ETV Bharat / sitara

'ಯುವರತ್ನ' ಚಿತ್ರೀಕರಣ ಶುರುವಾಗಿ ಎರಡು ವರ್ಷ; ಸಿನಿ ಪ್ರಿಯರ ಕುತೂಹಲ - ಯುವರತ್ನ ಸಿನಿಮಾ ಸುದ್ದಿ

ಯುವರತ್ನ ಚಿತ್ರವು 2018ರ ಡಿಸೆಂಬರ್ 12ರಂದು ಪ್ರಾರಂಭವಾಗಿತ್ತು. ಅಲ್ಲಿಗೆ ಈ ಚಿತ್ರ ಶುರುವಾಗಿ ಎರಡು ವರ್ಷಗಳೇ ಆಗಿವೆ.

Two years have passed since Yuvarat's cinema started
ಎರಡು ವರ್ಷವಾಯ್ತು `ಯುವರತ್ನ' ಚಿತ್ರ ಪ್ರಾರಂಭವಾಗಿ
author img

By

Published : Dec 13, 2020, 3:54 PM IST

ಒಂದು ಚಿತ್ರ ಬಿಡುಗಡೆಯಾಗಿ ಅಷ್ಟು ವರ್ಷ ಆಯ್ತು, ಇಷ್ಟು ವರ್ಷ ಆಯ್ತು ಎಂದೆಲ್ಲಾ ಸಂಭ್ರಮಪಡುವುದು ಹೊಸ ಟ್ರೆಂಡ್. ಇತ್ತೀಚೆಗಷ್ಟೇ ಕುಮಾರ್ ಗೋವಿಂದ್ ಅಭಿನಯದ `ಅನುರಾಗ ಸಂಗಮ' ಚಿತ್ರವು 25 ವರ್ಷಗಳನ್ನು ಪೂರೈಸಿತ್ತು. ಇನ್ನು ಇದೇ ವರ್ಷ `ಓಂ' 25 ವರ್ಷಗಳನ್ನು ಮುಗಿಸಿದರೆ, `ಸಂಸ್ಕಾರ' ಬಿಡುಗಡೆಯಾಗಿ 50 ವರ್ಷಗಳಾಗಿವೆ. ಈಗ್ಯಾಕೆ ಈ ವಿಷಯ ಎಂದರೆ, ಪುನೀತ್ ಅಭಿನಯದ `ಯುವರತ್ನ' ಚಿತ್ರಕ್ಕೆ ಇದೀಗ ಎರಡರ ಸಂಭ್ರಮ.

`ಯುವರತ್ನ' ಬಿಡುಗಡೆಯೇ ಆಗಿಲ್ಲ, ಹಾಗಿರುವಾಗ ಸಂಭ್ರಮ ಎಲ್ಲಿ ಬಂತು ಎಂಬ ಪ್ರಶ್ನೆ ಸಹಜ. ಇಲ್ಲಿ ಹೇಳುತ್ತಿರುವುದು ಬಿಡುಗಡೆಯ ವಿಷಯವಲ್ಲ, ಪ್ರಾರಂಭದ ವಿಷಯದ ಬಗ್ಗೆ. `ಯುವರತ್ನ' ಚಿತ್ರವು 2018ರ ಡಿಸೆಂಬರ್ 12ರಂದು ಪ್ರಾರಂಭವಾಗಿತ್ತು. ಅಲ್ಲಿಗೆ ಈ ಚಿತ್ರ ಶುರುವಾಗಿ ಎರಡು ವರ್ಷಗಳೇ ಆಗಿವೆ. ಇನ್ನು ಅದಕ್ಕೂ ಒಂದು ವರ್ಷದ ಮುಂಚಿನಿಂದ ಚಿತ್ರದ ಕೆಲಸಗಳು ನಡೆಯುತ್ತಿದ್ದು, ಒಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್.

ಓದಿ : ಬರಲಿದೆ ಮತ್ತೊಂದು ಕ್ರೀಡಾ ಬಯೋಪಿಕ್: ಚೆಸ್​ ದಂತಕತೆಯ ಸಿನಿಮಾಗೆ ಬಾಲಿವುಡ್​​ ಸಿದ್ಧತೆ

ಈ ಕುರಿತು ಟ್ವೀಟ್ ಮಾಡಿರುವ ಸಂತೋಷ್, `ಯುವರತ್ನ' ಚಿತ್ರೀಕರಣ ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಇದೊಂದು ಅದ್ಭುತ ಜರ್ನಿ. ಈ ಪ್ರಯಾಣದಲ್ಲಿ ಜೊತೆಯಾದ ಪುನೀತ್ ರಾಜಕುಮಾರ್, ಹೊಂಬಾಳೆ ಫಿಲಂಸ್‍ನ ವಿಜಯ್‍ಕುಮಾರ್ ಕಿರಗಂದೂರು, ತಮನ್ ಮುಂತಾದವರಿಗೆ ಧನ್ಯವಾದಗಳು. ಸದ್ಯದ ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಚಿತ್ರದ ಕೆಲಸಗಳು ಭರದಿಂದ ಸಾಗಿದ್ದು, ಸದ್ಯದಲ್ಲೇ ಮುಗಿಯಲಿದೆ. ಈ ಚಿತ್ರವು ಅಭಿಮಾನಿಗಳಿಗೆ, ಫ್ಯಾಮಿಲಿಯವರಿಗೆ ಹಬ್ಬವಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ಸಂತೋಷ್ ಹೇಳಿಕೊಂಡಿದ್ದಾರೆ.

ಅಂದಹಾಗೆ, `ಯುವರತ್ನ' ಚಿತ್ರವು ಕನ್ನಡವಲ್ಲದೆ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗೆ ಚಿತ್ರದ `ಪವರ್ ಆಫ್ ಯೂಥ್' ಎಂಬ ಹಾಡನ್ನು ಎರಡೂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಪುನೀತ್‍ಗೆ ನಾಯಕಿಯಾಗಿ ಸಾಯೇಷಾ ಸೆಹಗಲ್ ನಟಿಸಿದ್ದು, ದಿಗಂತ್, ಧನಂಜಯ್, ಸೋನು ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ 2021ರ ಯುಗಾದಿಗೆ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.