ್ರದ ನಿರ್ಮಾಪಕ ಮಾನಸ ಮಹೇಶ್ ಹಾಗೂ ಚಿತ್ರದ ನಾಯಕ ಪವನ್ ಗೂಳಿಹಟ್ಟಿ ಆರೋಪಿಸಿದ್ದಾರೆ.

ಸಂಜನಾ ಮೇಲೆ 'ಉಡುಂಬ' ಚಿತ್ರದ ನಿರ್ಮಾಪಕ ಆರೋಪ

'ಉಡುಂಬ' ಚಿತ್ರದಲ್ಲಿ ಬಿಗ್​​​ಬಾಸ್ ಖ್ಯಾತಿಯ ಸಂಜನಾ ಒಂದು ಐಟಂ ಸಾಂಗಿನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಪ್ರಮೋಶನ್​​​​ಗೆ ಬರುತ್ತೇನೆ ಎಂದು ಹಣ ಪಡೆದು ಈಗ ಚಿತ್ರದ ಪ್ರಮೋಶನ್​​ಗೆ ಬಾರದೆ ನಮ್ಮ ಫೋನ್​​ ಕೂಡಾ ರಿಸೀವ್ ಮಾಡದೇ ತೊಂದರೆ ನೀಡುತ್ತಿದ್ದಾರೆ ಎಂದು ನಿರ್ಮಾಪಕ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಸಂಜನಾ ನಮ್ಮ ಚಿತ್ರದ ಹಾಡಿನ ಶೂಟಿಂಗ್ ವೇಳೆಯೂ ಕೊರಿಯೋಗ್ರಾಫರ್ ಹಾಗೂ ಇನ್ನಿತರ ಹುಡುಗರೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಜೊತೆಗೆ ಕಾಸ್ಟ್ಯೂಮ್ ವಿಚಾರವಾಗಿ ನಮ್ಮ ಜೊತೆ ಕ್ಯಾತೆ ತೆಗೆದು ಶೂಟಿಂಗ್ ವೇಳೆ ಸಾಕಷ್ಟು ಕಿರಿಕಿರಿ ಉಂಟು ಮಾಡಿದರು. ಅವರಿಗೆ ಕೊಡಬೇಕಾದ ಸಂಭಾವನೆಯನ್ನು ಒಂದು ಪೈಸೆ ಕೂಡಾ ಇಟ್ಟುಕೊಳ್ಳದೆ ಎಲ್ಲವನ್ನು ಸೆಟಲ್ ಮಾಡಿದ್ದೇನೆ ಎಂದು ನಿರ್ಮಾಪಕ ಆರೋಪಿಸಿದರು.

big boss Sanjana
ಬಿಗ್​ಬಾಸ್ ಖ್ಯಾತಿಯ ಸಂಜನ

ಚಿತ್ರದ ಪ್ರಮೋಷನ್​​​​ಗಾಗಿ ನಾವು 4-5 ರಿಯಾಲಿಟಿ ಶೋಗಳಿಗಾಗಿ ಹೋಗಬೇಕಿತ್ತು. ನಿನ್ನೆ ಕೂಡಾ ನಾವು ಚೆನ್ನೈಗೆ ಒಂದು ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ಹೋಗಬೇಕಿತ್ತು. ಸಂಜನಾ ಖಂಡಿತ ಪ್ರಮೋಶನ್​​ಗೆ ಬರುತ್ತೇನೆ ಎಂದು ಹೇಳಿದ್ದರಿಂದ ರೂಂ ಕೂಡಾ ಬುಕ್ ಮಾಡಿದ್ದೆವು. ಫ್ಲೈಟ್ ಟಿಕೆಟ್ ಬುಕ್ ಮಾಡಿಸುವ ವೇಳೆ ನಮಗೆ ಕೈ ಕೊಟ್ಟಿದ್ದಾರೆ. ಇದರಿಂದ ನಮಗೆ ಬಹಳ ಬೇಸರವಾಗಿದೆ. ಸಂಜನಾ ತಾಯಿಯನ್ನು ಸಂಪರ್ಕಿಸಿದರೆ 'ನನ್ನ ಮಗಳು ನನ್ನ ಮಾತೇ ಕೇಳುವುದಿಲ್ಲ, ಅವಳನ್ನು ನಂಬಿಕೊಂಡು ಹೇಗೆ ಕಾರ್ಯಕ್ರಮ ವ್ಯವಸ್ಥೆ ಮಾಡಿದಿರಿ. ನನಗೂ ಇದಕ್ಕೂ ಸಂಬಂಧವಿಲ್ಲ' ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ. ಈ ವಿಚಾರವಾಗಿ ನಾಳೆ ನಾವು ಸುದ್ದಿಗೋಷ್ಠಿ ನಡೆಸಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುತ್ತೇವೆ ಎಂದು ನಿರ್ಮಾಪಕ ಹೇಳಿದ್ದಾರೆ.

