ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಹಾಲಿವುಡ್ ಗಾಯಕಿ ರಿಹಾನ್ನ ಟ್ವೀಟ್ ಮಾಡಿದ್ದು, ಈ ಟ್ವೀಟ್ಗೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಇದೇ ಹಿನ್ನೆಲೆಯಲ್ಲಿ ಬಾಲಿವುಡ್, ಕ್ರೀಡಾ ಸೆಲೆಬ್ರಿಟಿಗಳು ಕೂಡ ಟ್ವೀಟ್ನಲ್ಲಿ ಹರಿಹಾಯ್ತಿದ್ದಾರೆ.
ತಾಪ್ಸಿ ಪನ್ನೂ ಟ್ವೀಟ್ ಒಂದನ್ನು ಮಾಡಿದ್ದು, ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಒಡೆಯುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವುದಾದರೆ, ನೀವು ನಿಮ್ಮ ನಂಬಿಕೆಗಳನ್ನು ಗಟ್ಟಿಮಾಡಿಕೊಳ್ಳಬೇಕಿದೆಯೇ ಹೊರತು ಬೇರೆಯವರಿಗೆ ಆದರ್ಶದ ಪಾಠ ಮಾಡುವ ಶಿಕ್ಷಕರಾಗಬಾರದು ಎಂದಿದ್ದರು.
ಇದನ್ನೂ ಓದಿ : "ವಿದೇಶಿ ಅಕ್ಷಯ್ ಭಾರತದ ಆಂತರಿಕತೆ ಬಗ್ಗೆ ಮೂಗು ತೂರಿಸುವುದೇಕೆ": ಟ್ರೋಲ್
ಆದ್ರೆ ತಾಪ್ಸಿ ವಿರುದ್ಧ ಕಂಗನಾ ರಣಾವತ್ ಮೂದಲಿಕೆಯ ಟ್ವೀಟ್ ಮಾಡಿದ್ದು, ಆ ಟ್ವೀಟ್ ಟ್ವಿಟ್ಟರ್‌ನ ನಿಯಮಗಳಿಗೆ ಬಾಹಿರವಾಗಿದ್ದ ಕಾರಣದಿಂದ ಟ್ವಿಟ್ಟರ್ನಿಂದ ತೆಗೆಯಲಾಗಿದೆ. ಆದ್ರೂ ಕೂಡ ಕಂಗನಾ ತಾಪ್ಸಿ ಬಗ್ಗೆ ಮಾಡಿದ್ದ ಟ್ವೀಟ್ ಸ್ಕ್ರೀನ್ ಶಾಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕಂಗನಾ ಟ್ವೀಟ್ನಲ್ಲಿ ಏನಿತ್ತು?
'ಬಿ ಗ್ರೇಡ್ ಜನರ ಬಿ ಗ್ರೇಡ್ ಯೋಚನೆಗಳು. ಪ್ರತಿಯೊಬ್ಬನೂ ಆತನ ನಂಬಿಕೆ, ತಾಯಿನಾಡು ಹಾಗೂ ಕುಟುಂಬದ ಬೆಂಬಲಕ್ಕೆ ಎದ್ದು ನಿಲ್ಲಬೇಕು. ಇದೇ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಮತ್ತು ಧರ್ಮ ಆಗಿರುತ್ತದೆ. ಉಚಿತ ಫಂಡ್‌ಗಳನ್ನು ತಿನ್ನುವವರಾಗಬೇಡಿ. ಇದಕ್ಕಾಗಿಯೇ ನಾನು ಇವರನ್ನು ಬಿ ಗ್ರೇಡ್ ಎಂದು ಕರೆಯುವುದು, ಇಂಥಹವರನ್ನು ನಿರ್ಲಕ್ಷಿಸಿ' ಎಂದು ಕಂಗನಾ ಟ್ವೀಟ್ ಮಾಡಿದ್ದರು.