ಬಿಗ್ ಬಾಸ್ ಮನೆಯಲ್ಲಿ ಹೊಸ ಬೆಳವಣಿಗೆಯೊಂದು ನಡೆಯುತ್ತಿದ್ದು, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಇಬ್ಬರು ಸ್ಪರ್ಧಾಳುಗಳು ಎಂಟ್ರಿ ಪಡೆದಿದ್ದಾರೆ. ಇಬ್ಬರು ನಟಿಯರು ಮನೆಯನ್ನು ಪ್ರವೇಶಿಸುವ ಮೂಲಕ ಮಂಜು ಪಾವಗಡ ಬೇಡಿಕೆಯನ್ನು ಬಿಗ್ ಬಾಸ್ ಪುರಸ್ಕರಿಸಿದ್ದಾರೆ.
ಈಗಾಗಲೇ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಪ್ರವೇಶ ಪಡೆದಿದ್ದರು. ಇದೀಗ ಇನ್ನಿಬ್ಬರು ನಟಿಯರ ಎಂಟ್ರಿಯಾಗಿದೆ. ಕಳೆದ ವಾರದ ಕಿಚ್ಚ ಸುದೀಪ್ ಎಪಿಸೋಡ್ನಲ್ಲಿ ಸುದೀಪ್ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಸೂಚನೆ ನೀಡಿದ್ದರು. ಅದರಂತೆ ಈ ವಾರವೇ ಇಬ್ಬರು ಮಹಿಳಾ ಅಭ್ಯರ್ಥಿಗಳು ಎಂಟ್ರಿ ನೀಡಿದ್ದಾರೆ.
ವೈದೇಹಿಯವರ ಕಾದಂಬರಿ ಆಧಾರಿತ ಅಮ್ಮಚಿ ಎಂಬ ನೆನಪು ಸಿನಿಮಾದಲ್ಲಿ ನಟಿಸಿದ್ದ ವೈಜಯಂತಿ ಅಡಿಗ ಎರಡನೇ ವೈಲ್ಡ್ ಕಾರ್ಡ್ ಎಂಟ್ರಿ ಪಡೆದರೆ, ಪ್ರೀತಿಯಿಂದ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರಿಯಾಂಕಾ ಅವರದ್ದು 3ನೇ ಎಂಟ್ರಿಯಾಗಿದೆ.
![actresse Vaijayanti](https://etvbharatimages.akamaized.net/etvbharat/prod-images/kn-bng-02-bbk8-wildcard-photo-ka10018_08042021220509_0804f_1617899709_361.jpg)
ವೈಜಯಂತಿ ಅಡಿಗ ಅವರು ಬೆಂಗಳೂರಿನಲ್ಲಿ ಹಲವೆಡೆ ರೆಸ್ಟೋರೆಂಟ್ಗಳನ್ನು ನಡೆಸುತ್ತಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಧಾರಾವಾಹಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವಾರ ಕ್ಯಾಪ್ಟನ್ಸಿಗಾಗಿ ನಡೆದ ಟಾಸ್ಕ್ನಲ್ಲಿ ಪ್ರಶಾಂತ್ ಸಂಬರ್ಗಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
![-actresse priyanka](https://etvbharatimages.akamaized.net/etvbharat/prod-images/kn-bng-02-bbk8-wildcard-photo-ka10018_08042021220509_0804f_1617899709_1079.jpg)
ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಹಾಗೂ ಮಂಜು ನಡುವೆ ಮಾವ ಎಂದು ಕರೆಯದಂತೆ ದೊಡ್ಡ ಜಗಳವೇ ನಡೆದಿತ್ತು. ಇಂದು ಮಂಜು, ಪ್ರಶಾಂತ್ ಬಳಿ ಕ್ಷಮೆ ಕೇಳಿದ್ದರು.
ಪ್ರಶಾಂತ್ ಕ್ಯಾಪ್ಟನ್ ಆಗಿ ಆಯ್ಕೆಯಾದ ನಂತರ ಮಂಜು ಮಾವ ಎಂದು ಕರೆಯದೆ, ಪ್ರಶಾಂತ್ ಅಂತಲೇ ಕರೆಯಲು ಆರಂಭಿಸಿದ್ದಾರೆ.