Intro:ಚಿತ್ರದ ಪ್ರಮೋಷನ್ ಗೆ ಬಾರದೆ ಬಿಗ್ ಬಾಸ್ ಬೆಡಗಿ ಸಂಜನಾ ನಮಗೆ ತೀವ್ರ ತೊಂದರೆ ಕೊಡುತ್ತಿದ್ದಾರೆ ಎಂದು ಹುಡುಗ ಚಿತ್ರದ ನಿರ್ಮಾಪಕರಾದ ಮಹೇಶ ಗೋ ನಾಯಕ ಪವನ್ ಗೂಳಿಹಟ್ಟಿ ಆರೋಪಿಸಿದ್ದಾರೆ. ಉಡುಂಬಾಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಸಂಜನಾ ಒಂದು ಐಟಂ ಸಾಂಗಿನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಪ್ರಮೋಶನ್ ಗೆ ಬರುತ್ತೇನೆ ಎಂದು ಹಣ ಪಡೆದು ಈಗ ಚಿತ್ರದ ಪ್ರಮೋಶನ್ ಗೆ ಬಾರದೆ ನಮ್ಮ ಫೋನು ಕೂಡ ರಿಸೀವ್ ಮಾಡದೆ ಯಾವುದೇ ರೀತಿಯಲ್ಲೂ ನಮಗೆ ಸ್ಪಂದಿಸುತ್ತಿಲ್ಲ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಅಲ್ಲದೆ ಸಂಜನಾ ನಮ್ಮ ಚಿತ್ರದ ಹಾಡಿನ ಶೂಟಿಂಗ್ ವೇಳೆಯೂ ಕರಿಯಾ ಗ್ರಾಫರ್ ಜನ ಕುಮಾರ್ ಹಾಗೂ ನಮ್ಮ ಹಾಸನ ಹುಡುಗರ ಮೇಲೆ ಕಿರಿಕ್ ಮಾಡಿದ್ರು. ಜೊತೆಗೆ ಕಾಸ್ಟ್ಯೂಮ್ ವಿಚಾರವಾಗಿ ನಮ್ಮ ಜೊತೆ ಕ್ಯಾತೆ ತೆಗೆದು ಶೂಟಿಂಗ್ ವೇಳೆಯೂ ಸಾಕಷ್ಟು ಕಿರಿಕಿರಿ ಉಂಟು ಮಾಡಿದರು. ಅವರಿಗೆ ಕೊಡಬೇಕಾದ ಸಂಭಾವನೆ ಅನ್ನು ಸಂಪೂರ್ಣವಾಗಿ ಕೊಟ್ಟಿದ್ದೇವೆ. ಶೂಟಿಂಗ್ ಮುಗಿಸಿದ ತಕ್ಷಣ ಅವರ ಅಮ್ಮ ಬಂದು ಸಂಭಾವನೆಯ ಹಣ ಕೇಳಿದರು ನಾವು ಶೂಟಿಂಗ್ ಸ್ಪಾಟ್ ನಲ್ಲಿ ಹಣವನ್ನು ಕೊಟ್ಟಿದ್ದೇವೆ. ಈಗ ನಮ್ಮ ಚಿತ್ರ ಆಗಸ್ಟ್ 23ರಂದು ಬಿಡುಗಡೆಗೆ ಆಗುತ್ತಿದ್ದು.

Body:ಚಿತ್ರದ ಪ್ರಮೋಷನ್ ಗಾಗಿ ನಾವು ನಾಲ್ಕೈದು ರಿಯಾಲಿಟಿ ಶೋ ಗಳಿಗಾಗಿ ಹೋಗಬೇಕಾಗಿತ್ತು. ಅಲ್ಲದೆ ನಿನ್ನೆಯೂ ಕೂಡ ನಾವು ಚೆನ್ನೈ ಗೆ ಒಂದು ರಿಯಾಲಿಟಿ ಶೋಗೆ ಹೋಗಬೇಕಿತ್ತು. ಮೊದಲು ನಾವು ಸಂಜನಾ ಅವರನ್ನು ಕಾಂಟ್ಯಾಕ್ಟ್ ಮಾಡಿದಾಗ ಬರುತ್ತೇನೆ ಚಿತ್ರದ ಪ್ರಮೋಷನ್ ಮಾಡುತ್ತೇನೆ ಎಂದು ನಮಗೆ ಹೇಳಿದ್ರು. ಅವರು ಸಿನಿಮಾದ ಪ್ರಮೋಶನ್ ಗೆ ಬರುತ್ತಾರೆ ಎಂದು ತಿಳಿದು ಕಮಿಟಿ ತಕ್ಷಣ ನಾವು ಚೆನ್ನಾಗೆ ಹೋಗಲು ಫ್ಲೈಟ್ ಟಿಕೆಟ್ ಹಾಗೂ ರೂಮ್ ವ್ಯವಸ್ಥೆ ಮಾಡಿದ್ದೆವು ಆದರೆ. ಎರಡು ದಿನಗಳಿಂದ ಸಂಜನಾ ನಮ್ಮ ಫೋನಿಗೆ ಕೂಡ ಸ್ಪಂದಿಸುತ್ತಿಲ್ಲ ಎಂದು ನಿರ್ಮಾಪಕರು ಬೇಸರದಿಂದ ಹೇಳಿದರು. ಈ ವಿಚಾರವಾಗಿ ಅವರಮ್ಮ ಕೂಡ ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನನ್ನ ಮಗಳು ಹೇಳಿರುವುದು ನಾನಲ್ಲ ನೀವುಂಟು ನನ್ನ ಮಗಳು ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ ಎಂದು ನಿರ್ಮಾಪಕ ಮಹೇಶ್ ಗಂಭೀರವಾಗಿ ಆರೋಪ ಮಾಡಿದ್ದರು. ಅಲ್ಲದೆ ನಾಳೆ ಈ ವಿಚಾರವಾಗಿ ಪತ್ರಿಕಾಗೋಷ್ಠಿ ಕರೆದು ನಂತರ ವಾಣಿಜ್ಯ ಮಂಡಳಿಗೂ ದೂರು ನೀಡುವುದಾಗಿ ನಿರ್ಮಾಪಕರು ತಿಳಿಸಿದರು.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.